ದೇವರು ಎಲ್ಲರಿಗಾಗಿ

ಸನ್ಯಾಸಿಗಳಿಗಷ್ಟೆ ಅಲ್ಲ ದೇವರ ದರುಶನ
ಗೃಹಸ್ಥರಿಗೂ ಅವನು ಕಾಣುತ್ತಾನೆ
ಅಚಲ ಶೃದ್ಧಾಭಕ್ತಿ ವ್ಯಾಕುಲತೆಯೊಂದೇ
ಕಂಡು ತನ್ನ ರೂಪು ತೋರುತ್ತಾನೆ

ಭಗವಾನ ಶ್ರೀ ರಾಮಕೃಷ್ಣ ಪರಮಹಂಸರು
ಹೇಳಿದರು ಈ ಭೂಜನರಿಗೆ ತಾವು
ಸಂತ ಸಜ್ಜನರ ಸಹವಾಸ ಏಕಾಂತ
ನಿರ್ಜನ ಸ್ಥಳಗಳಲಿ ಜಪಿಸಿ ನೀವು

ನಿಮ್ಮದೆಲ್ಲವ ಅವಗೆ ಅರ್ಪಿಸಬೇಕು
ಅಹಂಕಾರ ಸ್ವಾರ್ಥಗಳು ತೊಡೆಯಬೇಕು
ಪ್ರಪಂಚದ ವ್ಯಾಮೋಹ ಮರೆಯಬೇಕು
ಪಾರಮಾರ್ಥ ನಿತ್ಯವೂ ಸಾಧಿಸಬೇಕು

ಸಂತತಿ ಪಡೆದರಾಯ್ತು ದಂಪತಿಯರು
ಅಣ್ಣ ತಂಗಿಯರಂತೆ ಬಾಳಬೇಕು
ಮಾಡುವ ಪ್ರೀತಿ ಕಾರ್ಯಗಳಲ್ಲೂ
ದೇವರಿಗೆ ಧ್ಯಾನಿಸಿ ಬೇಡಬೇಕು

ಕಂಗಳು ಅತ್ತು ತಾನು ಮೊರೆಯಿಡಬೇಕು
ದರ್ಪಣದ ಹಾಗೆ ಸ್ವಚ್ಛ ಹೃದಯಬೇಕು
ಆಗ ಪರಮಾತ್ಮನೆಂಬ ಚುಂಬಕವು
ಮಾಣಿಕ್ಯ ವಿಠಲನಾಗಿ ನಲಿಯಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೯
Next post ಅವನಾರೇ ಗೆಳತಿ ಅವನಾರೇ

ಸಣ್ಣ ಕತೆ

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…