ಇದು ಅಖಂಡ ಇರು ಅಖಂಡ ಅಖಂಡ! ಖಂಡನ ಮಂಡನ ಬರಿ ವಾಗ್ದಂಡನ ಇರುವುದನರಿ, ಅರಿದೊಲು ಹರಿ ಈ ಪರಿ ಪರಿಪೂರ್ಣ ವ್ಯಾಕರಣದ ಪ್ರಕ್ರಿಯೆಯೋ ಬರಿ ಮಾತಿನ ಚೂರ್ಣ ತರ್ಕದ ಯುಕ್ತಿಯ ಕುಹಕವು ಅವಿವೇಕದಜೀರ್ಣ ಸಮದಂಡಿಗೆ ಒಳಹೊರಗೂ ಆಗುವದುತ್ತೀರ್ಣ. ಮನದಾ ಮಂಡಿಗೆಯಿಂದಲೆ ಆದೀತೆ ಪ್ರಸ್ತ? ಪ್ರಾಣದ ನಿತ್ರಾಣದ ಪರಿ ಎಂದಿಗು ಸಂತ...

ಎಲ್ಲಿದ್ದರೇನು ಹೇಗಿದ್ದರೂ ಏಕಾಂಗಿ ನಾನು ಮುಚ್ಚಿಡಲಾರೆನು, ಬಿಚ್ಚಿಡಲಾರೆನು ಭಾವನೆಗಳ ಮಹಾಪೂರ ಕುಳಿತಿರಲಿ ಮಲಗಿರಲಿ ಬಂದು ಮುತ್ತುವಿರಿ ಒಗಟಾಗಿ ನಿಂದು ಬರುವಿರೇಕೆ ಮನದ ಗೂಡಿನೊಳಗೆ ಕುಣಿಯುವಿರೇಕೆ ಪರದೆಯೊಳಗೆ ಕಾಡುವಿರೇಕೆ ಕನಸುಗಳ ಕತ್ತರಿಸುವ...

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ ದಿತಿಗೆಟ್ಟೆ ನಾನು ಅದರಿಂದ ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ ಕಪಿಲ...

ಮಿಂಚು ಬಾರೆ ಮಿಂಚು ರಾಣಿ ! ಮುದ್ದು ಮೊಗವ ತೋರೆ ಜಾಣಿ !! ಮುಗಿಲಿನಲ್ಲಿ ಮಲಗಿಕೊಂಡು ಮೋಡಗಳಲಿ ಮುಸುಕಿಕೊಂಡು ಸೂರ್‍ಯನಿಲ್ಲದ ಸಮಯದಲ್ಲಿ ಕತ್ತಲೇರುವ ಕಾಲದಲ್ಲಿ ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ ! ಕೈಯಚಾಚಲು ಕಾಲುತೆಗೆಯುಸಿ ! ಮಿಂಚು ಬಾರೆ ಮಿ...

ಗೆದ್ದವಳು ನೀನು ಲಿಂಗಮುಖದಿಂದ ಮನದೊಳು ಭಾವ ಲಿಂಗವ ಅರಳಿಸಿ ಉಡುತಡಿಯಿಂದ ಕದಳಿಯವರೆಗೆ ಹರಡಿ ಹಾಸಿದ ಜ್ಞಾನ ಬೆಳದಿಂಗಳು ಧರೆಯಲ್ಲಾ ಪಸರಿಸಿ ಶರಣಸತಿ ನೀನು. ಜಗ ನಂಬಿದ ಲಿಂಗದ ಘನವ ನಿಮ್ಮ ನೆರೆ ನಂಬಿದ ಸದ್ಭಕ್ತರಿಗೆ ತೋರಿ ಉಭಯ ಸಂಗವ ಅರಿಯದೆ ಪರಿ...

ಬಾಳಿನ ಬದುಕಿಗೆ ಆಸೆಯ ಕೊಟ್ಟವ ನೇಸರ ಬದುಕಿಗೆ ಬಣ್ಣ ಕೊಟ್ಟವ ಅವನಾರೇ ಗೆಳತಿ ಅವನಾರೇ ಆಸರೆ ಕೊಟ್ಟ ಬಂಧ ಬಂಧನ ನಡುವೆ ಪ್ರೀತಿಯ ನೇಯ್ಗೆ ನೈಯ್ದವ ಅವನಾರೇ ಗೆಳತಿ ಅವನಾರೇ ಸೆರೆಯಾದ ಪ್ರೀತಿಗೆ ಚೈತನ್ಯ ತುಂಬಿ ಸೋಬಾನೆ ಹಾಡಿಗೆ ಕೆಳೆಯ ಕಟ್ಟಿಹ ಅವನಾ...

ಸನ್ಯಾಸಿಗಳಿಗಷ್ಟೆ ಅಲ್ಲ ದೇವರ ದರುಶನ ಗೃಹಸ್ಥರಿಗೂ ಅವನು ಕಾಣುತ್ತಾನೆ ಅಚಲ ಶೃದ್ಧಾಭಕ್ತಿ ವ್ಯಾಕುಲತೆಯೊಂದೇ ಕಂಡು ತನ್ನ ರೂಪು ತೋರುತ್ತಾನೆ ಭಗವಾನ ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದರು ಈ ಭೂಜನರಿಗೆ ತಾವು ಸಂತ ಸಜ್ಜನರ ಸಹವಾಸ ಏಕಾಂತ ನಿರ್ಜನ ಸ...

ಚಂಚಲನೇತ್ರರಿಗೆ ಕಚೇರಿಯಿಂದ ನಿರೂಪ ಬಂದಾಗ–ಇದೆಂಥಾ ಕಾಟ! ಈ ವೈರಿಯ ದೆಸೆಯಿಂದ ಅರೆಘಳಿಗೆಯಾದರೂ ಕರಕರೆ ತಪ್ಪುವುದಿಲ್ಲವೆಂದು ವೃಥೆ ಪಡುವುದನ್ನು ನೋಡಿ–ವೆಂಕಟಪತಿಯು, ಪರ್ವಾ ಇಲ್ಲ. ತಾನು ಅದರ ವೃವಸ್ಥೆ ಮಾಡುವುದಾಗಿ ಧೈರ್ಯಹೇಳಿ, ಆ...

ಅಗ್ನಿರಾಜ: ಬೆಂಕಿ ನಿಲುವಂಗಿ ತೊಟ್ಟುಕೊಂಡು ಬುವಿಯಿಂದ ಬಂದ ಜೀವ ಸಪ್ತಸ್ವರ್‍ಗಗಳ ಸುಪ್ತ ಮೌನವನು ದಾಟಿಕೊಂಡು ಯಾವ? ನೀನು ಏನು ಅಧ್ಯಾತ್ಮದೌರಸನೊ? ಅಭವ ಸ್ವಯಂಭವನು. ಪರಂಧಾಮದಾ ಅತಿಥಿಯೇನು? ಪೌರಾಣ ಕಾಲದವನು. ಮನುಕುಲ ದೂತ: ಮಾನವ್ಯಕುಲದ ಹರಿಕಾರ...

ಗಝಲ್ ೧ ಅವನಿಗಾಗಿಯೆ ಬವಣಿಯೊಂದುತ ಎದೆಯ ಕುದಿಯೊಳು ಕಾಯುತ, ಸವಿಯ ಕಾಣದೆ ಬಾಳಿನಲಿ ಬಿಸು- ಸುಯಿಲ ಬೇಗೆಗೆ ಬೇಯುತ ಸವೆಯುತಿಹೆ ನಾನಿಲ್ಲಿ….! ಸವೆಯುತಿಹೆ ನಾನಿಲ್ಲಿ-ಕತ್ತಲು- ಕವಿದ ಕಿರುಮನೆಯಲ್ಲಿ. ೨ ಇಲ್ಲಿ ಕತ್ತಲು ಕವಿದ ಕಿರುಮನೆ- ಯಲ್...

ಪ್ರೀತಿಸುವವರ ಕಂಡು ಮೃಗಗಳಾಗ ಬೇಡಿ| ಪ್ರೇಮಿಗಳ ಹೃದಯ ನೋಯಿಸಬೇಡಿ| ನಿಮಗೂ ಹೃದಯವಿದೆ ಎಂದು ತಿಳಿದು ಪ್ರೀತಿಸುತಿರುವೆವು ನಾವು|| ಲೋಕದ ಅಂತರಗಳ ಅರಿಯದೆ ಪ್ರೀತಿಸುವೆವು ನಾವು| ಸಮಾನ ಹೃದಯಿಗಳಾದ ನಾವು ಜಗದ ಅಹಂ ಅಂತಸ್ತುಗಳ ಅರಿಯೆವು| ನಮ್ಮ ಅಂತ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...