ಇದು ಸುಖಸ್ಪರ್ಶ. ಮೈಗೊಂಡು ಬಂತು
ಇದು ಸೂಸಿ ಬಂದ ಹರ್ಷ
ಮಗುಗಳಾಗಮನ ಜೀವ ಸಂಗಮನ
ಜಗಕೆ ಪುಷ್ಪ-ವರ್ಷ.
ಮನದ ಮೂಲೆ ಮೂಲೆಯಲಿ ಮಲೆತ ತಮ
ಶಮನಗೊಳಿಸಲೆಂದು
ಬಳಿಗೆ ಬಂತೆ ಈ ಚಿಗುರು-ಬೆಳಕು
ಮನೆಮನೆಯನುಳಿಸಲೆಂದು.
ದೇವ ಮನದ ಸ್ಮಿತಬಿಂದು ಒಂದು
ಒಂದೊಂದು ಮನೆಗು ಬೇರೆ.
ಜೀವ ಜಾತ್ರೆಯಲಿ ದಿನಂಪ್ರತಿಯ ಶಿವ –
ರಾತ್ರಿಗಿಹುದೆ ಮೇರೆ?
*****








