ಪ್ರೀತಿಸುವವರ ಕಂಡು

ಪ್ರೀತಿಸುವವರ ಕಂಡು
ಮೃಗಗಳಾಗ ಬೇಡಿ|
ಪ್ರೇಮಿಗಳ ಹೃದಯ
ನೋಯಿಸಬೇಡಿ|
ನಿಮಗೂ ಹೃದಯವಿದೆ
ಎಂದು ತಿಳಿದು
ಪ್ರೀತಿಸುತಿರುವೆವು ನಾವು||

ಲೋಕದ ಅಂತರಗಳ ಅರಿಯದೆ
ಪ್ರೀತಿಸುವೆವು ನಾವು|
ಸಮಾನ ಹೃದಯಿಗಳಾದ ನಾವು
ಜಗದ ಅಹಂ ಅಂತಸ್ತುಗಳ ಅರಿಯೆವು|
ನಮ್ಮ ಅಂತರಂಗದಿ ನಾವು
ಒಂದೇ ಸಮಾನ ಮನಸ್ಕರು
ಬಾಹ್ಯ ಪ್ರಪಂಚದ
ಡಾಂಭಿಕತೆ ತೊರೆದು
ಪ್ರೇಮಜೀವನದ ಸಾರ್ಥಕತೆ
ಪಡೆಯ ಹೊರಟಿರುವೆವು||

ಪ್ರೀತಿ ಎಲ್ಲರಿಗೂ
ಒಲಿಯುವುದಿಲ್ಲ!
ಒಲಿದವರಿಗೇಕೆ ಈ ಪ್ರಪಂಚ
ಒಲಿಯ ಬಿಡುವುದಿಲ್ಲ? |
ಪ್ರೀತಿಸುವುದು ಒಂದು ಕಲೆ
ಅದನ್ನು ಎಲ್ಲರೂ ಕಲಿಯಲಾಗಿವುದಿಲ್ಲ
ಪ್ರೀತಿಯ ಎಂದೂ ಕೊಳ್ಳಲಾಗುವುದಿಲ್ಲ|
ಪ್ರೀತಿಯ ಕೇಳಿ ಪಡೆಯಲಾಗುವುದಿಲ್ಲ
ಅದು ತಾನಾಗಿ ಗಂಗೆಯಂತೆ ಉದ್ಬವಿಸಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಜೀವ ನಮಗೆ ಬಿಡಿ
Next post ಉಪ್ಪರಿಗೆ

ಸಣ್ಣ ಕತೆ

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…