ಕೆಸರು

ನನಗೇನೊ ಆಗಿದೆ

ಮಾಡಿನ ಮೂಲೆ ಮೂಲೆಯಲಿ
ಹಾಯಿ ಬಿಚ್ಚಿದ ಜೇಡನ ಬಲೆಗಳನೆಲ್ಲ
ಪಿಂಡಮಾಡಿ ನುಂಗಬೇಕೆನಿಸುತ್ತದೆ
ತಲೆಗೂದಲು ಕಿತ್ತು
ಮುಖ ಪರಚಿ
ಲಂಗೋಟಿ ಹರಿದು – ಬೆಂಕಿಯ ಪಂಜು ಹಚ್ಚಿ
ನಗರದ ಬೀದಿ ಬೀದಿಯಲಿ
ಓಡಬೇಕೆನಿಸುತ್ತಿದೆ
ಬುಸುಗುಟ್ಟಿ ಬರುವ
ಮೋಟಾರು ಬೈಕುಗಳಿಗೆ
ಕೊಡಬೇಕು ನನ್ನಯ ಮಂಡೆ ಡ್ಯಾಶ್
ಎನಿಸುತ್ತಿದೆ
ಈ ಇರುವೆ ಜನ ಸಾಲು ಸಾಲಿಗೆ
ಉಗುಳಬೇಕೆನಿಸುತ್ತಿದೆ
ಲೋಳೆ ಲೋಳೆಯಾಗಿ ಒಸರುವ ಈ ಕೆಸರು
ನನ್ನ ಗಂಟಲಿನೊಳಗೆ ನುಗ್ಗುವ ಮುನ್ನ
ನಾ ಸಾಯಬೇಕು
ಎನಿಸುತ್ತಿದೆ
ಅದಕ್ಕೂ ಮುನ್ನ ಈಥರಿನ ಹಾಗೆ
ನಾ ಮಾಯವಾಗಬೇಕು
ಎನ್ನಿಸುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾಗತ
Next post ಅವಳ ನಗು

ಸಣ್ಣ ಕತೆ