ವಾಗ್ದೇವಿ – ೨೯

ವಾಗ್ದೇವಿ – ೨೯

ಚಂಚಲನೇತ್ರರಿಗೆ ಕಚೇರಿಯಿಂದ ನಿರೂಪ ಬಂದಾಗ–ಇದೆಂಥಾ ಕಾಟ! ಈ ವೈರಿಯ ದೆಸೆಯಿಂದ ಅರೆಘಳಿಗೆಯಾದರೂ ಕರಕರೆ ತಪ್ಪುವುದಿಲ್ಲವೆಂದು ವೃಥೆ ಪಡುವುದನ್ನು ನೋಡಿ–ವೆಂಕಟಪತಿಯು, ಪರ್ವಾ ಇಲ್ಲ. ತಾನು ಅದರ ವೃವಸ್ಥೆ ಮಾಡುವುದಾಗಿ ಧೈರ್ಯಹೇಳಿ, ಆಂಜನೇಯಾಲ ಯಕ್ಷೆ ತೆರಳಿದನು. ಗಂಗಾಬಾಯಿಯೂ ಅವಳ ಅಳಿಯನೂ ತಮಗೆ ಬಂದ ನಿರೂಪಗಳನ್ನು ಆಚಾರ್ಯಗೆ ತೋರಿಸಿ, ಕಚೇರಿಬಾಗಿಲು ಕಾಯುವ ಸಂಕಷ್ಟ ಬಂದೊದಗಿತೆಂದರು. ಭಯಪಡಬೇಡಿರೆಂದು ಅವರಿಗೆ ಸಮಾಧಾನ ಹೇಳ್ಕಿ, ವೇಷ್ಯಾರನ ಮನೆಗೆ ಬಂದನು. ಉಪ್ಪರಿಗೆಯ ಮೇಲೆ ಇಬ್ಬರೂ ಅಂತರಂಗ ಮಾತಾಡಲಿಕ್ಕೆ ಕೂತರು.

ಪೇಷ್ಟ್ರಾರ–“ಆಚಾರ್ಯರೇ! ಯಾಕೆ ದಯಮಾಡಿಸೋಣಾಯಿತೋೇ ತಿಳಿಯದು.?

ವೆಂಕಟಪತಿ-.-“ಶ್ರೀಪಾದಂಗಳವರಿಗೆ ಒಂದು ನಿರೂಪ ಬಂದಿದೆ.

ಪೇಷ್ಕಾರ–“ಏನು ಮಾಡಲಿ? ಕಾಯಿದೆ ತಪ್ಪಿ ನಡೆಯಬಹುದೇ?”

ವೆಂಕಟಪತಿ–“ಮುಖ್ಯ ಸತ್ಕಾಸತ್ಯ ವಿಚಾರಮಾಡಬೇಕು, ಮಠದ ಮೇಲೆ ಅಭಿಮಾನನಿಡಬೇಕು. ಪೋಕರಿಗಳ ಪಂಥ ಮೇಲಾದರೆ ಸಾಧುಸಜ್ಜ ನರು ರಾಜ್ಯದಲ್ಲಿ ಬದುಕಿಕೊಂಡಿರುವುದು ಪ್ರಯಾಸವೇ. ಹೆಚ್ಚಿಗೆ ಅರಿಕೆ ಮಾಡಿಕೊಳ್ಳಲಕ್ಕೆ ಶಕ್ತನಲ್ಲ.”

ಫೇಷ್ಯ್ಯಾರ–ನನ್ನಂದ ತಮಗೇನಾಗಬೇಕು?”

ವೆಂಕಟಪತಿ- -“ಶ್ರೀಪಾದಂಗಳವರಾಗಲೀ ಆ ಹೆಂಗಸಾಗಲೀ: ಕಚೇ ರಿಗೆ ಬರಬೇಕೆಂಬ ಒತ್ತಾಯವಿರಬಾರದು.”

ಪೇಷ್ಕಾರ–“ನಾನು ವಕೀಲಿ ಮಾಡಿದೆನೆಂಬ ಅಪವಾವ ಬಂದರೋ?”

ವೆಂಕಟಪತಿ–“ಹೆಂಡತಿಗೆ ಹೊಡೆಯುವುದಕ್ಕೆ ನೆವನ ಹುಡುಕುವವ ನಿಗೆ ಮೊಸರಲ್ಲಿ ಕಲ್ಲು ಬಂತೆಂಬ ಗಾದೆಯದೆ.?

ಪೇಷ್ಕಾರ–“ನಾನು ಒಂದುವೇಳೆ ನಿಮ್ಮ ಅಪೇಕ್ಷೆಯಂತೆ ನಡ ಕೊಂಡರೆ ಕಾರಭಾರಿಗಳು ನನ್ನ ಮೇಲೆ ಜರಿದುಬಿದ್ದರೋ??

ವೆಂಕಟಪತಿ–“ಛೋಟಾ ಕಿತಾಬಿನ ಪ್ರಕರಣಗಳಷ್ಟೇ. ತಮ್ಮ ಅಧಿ ಕಾರದೊಳಗಿರೋದು ಕಾರ್ಬಾರಿ. ತಮ್ಮ ಸ್ವತಂತ್ರದ ಸಣ್ಣ ಸಣ್ಣದಾವೆಗಳಲ್ಲಿ ಪ್ರವೇಶಿಸುವದುಂಟೀ? ಸುಮ್ಮಗೆ ಬರೇ ನೆವನಗಳನ್ನು ತಾವು ಹೇಳುವುದಾ ದರೆ ನಾನು ವೃರ್ಥ ತಮ್ಮ ಸಮಯ ಹಾಳುಮಾಡುವದ್ಯಾಕೆ? ಅಪ್ಪಣೆ ಯಾಗಲಿ ಹೋಗುತ್ತೇನೆ. ಪ್ರೀತಿ ಇರಲಿ. ದೇವರು ಮಾಡಿದ್ದು ಆಗುತ್ತದೆ.”

ಪೇಷ್ಕಾರ–“ಹಾಗೆ ಸಿಟ್ಟು ಮಾಡಬಾರದು; ಈಗಿನ ದರಬಾರೂ ಈಗಿನ ಕಾನೂನು ಬಹು ನಾಜೂಕಾಗಿವೆ. ಎಷ್ಟು ಜಾಗ್ರತೆಮಾಡಿದರೂ ಸಾಕಾಗುವದಿಲ್ಲ. ರಾಜರ ಅವಕರಣಕ್ಕೆ ಒಳಗಾದರೆ ಅನ್ನಕ್ಕೆ ಮೋಸ ಬಾರದೇ?”

ವೆಂಕಟಪತಿ–“ಇಷ್ಟು ಸಣ್ಣ ವಿಷಯದಲ್ಲಿ ಅಷ್ಟು ದೊಡ್ಡ ಯೋಚನೆ ಅಗತ್ಯವೇನು? ತಮಗೆ ಒಂದು ಮಾತಿನವಾಶಿ ಬರುವ ಹಾಗಿನ ಕೃತ್ಯ ನಮ್ಮ ಉದ್ದಿಶ್ಯಮಾಡುವುದು ಯೋಗ್ಯವಲ್ಲ. ನಾಳೆಗೆ ನಿಶ್ಚಯಿಸಿದ ಪ್ರಕರಣವನ್ಕು ಸ್ವಲ್ಪ ಮುಂದರಿಸಿ ಇಡಲಿಕ್ಕೆ ಅಪ್ಪಣೆಮಾಡಿಟ್ಟರೆ ನಾವು ರಾಜಾಸ್ಥಾನಕ್ಕೆ ಹೋಗಿ ಕಿರೇ ದಿವಾನರಿಂದ ನಮ್ಮ ಅಪೇಕ್ಷೆಯನ್ನು ಪೂರೈಸಿಕೊಳ್ಳುವ ಪ್ರಯತ್ನ ನಡಿಸುತ್ತೇನೆ.

ಇಷ್ಟರಲ್ಲಿ ತನ್ನ ಸಂಭಾಷಣೆಯನ್ನು ನಿಲ್ಲಿಸಿಬಿಟ್ಟು, ವೆಂಕಟಪತಿಆಚಾ ರ್ಯನು ಎದ್ದು, ಬಲಕೈಯ ಎರಡು ಬೆರಳುಗಳನ್ನು ಎತ್ತಿ ಸಂಜ್ಞೆ ತೋರಿಸಿ ದ್ವಲ್ಲಿ ಪೇಷ್ಕಾರನು ತುಟಿಗಳನ್ನು ಅಮರಿಸಿ, ತಲೆಯನ್ನು ಅಲುಗಾಡಿಸು ವುದರ ದ್ವಾರ ಸಾಲದೆಂಬ ಭಾವವನ್ನು ತೋರಿಸಿದನು. ಮತ್ತೆಷ್ಟು ಬೇಕೆಂದು ತಿಳಿಯುವದಕ್ಟೋಸ್ಟರ ಆಚಾರ್ಯನು ಕೈಮುಷ್ಟಿ ಆಡಿಸುವುದನ್ನು ನೋಡಿ, ಪೇಷ್ಕಾರನು ತನ್ನ ಐದು ಬೆರಳುಗಳನ್ನು ಬಿಡಿಸಿತೋರಿಸಿದನು. ಆಗ ಆಚಾ ರ್ಯನು ಮೂರು ಬೆರಳುಗಳನ್ನು ಎತ್ತಿತೋರಿಸಿ-“ಇಷ್ಟವಿದ್ದರೆ ಹೇಳಿ, ಇಲ್ಲ ವಾದರೆ ನಡೆಯುತ್ತೇನೆ” ಎಂದನು. ಪೇಷ್ಕಾರಗೆ ಆಶೆ ಬಿಡವಲ್ಲದು. ಮೂರು ಬೆರಳುಗಳನ್ನೆತ್ತಿ ನಾಲ್ಕನೇ ಬೆರಳಿನ ನಡುವಿಗೆ ಇನ್ನೊಂದು ಕೆಯ ತರ್ಜನಿ ಬೆರಳನ್ನು ಅಡ್ಡಹಿಡಿದು ಮೂರುವರೆ ಎಂಬ ಸಂಕೇತವನ್ನು ತೋರಿಸಿದನು. ಆಗೈ ಒಪ್ಪಿಗೆ ಸಿಕ್ಕಿತು. “ಮುನ್ನೂರ ಐವತ್ತು, ಮತ್ತೆ ಮೂರು ಸಾವಿರದ ಐನೂರೆಂದು ಜಗಳ ಮಾಡುವ ಹಾಗಾಗಬಾರದು; ತಿಳಿದಿರಬೇಕು ಎಂದು ವೆಂಕಟಪತಿ ಆಚಾರ್ಯನು ಸಣ್ಣ ಸ್ಪರದಿಂದ ಪೇಷ್ಕಾರನ ಕಿವಿಯಲ್ಲಿ ಹೇಳಿ, ಹೊರಟನು. ಚಂಚಲನೇತ್ರರು ತನ್ನ ಪಾರುಪತ್ಯಗಾರನ ಚಾತು ರ್ಯಕ್ಕೆ ಮರುಳಾದರು.

ಮರುದಿನ ಮಧ್ಯಾಹ್ನ ರಾಘವೇಂದ್ರಉಪಾಧ್ಯನು ಪೇಷ್ಕಾರನ ಮುಂದೆ ನಿಂತಾಗ ಅವನ ವಾಙ್ಮೂಲವನ್ನು ಗುಮಾಸ್ತನು ಬರಕೊಂಡನು. ಅವನ ಹೇಳಿಕೆಯಿಂದ ಗಂಗಾಬಾಯಿಯ ಅಳಿಯನ ಮೇಲೆ ಯಾವುದೊಂದು ಅಪರಾಧ ಸ್ಥಾಪನೆಯಾಗುವ ಸಂಭವ ತೋರಿಬಾರಧೆ, ಅವನನ್ನು ವಿಮೋಚನೆ ಮಾಡೋಣಾಯಿತು. ಗಂಗಾಬಾಯಿಗೆ ಕಚೇರಿಗೆ ಬರಲಿಕ್ಕೆ ಒತ್ತಾಯಪಡಿಸ ಬೇಕಾದರೆ ಅವಳು ಅಪರಾಧಿ ನಿಜವೆಂಬುದರ ತಾರ್ಕಣೆಗಾಗಿ ಸಾಕ್ಷವನ್ನು ಮುಂದಾಗಿ ತರಬೇಕಾದ್ದಲ್ಲದೆ, ಚಂಚಲನೇತ್ರರು ಮಠದಿಂದ ಆ ದಿವಸ ಹೊರಗೆ ಹೊಡಲಿಲ್ಲವಾಗಿ ವಾದಿಯೇ ಒಪ್ಪುವುದರಿಂದ ಅವರನ್ನು ಕುರಿತು ಸಾಕ್ಷ ಮುಂದಾಗಿ ಕೊಟ್ಟ ವಿನಾ ಅವರ ಮೇಲೆ ಯಾವದೊಂದು ದೋಷಾ ರೋಷಣೆಗೆ ಸಂದರ್ಭವಾಗದೆಂದು ಪೇಷ್ಕಾರನು ವಿಧಿಸಿದನು. ವಾದಿಯು ಸಾಕ್ಷಿಗಾರರನ್ನು ತರುವುದಕ್ಕೆ ಒಂದು ದಿನಸದ ವ್ಯವಧಾನ ಪಡಕೊಂಡು ಕಛೇರಿಯಿಂದ ಹೊರಟು ಬರುವಾಗ ದಾರಿಯಲ್ಲಿ ಕಾದಿರುವ ಅಪರಾಜಿತ ಸೆಟ್ಟಿಯು ಕಚೇರಿಯಲ್ಲಿ ಅಂದು ನಡೆದ ವೃತ್ತಾಂತವನ್ನು ವಾದಿಯ ಮುಖೇನ ತಿಳಿದು, ವಾದಿಯ ವಾಗ್ಮೂಲ ಅಷ್ಟು ಪರಿಷ್ಠಾರವಾಗಿಲ್ಲವೆಂದು ದುಮ್ಮಾನ ಪಡುವವನಂತೆ ಮುಖವಿಕಾರ ಮಾಡಿದನು. “ಆದ್ದಾಯಿತಲ್ಲಾ, ಸಾಕ್ಷಿ ಗಾರರನ್ನು ಎಲ್ಲಿಂದ ತರೋಣ? ನಮ್ಮ ಮಾತು ಯಾರು ಕೇಳುವ ಹಾಗಿದೆ?” ಎಂದು ವೇದವ್ಯಾಸನು ನಿಟ್ಟುಸಿರುಬಿಟ್ಟನು. ಕೈಸನ್ನೆಯಿಂದ ಅವನನ್ನು ಮನೆಗೆ ಹೋಗಹೇಳಿ, ಅಪರಾಜಿತನು ಥಟ್ಟನೆ ನೇಮರಾಜನನ್ನು ಕಂಡು ಅಂತರಂಗದಲ್ಲಿ ಅವನ ಕೂಡೆ ಮಾತಾಡಿ, ತಿರುಗಿ ಬಂದು, ವೇದವ್ಯಾಸಗೆ ಸಾಕ್ಷಿಗಾರರನ್ನು ಒದಗಿಸಿಕೊಳ್ಳಲಿಕ್ಕೆ ತಾನು ಮಾಡಿ ಬಂದ ಪ್ರಯತ್ನವನ್ನು ವರ್ಣಿಸಿದನು. ವೇದವ್ಯಾಸಗೆ ತಲೆಯೇರಿತು. ಇಷ್ಟು ಪ್ರಿಯಕರವಾದ ಮಿತ್ರನು ತನಗೆ ಶ್ರೀವ್ಯಾಸರಘುಪತಿಯ ದಯದಿಂದ ದೊರಕಿದನೆಂದು ತನ್ನ ಅನುಜಗೆ ಹೇಳಿದನು. ಸತ್ಯವೆಂದು ರಾಘವೇಂದ್ರ ಉಪಾಧ್ಯನು ಚಿಟ್ಟಿಲಿ ಯಂತೆ ಮುಖವನ್ನು ಮುದುರಿಸಿಕೊಂಡು ಆನೆಯಂತೆ ತಲೆದೂಗಿದನು.

ಮಾರನೆ ದಿನ ಕಚೇರಿಗೆ ಹಾಜರಾಗುವುದಕ್ಕೆ ಒಂದು ತಾಸಿನಷ್ಟು ವ್ಯವಧಾನ ಇರುವಾಗ್ಗೆ ಅಪರಾಜಿತನು ವೇದವ್ಯಾಸನನ್ನು ನೇಮರಾಜನಲ್ಲಿಗೆ ಕಳುಹಿಸಿದನು. ನೇಮರಾಜನು ತನ್ನ ಚಾಕರರಲ್ಲಿ ನಾಲ್ವರನ್ನು ಕರೆದು, ಹಾರುವನ ಸಂಗಡ ಹೋಗಲಾಜ್ಞಾಸಿಸಿದನು. ಅವರನ್ನು ಕರಕೊಂಡು, ಅವರ ಸಂಗಡ ಒಂದು ಮಾತಾದರೂ ಆಡದೆ, ವೇದವ್ಯಾಸನು ಕಚೇರಿಗೆ ತಲಪಿದನು. ಸಾಕ್ಷಿಗಾರರನ್ನು ನೋಡುವದಕ್ಕೆ ಪೇಷ್ಕಾರನು ಅಪೇಕ್ಷಿಸು ತ್ತಲೇ, ಆ ನಾಲ್ವರನ್ನು ಅವನ ಮುಂದೆ ನಿಲ್ಲಿಸೋಣಾಯಿತು. ಅವರಲ್ಲಿ ಒಬ್ಬನನ್ನು ತನ್ನ ಸಮಕ್ಷಮದಲ್ಲಿ ನಿಲ್ಲಿಸಿ ಬೇರೆ ಮೂವರನ್ನು ಸಾಕ್ಷಿಗಾರ ರನ್ನು ಕೂಡ್ರಿಸುವ ಕೋಣೆಗೆ ಒಯ್ಯುವದಕ್ಕೆ ಪೇಷ್ಕಾರನ ಅನ್ಸಣೆಯಾದಂತೆ ದಫೇದಾರನು ನಡಕೊಂಡನು.

ಈ ಫಿರ್ಯಾದು ಕುರಿತು ನೀನು ಏನು ಬಲ್ಲಿ? ಎಂಬ ಪ್ರಶ್ನೆಗೆ ಮೊದ ಲನೇ ಸಾಕ್ಷಿಗಾರನು–“ನಾನೇನೂ ಅರಿಯೆ ಬುದ್ಧಿ; ನಾಲ್ಕು ರೂಪಾಯಿ ಈಸುಕೊಂಡು, ಬಂದು ಸುಳ್ಳು ಸಾಕ್ಷಿ ಹೇಳೆಂದು ವೇದವ್ಯಾಸ ಉಪಾಧ್ಯನು ದುರ್ಭೋಧನೆ ಕೊಡುತ್ತಾ, ನನಗೆ ಇಲ್ಲಿ ವರೆಗೆ ಎಳಕೊಂಡು ಬಂದದ್ದೊಂದು ಸಂಗತಿ ಅಲ್ಲದೆ ಇನ್ನೇನೂ ನಾನು ತಿಳಿದವನಲ್ಲ” ಎಂದು ಅವನು ಪ್ರತ್ಯುತ್ತರ ಕೊಟ್ಟನು. ಪೇಷ್ಕಾರನು ನೆಗಾಡಿ, ಆ ಸಾಕ್ಷಿಗಾರನಿಗೆ ಹೋಗಬಿಟ್ಟನು. ಉಳಿದ ಮೂವರಲ್ಲಿ ಒಬ್ಬೊಬ್ಬನನ್ನೇ ಕೇಳಿದಾಗ ಅವರು ಹಾಗೆಯೇ ಹೇಳಿ ದರು. ವಿಮರ್ಶೆ ಅಂತ್ಯವಾಯಿತು. ಮಾರನೇ ದಿವಸ ತೀರ್ಪು ಕೇಳುವು ದಕ್ಕೆ ಬರಬೇಕೆಂದಾಜ್ಞೆ ಯಾಯಿತು. ಉಪಾಧ್ಯರಿಬ್ಬರು ಕಪ್ಪು ಮೋರೆ ಗಳನ್ನು ಯಾರು ಕಾಣದ ಹಾಗೆ ಬೀದಿಗೆ ಇಳಿದರು. ಅಸರಾಜಿತನನ್ನು ನೋಡಿ–“ಎಂಧಾ ಸಾಕ್ಷಿಗಾರರನ್ನು ಮಾಡಿಕೊಟ್ಟ, ಪ್ರಿಯರೇ?” ಎಂದು ವೇದವ್ಯಾಸನು ಹೀಯಾಳಿಸಿದನು. “ಕಾಸು ಬಿಚ್ಚಲಿಕ್ಕೆ ಆಶೆಯಾಗುವ ನಿನ್ನಂಧಾ ಕೃಪಣಗೆ ಪಂಥವ್ಯಾಕೆ? ನಿನ್ನ ಸಹಾಯಕ್ಕೆ ಬಂದ ದೆಸೆಯಿಂದ ನನಗೂ ಅವಮಾನವಾಯಿತು. ನೀನು ಹೊಳೆಗೆ ಹಾರು” ಎಂದು ಸೆಟ್ಟಯು ನಡೆದುಬಿಟ್ಟನು. ಮತ್ತು ಶೀಘ್ರ ನೇಮರಾಜನನ್ನು ಕಂಡು –“ವೇದ ವ್ಯಾಸಗೆ ಮಂಗಳಪದವಾಯಿತು. ವಾಗ್ದತ್ತಮಾಡಿದ ಹಣ ಈಗಲೇ ಕೊಡು; ತೀರ್ಪು ನಾಳೆ ಕೊಡಲ್ಪಡುವದು” ಎಂದು ಹೇಳಿಕೊಂಡನು. ನೇಮ ರಾಜನು ಪ್ರಕರಣ ಪೂರ್ಣವಾಗಿ ತೀರಿದ ಬಳಿಕ ಹಣ ಕೊಡುವದಕ್ಕೆ ಅಡ್ಡಿ ಇಲ್ಲವೆಂದನು. ಅದಕ್ಕೆ ಅಪರಾಜಿತನು ಒಪ್ಪದೆ ಕೂಡಲೇ ವಾಗ್ದಾನ ಪೂರೈಸದಿದ್ದರೆ ಹಣಕಟ್ಟಿದ ಪ್ರಕರಣಕ್ಕೆ ಪುನರ್ಜೀವ ಮಾಡುವ ಯುಕ್ತಿ ಹುಡುಕುವೆನೆಂದು ಖತಿಗೊಂಡನು. “ಒಳ್ಳೇದು, ಸೀದಾ ಊರಿಗೆ ನಡಿ. ಇನ್ನೇನೂ ಕಿತಾಪತಿ ಮಾಡಿದರೆ ಯಲುವಿನ ಚಕಣಾಚೂರು ಮಾಡಿಸು ವೆನು” ಎಂದು ಗದರಿಸಿ, ನೇಮರಾಜನು ವಾಗ್ದತ್ತಮಾಡಿದಷ್ಟು ದ್ರವ್ಯವನ್ನು ಕೊಟ್ಟು, ಅಸರಾಜಿತನನ್ನು ಅಟ್ಚಿದನು. ಮುಂದಿನ ಸ್ಥಿತಿ ಹ್ಯಾಗಾದೀ ತೆಂಬ ಹೆದರಿಕೆಯಿಂದ ಉಪಾಧ್ಯಾಯರೀರ್ವರ ಎದೆ ಹಾರಲಿಕ್ಕೆ ತೊಡಗಿತು.

ಅವರಿಗೆ ಆ ರಾತ್ರಿ ಕಣ್ಣಿಗೆ ನಿದ್ರೆ ಹತ್ತಲಿಲ್ಲ.

ಅದೇ ರಾತ್ರಿಯಲ್ಲಿ ವೆಂಕಟಪತಿ ಆಚಾರ್ಯನು ಪೇಷ್ಕಾರನ ಮನೆಗೆ ಹೋಗಿ. ಅವನ ಭೇಟಿ ಮಾಡಿದನು. ಅವರಲ್ಲಿ ಸಂಭಾಷಣೆ ಆರಂಭ ವಾಯಿತು.

ಪೇಷ್ಕಾರ– “ಆಚಾರ್ಯರೇ! ತಮಗೆ ಕೊಟ್ಟಭಾಷೆ ಸಲ್ಲಿಸಿಸೆನಲ್ಲಾ. ತಂದಿದ್ದೀರೋ.”

ವೆಂಕಟಪತಿ–“ಕೊಡದಿದ್ರೆ ನಾಳೆ ನೀವು ತೀರ್ಪು ಕೊಡೋಣಾಗಲಿ ಕ್ಕಿಲ್ಲವಷ್ಟೇ. ಮತ್ತೊಂದು ಸಣ್ಣ ಪ್ರಸ್ತಾಪವಿದೆ.”

ಪೇಷ್ಕಾರ -“‌ಅದು ಯಾವದಪ್ಪಾ?”

ವೆಂಕಟಪತಿ–“ಲಂಚದ ಆಶೆ ಶೋರಿಸಿ ಸುಳ್ಳು ಸಾಕ್ಷಿ ಕೊಡಲಿಕ್ಕೆ ಪ್ರಯತ್ನಮಾಡಿದ ತಪ್ಪು ವೇದವ್ಯಾಸನ ಮೇಲೆ ಆರೋಪಣೆ ಮಾಡುವುದಕ್ಕೆ ಅವನ ತಮ್ಮನ ಕಡೆ ಸಾಕ್ಷಿಗಾರರಿಂದಲೇ ಇಂಬುಸಿಕ್ಕಿದ ಹಾಗಾಯಿತು. ಆ ದೋಷಕ್ಕೆ ವಾದಿಯು ಸಹಕಾರಿಯಾಗುತ್ತಾನಷ್ಪೆ. ಆತಾಪಿವಾತಾಪಿಗಳಂತಿ ರುವ ಇವರಿಬ್ಬರು ದುರುಳರನ್ನು ಕೊಂಚಕಾಲಕ್ಕಾದರೂ ಜ್ಞಾನಮಂಟಪ ದಲ್ಲಿ ಕೂಡ್ರಿಸಿದರೆ ತಮ್ಮ ಉಪಕಾರ ಶ್ರೀಪಾದಂಗಳವರು ಮರೆಯರು.”

ಪೇಷ್ಕಾರ–“ಒಂದೇ ಚಪ್ರದಲ್ಲಿ ಏಕಕಾಲದಲ್ಲಿ ಎರಡು ಮದುವೆ ಗಳನ್ನು ಮಾಡಿಬಿಟ್ಟರೆ ಊಟದ ಖರ್ಚು ಅರೆವಾಸಿ ಉಳಿದ ಹಾಗೆ ಆಗು ತ್ತದೆ. ತಮ್ಮ ಆಲೋಚನೆ ಚಲೋದು.?

ವೆಂಕಟಪತಿ–“ಎರಡು ಮದುವೆಗಳನ್ನು ಒಬ್ಬನೇ ಪುರೋಹಿತನು ಮಾಡಿಸುವುದಾದರೆ ಒಂದೇ ಸೌಮ್ಯ ಕೊಡಕೂಡದು, ಹೆಚ್ಚು ಕೊಡಬೇಕು. ನಾನು ಚೆನ್ನಾಗಿ ಬಲ್ಲೆ. ಇಕ್ಕೊಳ್ಳಿ.”

ಹೀಗೆಂದು ವೆಂಕಟಪತಿ ಆಚಾರ್ಯನು ಒಂದು ಥೈಲಿ ತುಂಬಾ ರುಪೈಗಳನ್ನು ಪೇಷ್ಕಾರನ ಕಣ್ಣುಗಳ ಮುಂದೆ ಮಡಗಿದೊಡನೆ ಐನೂರು ರುಪೈ ಬುಟ್ಟಿಗೆ ಉಂಟೆಂಬ ಸಂತೋಷದಿಂದ ಅವನು ಹಾಸ್ಯವದನಯುಕ್ತ ನಾಗಿ ಹಣದಚೀಲ ಮನೆಯೊಳಗೆ ಇಟ್ಟುಬಿಟ್ಟು-“ಯಾರೆಲೆ ಜವಾನ! ಬೆಳ್ಳಿಯ ದೊಡ್ಡ ಹರಿವಾಣದಲ್ಲಿ ತಾಂಬೂಲ ತೆಗೆದುಕೊಂಡು ಬಾ” ಎಂದು ಕೂಗಿದನು. ಪೇದೆ ಶಿವಾಚಾರದ ಬಸವಪ್ಪನು ಸಣ್ಣ ಹರಿವಾಣದಲ್ಲಿ ವೀಳ್ಯೆದೆಲೆಯನ್ನಿಟ್ಟು -“ಮತ್ತೆ ದೊಡ್ಡ ಶಿವಾಣ ಕಾಣದೆ ಹೋಯಿತು. ಸಣ್ಣ ಶಿವಾಣದಿಂದ ಸುಧಾರಿಸಿಬಿಟ್ಟ ಶರಣು” ಅಂದನು. ವೆಂಕಟಪತಿ ಆಚಾರ್ಯಗೆ ಇರುವೆ ಕಚ್ಚಿದಂತಾಯಿತು. –“ಆಹಾ! ಹರಿವಾಣವೆಂಬ ಸರಸಪದ ನಾಲಿಗೆಗೆ ಬಾರದ ಇಂಥಾ ಪಾಷಾಂಡಿಯು ತಮ್ಮ ನೌಕರಿಯಲ್ಲಿ ಹ್ಯಾಗೆ ಸೇರಿಬಿಟ್ಟನೋ! ತಿಳಿಯದು” ಎಂದು ಪೇಷ್ಕಾರಗೆ ವಾಗ್ದಂಡನೆ ರೂಪವಾಗಿ ಹೀನಿಸಿದ ಆಚಾ ರ್ಯಗೆ ತಾನು ಹರಿಹರಪರಾಯಣನೆ:ದು ಪೇಷ್ಠಾರನು ಉತ್ತರಕೊಟ್ಟನು.

ಮುಂಜಾನೆ ಉಪಾಧ್ಯರಿಬ್ಬರೂ ಎದ್ದು ಹರಿಸ್ಮರಣೆ ಮಾಡುತ್ತಾ ಇದ್ದು ನಿತ್ಯಾನ್ಹೀಕವನ್ನು ತೀರಿಸಿ ಊಟದ ಸಮಯಕ್ಕೆ ಹ್ಯಾಗೂ ಎಲೆಯ ಮೇಲೆ ಕೂತೆದ್ದು ಕಚೇರಿ ಬಾಗಲು ಕಾಯುವದಕ್ಕೋಸ್ಟರ ಹೊರಟರು. ದಾರಿಯಲ್ಲಿ ದಫೆದಾರ ಗಣಪನು ಸಿಕ್ಕಿದನು–“ಅಯ್ಯಾ! ಗಣಪ ದಫೆದಾರ! ನಮ್ಮ ಅವಸ್ಥೆ ಇಂದ್ಹ್ಯಾಗಾಗುತ್ತೆ ಹೇಳು, ಮಹಾರಾಯ!” ಎಂದು ವೇದವ್ಯಾಸನು ಕೇಳಿದನು. –“ಸ್ವಾಮೀ! ನಾಂ ಹ್ಯಾಂಗೆಳೋದು! ನಿಮ್ಮ ಕೈಯಲ್ಲಿ ಹಣ ಕಾಸಿಲ್ಲಾ! ನಿಮ್ಮ ದೊಡ್ಡ ದೊಡ್ಡ ನಾಮಕ್ಕೆ ಯಾರು ಬಿಸಾತುಮಾಡುತ್ತಾರೆ? ಇರ್ವೆಗೆ ಕಬ್ಬಿಣದ ಕೆಲ್ಸ ಯಾಕೆ? ನಮ್ಮ ಸ್ವರೂಪತಕ್ಕ ನಾನಿರಬೇಕು. ಸುಮ್ಮಗೆ ಹಾರಿದರೆ ಸೊಂಟಾನೂ ಕಾಲೂನೂ ಮುರ್ಕೋಳ್ಳೆಕೆ ಆದೀತು. ಜಪೆದಾರ್ರೆ ಜಪೆದಾರ್ರೆ ಅಂದಿಯಾರು ನನಗೆ ಕರದಿ? ಇದು ಹ್ಯಾಂಗಾದೀತು? ಅದು ಹ್ಯಾಂಗಾದೀತು? ಅಂದು ಕಾಟಿಕೇಳೊದುಂಟು. ನನ್ನ ಮಾತು ಈಗ ಯಾರು ಕೇಳುತ್ತಾರೆ? ಆದರೂನೂ ಹಾಂಗೇ ಹೇಳಿಬಿಟ್ಟರೆ ನಮ್ಮ ಆಬ್ರುವೇ ಹೋದಿತಲ್ಲಾ! ಅದಕ್ಕಾಗಿ ನಾನಿದ್ದೇನೆ ಹೆದ್ರಬೇಡಾ ಅಂದು ಕಾಟಿ ನಾನು ಧೈರ್ಯ ಹೇಳೋದುಂಟು. ಹಾಂಗೆ ಹೇಳಿದ್ರೆ ಎಲೆ ಅಡಿಕೆ ತಿಂನಂತೆ ಆದರೂ ಬಗೆ ಆಗ್ತೆತೆ. ಹಾಗಂದಿ ನಿಮಗೆ ಬಿರಾಮರಿಗೂ ಠಕ್ಕು ಹಾಕಕ್ಕೆ ನನ್ನಿಂದೆಡೀದು” ಎಂದು ದಫೇದಾರನ ಪ್ರತ್ಯುತ್ತರವಾಯಿತು. ವೇದವ್ಯಾಸ ಉಪಾಧ್ಯನು ಹಣೆಯನ್ನು ಕೈಯಿಂದ ಬಡಕೊಂಡು ಪತಿವ್ರತೆಯಾದ ತನ್ನ ಹೆಂಡ್ತಿಯ ಮಾತು ಕೇಳಿರುತ್ತಿದ್ದ ಪಕ್ಷದಲ್ಲಿ ಇಂಧಾ ದುರವಸ್ಥೆ ಪ್ರಾಪ್ತಿ ಯಾಗುತ್ತಿದ್ದಿಲ್ಲವೆಂದು ಈಗ ‘ಅವನ ಮನಸಿಗೆ ಖಚಿತವಾಯಿತು.” “ವಿಪ್ರಾಃ ಪಶ್ಚಿಮ ಬುದ್ಧಯಃ”

ಎಂದಿನಂತೆ ಪೇಷ್ಕಾರನ ಸವಾರಿಯು ಬಂತು. ದಫೇದಾರನು ಕಕ್ಷಿ ಗಾರರಿಗೆ ಕರೆದು ಎದುರು ನಿಲ್ಲಿಸಿದನು. ತೀರ್ಪು ನುಡಿಯಲಿಕ್ಕೆ ಪ್ರಾರಂಭ ವಾಯಿತು. “ಪ್ರತಿವಾದಿ ಮೇಲೆ ನಿರ್ನಿಮಿತ್ತರಾಗಿ ದೋಷಾರೋಪಣೆ – 130 –

ಮಾಡೋಣಾದ್ದು ವಾದಿಯ ದ್ವೇಷಸಾಧನೆಯ ಉಪಾಯವೆಂದು ಕಾಣು ವದು. ವಾದಿಯ ಅಣ್ಣ ವೇದವ್ಯಾಸನ ನಡತೆಯು ಅತಿ ನೀಚತರದ್ದು; ಲಭ್ಯದ ಆಶೆಯನ್ನು ತೋರಿಸಿ ಸತ್ಯವಾದಿಗಳಾದ ಸಾಕ್ಷಿಗಾರರಿಂದ ಸುಳ್ಳು, ಹೇಳಿಸ ಲಿಕ್ಕೆ ಪ್ರಯತ್ನಿಸಿದ ವಿದ್ಯಮಾನ ನೋಡಿದರೆ ಅವನು ದೊಡ್ಡ ದ್ರೋಹಿಯೆಂದು ತಿಳಿಯಬೇಕು. ಸೂರ್ಯನಾರಾಯಣನ ಬ್ರಹ್ಮ ಪ್ರತಿಷ್ಠೆಗೆ ವಿಡ್ಡೂರ ತರ ಬೇಕೆಂಬ ದುರಾಲೋಚನೆಯಿಂದ ಅಣ್ಣ ತಮ್ಮಂದಿರಿಬ್ಲರೂ ನಿರಪರಾಧಿಗಳ ಮೇಲೆ ಸುಳ್ಳು ಫಿರ್ಯಾದು ಮಾಡಿದ ವಿದ್ಯಮಾನವು ಅವರ ನಡತೆಯಿಂದಲೇ ಸ್ಪಷ್ಟವಾಗುವದರಿಂದ ಅವರ ಕೃತ್ಯಕ್ಕೆ ಸರಿಯಾದ ಶಿಕ್ಷೆಯನ್ನು ಕೊಡದೆ ಹೋದರೆ ಇನ್ನು ಮುಂದೆ ಅವರು ಸೊಕ್ಕಿ ಇಲ್ಲದ ಅನಾಹುತ ಮಾಡುವರು. ಆದ ಪ್ರಯುಕ್ತ ಅವರು ೧೦ ರೂಪಾಯಿ ಅಪರಾಧ ಕೊಡಬೇಕು. ಮತ್ತು ಮೂರು ತಿಂಗಳ ವರೇಗೆ ತಂಟೆ ಷರಾರತ್‌ ಮಾಡಲಾರೆವೆಂದು ಜಾಮೀನು ಕೊಡಬೇಕು. ಹಾಗೆ ಕೊಡದೆ ಹೋದರೆ ಸೆರೆಮನೆಯಲ್ಲಿರಬೇಕಾಗುವುದು ” ಈ ವಕ್ಕಣೆಯುಳ್ಳ ತೀರ್ಪನ್ನು ಪೇಷ್ಕಾರನು ಓದಿ ಹೇದಾಕ್ಷಣ ಉಪಾಧ್ಯರ ಮುಖಗಳು ನಿಸ್ತೇಜವಾದವು. ಸಾಲ ಕಡಮಾಡಿ ಅಪರಾಧದ ಹಣವನ್ನು ಸತ್ಪರ ತೆತ್ತರು. ಜಾಮೀನು ನಿಲ್ಲಲಿಕ್ಕೆ ಯಾರೂ ಸಮ್ಮತಿಸಲಿಲ್ಲ. ಅವರು ಮೂರು ದಿವಸಗಳಷ್ಟು ವ್ಯವಧಾನಕ್ಕೆ ಅಪ್ಸಣೆಯಾಗಲಪೇಕ್ಷಿಸಲು ಅದುವ ರೆಗೆ ನಜರು ಬಂದಿಯಲ್ಲಿರಬೇಕೇ ಹೊರ್ತು ಬೇರೇನೂ ಉಪಾಯವಿಲ್ಲವೆಂಬ ಪ್ಪಣೆಯಾಯಿತು. ಅಂದು ಉಭಯತರು ನಜರ ಬಂದಿಯಲ್ಲಿ ಕಾಲ ಕಳೆದರು. ಮರುದಿವಸವೂ ಹಾಗೆಯೇ ಇರಬೇಕಾಯಿತು. ಮೂರನೇ ದಿವಸ ಪರವೂರ ಲ್ಲಿರುವ ಅವರ ಸೋದರಮಾವ ನರಸಿಂಹಭಟ್ಟನು ಜಾಮೀನು ನಿಂತು ಅಳಿಯಂದಿರನ್ನು ವಿಮೋಚನೆ ಪಡಿಸಿ ಇನ್ನು ಮುಂದೆ ಆದರೂ ದೊಡ್ಡವರ ಕೂಡೆ ದ್ವೇಷ ಕಟ್ಟಿಕೊಳ್ಳದಿದ್ದರೆ ಸೆರೆಮನೆಗೆ ಹೋಗದೆ ಸುಖವಾಗಿರಬಹು ದೆಂದನು.

ಉಪಾಧ್ಯರಿಬ್ಬರೂ ನಜರಬಂದಿಯಲ್ಲಿರುವ ಕಾಲದಲ್ಲಿ ಸೊರ್ಯನಾರಾ ಯಣನ ಉಪನಯನಕ್ಕೆ ಇಟ್ಟ ಮುಹೂರ್ತದಲ್ಲಿ ದೊಡ್ಡ ಸಂಭ್ರಮದಿಂದ ಆ ಶುಭಕಾರ್ಯವು ನಿರ್ವಹಿಸಲ್ಪಟ್ಟಿತು. ಸಾವಿರಾರು ದ್ವಿಜರು ಮೃಷ್ಟಾಂನ ಉಂಡು ದಣಿದರು. ಕೈ ತುಂಬಾ ದಕ್ಷಿಣೆಯು ಅವರಿಗೆ ಸಿಕ್ಕಿತು. ಆಬಾಚಾ ರ್ಯನ ಆಹ್ಲಾದವು ಮೇರೆವಕಿಯಿತು. ವಾಗ್ದೇವಿಯ ಹರುಷ ಭರ್ತದ ನೀರಿನೋಪಾದಿಯಲ್ಲಿ ಉಕ್ಕೇರಿತು. ಚಂಚಲನೇತ್ರರ ಮಂದಸ್ಮಿತವದನ ಆನಂದ ಭಾಷ್ಪಗಳಿಂದ ತೋದು ಹೋಯಿತು. ವಾಗ್ದೇವಿಯ ತಂದೆತಾಯಿ ಗಳು ಆ ಕಾಲದಲ್ಲಿ ಕೊಂಚ ಜಾಡ್ಯದಲ್ಲಿರುವ ದೆಸೆಯಿಂದೆ ಒದುರು ಬರಲಿಕ್ಕೆ ಉಚಿತವಲ್ಲದ ಸ್ಥಿತಿಯಲ್ಲಿದ್ದರೂ ಮೊನ್ಮುಗನ ಉಪನಯನವು ನಿರ್ವಿಘ್ನವಾಗಿ ಆಯಿತೆಂಬ ಸಂತೋಷಸುಖವನ್ನು ಅನುಭವಿಸಿದರು. ಪುರವಾಸಿಗಳಾಗಲೀ ಪರಊರಿನವರಾಗಲೀ ಅಂದಿದ ಪ್ರಸ್ತವು ಬೇಗನೆ ಮರವೆಗೆ ಬಾರದ ಹಾಗೆ ಉಂಡುತಿಂದು ಸುಖಿಯಾಗಿ ಸೂರ್ಯನಾರಾಯಣನು ದೀರ್ಥ್ಫಾಯುವಾ ಗಿಯೂ ತಂದೆ ತಾಯಿಗಳಿಗೆ ಸುಪ್ರೀತನಾಗಿಯೂ ಸದಾಚಾರಪ್ರಿಯನಾ ಗಿಯೂ ಸುಜನಪ್ರೇಮಿಯಾಗಿಯೂ ಅನನ್ಯಭಾನದಿಂದ ಭಗವಂತನನ್ನು ಧ್ಯಾನಿಸಿ ಅವನ ಅನುಗ್ರಹಕ್ಕೆ ಯೋಗ್ಯನಾದ ಸುಪುತ್ರನಾಗಿಯೂ ಶೋಭಿಸ ಲೆಂದು ಆಶೀರ್ವದಿಸಿದರು.

ಪೇಷ್ಕಾರನಿಗೂ ಅವನ ಕಚೇರಿಯ ಒಳ ಉದ್ಯೋಗಸ್ಥರಿಗೂ ವೆಂಕಟ ಪತಿ ಆಚಾರ್ಯನು ಮರೆಯಲಿಲ್ಲ. ಅವರಿಗೆಲ್ಲಾ ತಾರತಮ್ಯಾನುಸಾರವಾದ ಉಡುಗೊರೆಗಳನ್ನು ಕೊಟ್ಟು ಮನ್ಸಿಸುವುದರಲ್ಲಿ ಏನೂ ವ್ಯತ್ಯಾಸ ಬರಲಿಲ್ಲ. ಈ ಉಪನಯನದ ಕಾಲವು ಕುಮುದಪುರ ವಾಸಿಗಳಲ್ಲಿ ಉಪಾಧ್ಯಾಯರಿಬ್ಬರ ಹೊರತು ಮಿಕ್ಕ ಸರ್ವರಿಗೂ ಇಷ್ಟತರವಾಯಿತು. ಸ್ವಜಾತಿ ಪರಜಾತಿಯ ವರು. ಯಥೋಚಿತ ಉಪಚಾರಗಳಿಂದ ಸಂತುಷ್ಟರಾಗಿ ವಟುವಿನ ಅಭ್ಯು ದಯವನ್ನು ಬಯಸುವವರಾದರು. ಮಠದ ಮೇಲೆ ವೈರಭಾವ ತಾಳಿದ ಅಸರಾಜಿತಸೆಟ್ಟಿಯೂ ಅಸಃತುಷ್ಟನಾಗಲಿಲ್ಲವಷ್ಟೆ. ಬುಟ್ಟಿಗೆ ಒಂದು ಸಾವಿರ ರುಪಾಯಿಗಳನ್ನು ಪ್ರಯಾಸವಿಲ್ಲದೆ ಸಂಪಾದಿಸಿದ ದೆಸೆಯಿಂದ ಅವನ ಮನಸ್ಸೂ ಮಠದ ಕಡೆಗೆ ಆಕರ್ಷಿಸಲ್ಪಟ್ಟಿತು. ವೇದವ್ಯಾಸ ಉಪಾಧ್ಯಗೂ ರಾಘವೇಂದ್ರ ಉಪಾಧ್ಯಗೂ ಮಾತ್ರಶೋಕಾಸ್ಪದವಾಯಿತು. ಗಂಗಾಬಾಯಿ ಯಿಂದ ಮಾನಭಂಗವಾದ್ದು ಬೇರೆ, ಅವಳ ಮೇಲೆ ಮಾಡಿದ ದಾವೆಯಲ್ಲಿ ನಜರಬಂದಿಯಲ್ಲಿದ್ದುದು ಬೇರೆ. ಇವೆರಡು ಕಾರಣಗಳಿಂದ ಮನಸ್ಸಿಗೆ ಹತ್ತಿದ ವ್ಯಾಕುಲ ಸ್ಮರಿಸಕೂಡದೆಯೂ, ಕಾಕಪೋಕರು ಅವರನ್ನು ಬಹಿರಂಗವಾಗಿ ಗೇಲಿ ಮಾಡುವುದಕ್ಕೆ ತೊಡಗಿದ್ದಲ್ಲದೆ ಸಂಭಾವಿತರೂ ಅವರ ನೆಂಟರಿಷ್ಟರೂ ಅವರ ತಿಷ್ಟತಿಯೇ ಬಿಟ್ಟು ಬಿಟ್ಟ ದೆಸೆಯಿಂದ ತಮ್ಮಷ್ಟು ಪಾಪಿಗಳು ಇನ್ಯಾ ರಿಲ್ಲವೆಂಬ ವೈರಾಗ್ಯತಾಳಿ ಸಹೋದರರಿಬ್ಬರೂ ಮಡದಿಯರನ್ನು ಕರೆದುಕೊಂಡು ಮಹಾ ಯಾತ್ರೆಗೆ ಹೋದರು. ಈ ವಾರ್ತೆಯು ಚಂಚಲನೇತ್ರರ ಕಿವಿಗೆ ಬೀಳುತ್ತಲೇ ತನ್ನ ಮನಸ್ತಾಪದಿಂದ ಅವರಿಗೆ ಉಛಾಟನವಾಯಿ ತೆಂಬ ಹಮ್ಮು ತಲೆಗಡರಿತು.

ವಾಗ್ದೇವಿಯು ಪ್ರತಿನಿತ್ಯ ತನ್ನ ಮೋಹ ನಡತೆಯಿಂದ ಚಂಚಲನೇತ್ರ ರನ್ನು ಮಂಕುಗೊಳಿಸಿ ಅವರಲ್ಲಿ ವ್ಯಾಮೋಹವನ್ನು ಹೆಚ್ಚಿಸಿ ತನ್ನ ಕೈಲಾಗು ವಷ್ಟರ ಮಟ್ಟಿಗೆ ಸನ್ಯಾಸಿಯ ದ್ರವ್ಯವನ್ನು ವ್ರಯಮಾಡಿಸುವದರಲ್ಲಿ ಲೇಶ ವಾದರೂ ಅಂಜಲಿಲ್ಲ ಇನ್ನೆಂಥಾ ದುರ್ದಶೆಯು ಆ ಯತಿಗೆ ಹಿಡಿಯಿತೋ ದೇವರೇ ಬಲ್ಲ! ಹಾವಾಡಿಗನಿಂದ ತಡೆ ಕಟ್ಟಲ್ಪಟ್ಟ ಸರ್ಪವು ಮೈಮರತು ಕೊಂಡಿರುವಂತೆ ಯತಿಯ ಮೈಚರ್ಮವನ್ನೇ ವಾಗ್ದೇವಿಯು ಸುಲಿದರೂ ಆ ಪ್ರಾಣಿಗೆ ನೋಯದೆ ಹೋಯಿತು. ಹಾಗೂ ಪ್ರಾಯವು ಹೆಚ್ಚಾಗಿ ದೌರ್ಬಲವು ಏರುತ್ತಾ ಬರುವ ಸಂಧಿಯಲ್ಲಿ ವೆಂಕಟಪತಿ ಆಚಾರ್ಯನು ಎಷ್ಟು ಬುದ್ಧಿವಂತಿಗೆ ನಡಿಸಿನರೂ ವಾಗ್ದೇವಿಯ ಮಾತೇ ಭಗವದ್ವಾಕ್ಯವಾಗಿ ಚಂಚಲನೇತ್ರರ ಮನಸ್ಸಿಗೆ ತೋರುವದಾಯಿತು. ಅವಳ ಅನುಮತಿ ಇಲ್ಲದೆ ಪಾರುಪತ್ಯಗಾರನಿಂದ ಒಂದು ಕಡ್ಡಿಯನ್ನಾದರೂ ಇಲ್ಲಿಂದ ಎತ್ತಿ ಅಲ್ಲಿ ಇಡು ವದಕ್ಕೆ ಆಗದೆ ಹೋಯಿತು. “ಇದೇನಪ್ಪಾ! ಕಾಲದ ಮಹಿಮೆ” ಯೆಂದು ವೆಂಕಟಪತಿ ಆಚಾರ್ಯನು ಬೆರಗಾದರೂ ತನಗೆ ಉಪ್ಪನ್ನ ಕೊಟ್ಟು ಸಾಕುವ ಯತಿಯನ್ನು ಪ್ರಾಣದಾಶೆಯಾದರೂ ಬಿಟ್ಟು ಸೇವನೆ ಮಾಡದಿರಕೂಡದೆಂದು ದೃಢಭಾವದಿಂದ ಯಜಮಾನನ್ನು ಕೊಂಚವಾದರೂ ಬಿಟ್ಟು ಹಾಕಲಿಲ್ಲ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಗ್ನಿರಾಜ
Next post ದೇವರು ಎಲ್ಲರಿಗಾಗಿ

ಸಣ್ಣ ಕತೆ

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಇಬ್ಬರು ಹುಚ್ಚರು

  ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

 • ಬಿರುಕು

  ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…