ಬದುಕು ಬಡಿದಾಡುತ್ತ
ಕಣ್ಣು ಹೊಸಕಿಕೊಳ್ಳುತ್ತ
ಕ್ಯಾರಿಯರ್ ಹಿಡಿದುಕೊಂಡು
ಕುಂಡಿಗೆ ಕಾಲು ಹಚ್ಚಿಕೊಂಡು
ಓಡುತ್ತದೆ
ಅಡಬುರಿಸಿ ಗಾರಾಡುತ್ತದೆ
ಓಣಿಗಳಲ್ಲಿ ಬೀದಿಗಳಲ್ಲಿ
ವಾಹನಗಳಲ್ಲಿ ಲಾರಿ ಬಸ್ಸುಗಳಲಿ
ಸಾವಿರ ಸಾವಿರ ಹೆಜ್ಜೆಗಳು
ನೆಲವನೊದ್ದು ಒದ್ದು
ನಡೆಯುತ್ತವೆ ಗಡಿಬಿಡಿಯಲ್ಲಿ
ಮೋಜಿಗೆ ನಗುವಿಗೆ ಹಾಡಿಗೆ
ಪುರಸೂತ್ತಿಲ್ಲ ಆದರೂ ಅವು
ಪೂರಾ ಸತ್ತಿಲ್ಲ ಅದೇ ಪವಾಡ
*****


















