ಹೊರಟೆ ಎಲ್ಲಿಗೆ ಅಭಿಸಾರಿಕೆ ನಿರ್ಧಯಳೇ ಕಂದನ ಕರೆಗೆ ಬಿಂಕ ಬಿನ್ನಾಣವ ಉಟ್ಟು ಮುತ್ತು ರತ್ನವ ತೊಟ್ಟು ಹೊರಟೆ ಎಲ್ಲಗೆ ನೀ ಎಲ್ಲಿಗೆ? ಈ ಸೌಂದರ್ಯದ ಪ್ರಖರತೆ ಆಗಬಾರದೆ ಅತ್ಮದ್ದು ಹಿಂದೊಮ್ಮೆ ಹೊರಟಿದ್ದಳು ಅಕ್ಕ ದೂರಾಗಿಸಲು ಮನದೊಳಗಿನ ದುಃಖ ಭವಬಂಧ...
ಮೋಹದಿಂದ ಬೆಸೆದುಕೊಂಡು ತತ್ತಿಗಳನ್ನಿಟ್ಟು ಸರದಿಯಲ್ಲದಕೆ ಕಾವು ಕೊಟ್ಟು, ಹೊರಬಂದ ಬೆಂಕಿ ಕೆಂಡದ ಕೊಂಡೆಬಾಯಿಗೆ ಗುಟುಕನ್ನಿಟ್ಟು ಪುಟ್ಟ ಪುಟ್ಟ ರೆಕ್ಕೆಪುಕ್ಕ ಹುಟ್ಟಿದ ಪುಟ್ಟನಿಗೆ ಕುಪ್ಪಳಿಸುವುದ ಕಲಿಸಿ ಹಾರಿಬಿಟ್ಟೆವು ನೋಡು ಗಗನಕ್ಕೆ ಅದೀಗ ಸು...
ಪುಟ್ಟ ಹೃದಯನಾದೊಡೆ ಏನು? ಹರುಷ ಹೊನಲು! ವಿರಸವರಿಯದ ಸರಸ ಸೊಗಸು ಏನು? ನಿಮ್ಮ ಜೀವನರಾಗ ಎನಗಿಂತ ಬಲು ಮಿಗಿಲು ಸುಖಜನ್ಮ ಸಾರ್ಥಕತೆ ನಿಮಗೆ ಏನು? ಸರ್ರೆಂದು ಬುರ್ರೆಂದು ಹಾರುವಿರಿ! ಎಲ್ಲಿಗೋ ? ಆಚೆಯಾ ಗಿಡದ ಪಕ್ಕದಾ ಹೊಲಕೋ? ಗುಡ್ಡದೋರೆಇಂದಿಳೆವ...
ಚಂದ್ರನೂ ಪ್ರಾಣಿ ಪ್ರೇಮಿ; ಕಾಣಿರಾ ಅವನ ಮೊಲದ ಮೇಲಿನ ಪ್ರೀತಿ! *****...
ನಡೆದಿದೆ ಪೂಜಾರತಿ ವಿಶ್ವದೇಹಿಗೆ ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ, ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ ಚಂದನವನ ಚಾಮರ ಬೀಸುತಲಿದೆ ಪರಿಮಳ, ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿರಾಶಿ ಬಣ್ಣದ...
ಸಕಲ ಅಭಿಷ್ಟಕೆ ‘ಹೂಂ’ ಎಂದು ನಿತ್ಯ ನಗುವ ಗಿಡದರಿಳಿದ ಹೂ ಪರಮಾತ್ಮ! *****...
ಪ್ರೇಮಿಗಳು ಎಲ್ಲೆಂದರಲ್ಲಿ ತಮ್ಮ ಹೆಸರಿನ ಹಚ್ಚೆ ಕೊರೆದು ದಾಖಲಿಸಿಕೊಳ್ಳುವುದ ನೆನಪಿಸುತ ನಾನೂ….. ಮರುಭೂಮಿಯಲಿ ಹೆಜ್ಜೆ ಮೂಡಿಸಲು ಹಿಮದಲಿ ಅಕ್ಷರ ಕೆತ್ತಲು ಸಮುದ್ರದಲಿ ಪ್ರೇಮ ದೋಣಿ ಬಿಡಲು ಆಕಾಶದಲಿ ಕಾಮನಬಿಲ್ಲು ಮೂಡಿಸಲು ಹೋದೆ…...
ಹಾರಿಬಂದ ದುಂಬಿಗೆ ಸುಮವು ಸೂಸಿ ನಸುನಗೆ, ಬಾಚಿಕೊಂಡಿತೆನ್ನ ಎದೆಗೆ ಮೆತ್ತೆಯೊಳಗೆ ಮುದುಡಿತವಗೆ | ಇಬ್ಬನಿಯ ತಂಪಕಂಪ ಮೋದ ಪನ್ನೀರ ಸಿಂಚನ, ಚಂದಾನಿಲದಲೆಯಲೆಯಲಿ ಮಧುರ ಗಾಯನ | ಹೊನ್ನ ಮಾಲೆ ಸೌಧ ಸೌಧ ದುಂಬಿದುಟಿಯಲಿ ರನ್ನಮಾಲೆ ತೊಟ್ಟ ಅಮಲು ಸುಮದ ...
ಒಂದು ಕ್ಷಣ ಮೌನ ಭರಿಸಿ ಮಾತು ಸರಿಯಿತು ನೀಲಿ ಆಕಾಶದ ನಕ್ಷತ್ರಗಳು ಮಿನುಗಿದವು. ಒಂದು ಕ್ಷಣ ಪಕ್ಷಿ ಇರುವದೆಲ್ಲವ ಮರೆತ ಹಾಡು ಉಲಿಯಿತು ಬಾನ ತುಂಬ ಪೂರ್ಣ ಬೆಳದಿಂಗಳು. ಒಂದು ಕ್ಷಣ ಕಡಲ ಒಡಲ ತಡಿಗೆ ಉಕ್ಕಿದ ತೆರೆ ಸರಿಯಿತು. ಮರಳ ತುಂಬ ತುಂತುರ ಹನ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





