ಕಾದು
ಕಾದು
ಕೇರಿ
ದೂರ ಸರಿತು
ಊರಿಂದ!
*

ಊರೆಂಬಾ…
ಬ್ರಹ್ಮ ರಕ್ಕಸನಿಗೆ-
ಕೇರೆಂಬಾ…
ಬೇತಾಳ!
*

ಈ ಊರುಕೇರಿ
ಎರಡು ಕಣ್ಣುಗಳು!
ಒಂದು-ಮೆಳ್ಳಗಣ್ಣು,
ಮತ್ತೊಂದು- ಕುರುಡುಗಣ್ಣು!
*

ಈ ಊರು
ಈ ಕೇರಿ
ನದಿಯ
ಎರಡೂ ದಡಗಳು!
ಒಂದು: ಹೊಲಸು
ಮತ್ತೊಂದು: ಮಡುಸು!
*

ಕವಿತೆಯೆಂದರೆ…
ಊರು ಕೇರಿ!
ಸೂರ್‍ಯ ಚಂದ್ರ
ಹಗಲು ಇರುಳು!
*****