ನಿನ್ನ ನಾನು ಪ್ರಿತಿಸುವೆನು ಶ್ಯಾಮ ಮಧುರ ಯಾಮಿನಿ ನಿನಗಾಗಿಯೆ ಹಾತೊರೆವೆನು ಸ್ವಪ್ನ ಲೋಕ ಸ್ವಾಮಿನಿ. ನೀ ಬಂದರೆ ಇಳೆಗಿಳಿವುದು ಅತುಲ ದಿವ್ಯ ಶಾಂತಿಯು ನಿನ್ನಿರುಳಲಿ ಕರುಳಿಗೆಲ್ಲಿ ಸಂಸಾರದ ಭ್ರಾಂತಿಯು ಉಕ್ಕಿಸುತ್ತ ಕಾಳ್ಗಡಲನು ಬ್ರಹ್ಮಾಂಡವ ಮುತ್ತಿದೆ ಬಾನ್ಬಯಲಲಿ ಹಣ್ಣಿಸಿರುವ ರವಿ ತೇಜವ ಮುಕ್ಕಿದೆ. ಅಂಧಂ...

ಹಿಮಶೈಲ ಕಾಯುವ ಮಗನೇ ನೀನೆಲ್ಲಿದ್ದೀಯೋ ನನಗೊಂದೂ ಗೊತ್ತಿಲ್ಲ. ಕಾಲಿಗೆರಗಿ ಹೊರಟ ಆ ದಿನ- ಕಣ್ಣೀರು ಒರೆಸಿದ್ದೇನು ಮುದ್ದಾಗಿ ಮಾತಾಡಿ ನಗಿಸಿದ್ದೇನು ಚೆನ್ನಾಗಿ ನೋಡಿಕೊಳ್ಳೆಂದು ಅಪ್ಪನಿಗೆ ಹೇಳಿ ಹೊರಟೆಯಲ್ಲ! ಮಗಾ ಈಗ ನಿನೆಲ್ಲಿದ್ದೀಯೋ ನನ್ನ ಕಂದ...

ಮೊಗ್ಗರಳಿ ಹೂವಾಗಿ ಜಗವು ನಂದನವಾಗಿ ಪ್ರೀತಿಯೊಲಮೆಯ ಚಿಲುಮೆ ಉಕ್ಕಿ ಬರಲಿ ಕೆರೆಯ ದಂಡೆಯ ಮೇಲೆ ಹಸಿರು ಗರಿಕೆಯ ಲೀಲೆ ನಿನ್ನೆದೆಯ ಭಾವಗಳು ಹಾಡುತ್ತ ಬರಲಿ ಮಾವಿನ ಚಿಗುರಲಿ ಕೋಗಿಲೆಯ ದನಿಯಲಿ ನಿನ್ನೊಲವು ಹಾಡಾಗಿ ಹರಿದು ಬರಲಿ ಮನೆಯಂಗಳದಿ ಬಳ್ಳಿಯಲ...

ಬಾ ಸೌಭಾಗ್ಯವೆ ದಯಮಾಡು ಭಯಗಳ ದೂಡಿ ಮುದ ನೀಡು, ಒಡಲನು ಹೊರೆಯುವ ಭರದಲಿ ನಿನ್ನ ಮರೆತವನೆದೆಯಲಿ ಸ್ವರ ಹೂಡು, ಬಾಡದ ರೂಪವೆ ಬಳಿಸಾರು, ಹಾಡುವ ಗೀತವ ದನಿಯೇರು, ಕಾಣದೆ ಎಲ್ಲೋ ಮರೆಯಲಿ ನಿಂತು ಕಾಡುವ ಗುಟ್ಟೇ ಜೊತೆಗೂಡು ಮುಟ್ಟದ ಮೈಯೇ ಮುಖ ತೋರು ಕಟ...

ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ. ಬಲಗೈಯಿಂ...

ಬೆಳಗಾದರೆ ಅರಳಿ ನಿಲ್ಲುತ್ತವೆ ತೊನೆದಾಡಿ ಕಂಪುಹರಿಸುತ್ತ ಸ್ನಿಗ್ಧ ಹೂವುಗಳು, ಕಾಯುವದೇ ಕಠಿಣ ಕಟುಕ ಚಿಟ್ಟೆ – ಕೀಟಗಳಿಂದ. *****...

ಪುಟ್ಟನ ಮನೆ ಮುಂದೆ ಇದೇನು ಕೂಟ ಇಷ್ಟು ಬೆಳಿಗ್ಗೆಯೆ ಊರವರ ಕಾಟ ಕೆಲವರು ಕುಂತು ಕೆಲವರು ನಿಂತು ಹಲವರು ಹಣಿಕಿ ಉಳಿದವರಿಣುಕಿ ಹಾಡುತ್ತಿರುವನು ಪುಟ್ಟನು ಎಂದು ಜನ ಬಂದಿರುವರು ಕೇಳಲು ಇಂದು ಪುಟ್ಟನ ಗಾಯನ ಒಂದೇ ಸವನೆ ನಡೆದಿದೆ ಯಾರದೆ ಪರಿವಿಲ್ಲದೆ...

ಹೇ ಕೃಷ್ಣ ತಂದೆ ಏನುಕಾರ್ಯ ಹೇಳಿದೆ ಎನಗೆ? ಮನಸಾಯಿತೆ ನಿನಗೆ ||ಪ|| ಹಡೆದ ಮಕ್ಕಳ ಮೇಲೆ ಪಿತಗೆ ಹರುವಿಲ್ಲವೋ ಇದು ಕಠಿಣವಲ್ಲವೋ ||೧|| ಹರನ ಉರಿಯಗಣ್ಣಿನೆದುರು ನಿಲ್ಲುವರ್‍ಯಾರೋ? ಆವ ಪುರುಷರ ತೋರೋ ||೨|| ಬೆಂಕಿಯೊಳಗೆ ನೂಕಬಾರದೆ ಬ್ಯಾಸರವಾದರೆ?...

ಲೆಕ್ಕ ಲೆಕ್ಕ ಮಾನವ ಪ್ರತಿಯೊಂದಕ್ಕೂ ಲೆಕ್ಕ ಇಡುತ್ತಾ ಹೋಗುತ್ತಾನೆ!! ಲೆಕ್ಕ ಬಲು ದುಕ್ಕ! ತಿಳಿದೆ ಈ ನಕ್ಕಗೇ?! ಮಳೆ, ಗಾಳಿ, ನೀರು, ಬೆಳೆ, ಬಿಸಿಲು, ಬೆಂಕಿ, ಗುಡುಗು, ಸಿಡಿಲು, ಮಿಂಚಿಗುಂಟೆ ಲೆಕ್ಕ?! * ಲೆಕ್ಕ… ಲೆಕ್ಕ… ಈ ಹುಲ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....