Home / ಕಥೆ / ಕಿರು ಕಥೆ / ಅನುಭವಾಮೃತ

ಅನುಭವಾಮೃತ

ಹೆಂಗಸರು ಎಷ್ಟೇ ಒಳ್ಳೆಯವರಿದ್ದರೂ ಕೆಲವು ವಿಷಯಗಳು ನಾಲಿಗೆಯ ಮೇಲೆ ನಲಿಯತೊಡಗಿದವೆಂದರೆ ಕೊಂಚ ಮಟ್ಟಿಗಾದರೂ ಅವರು ಚಂಡಿ-ಚಾಮುಂಡಿಯರಾಗುತ್ತಾರೆ.

ಪಂಚಕನ್ಯೆಯರಲ್ಲಿ ಒಬ್ಬಳೆಂದು ಖ್ಯಾತಿಪಡೆದ ಸೀತಾದೇವಿಗೂ ಯಾವ ಕವಿಯಿಂದಲೂ ಹೊಗಳಿಸಿಕೊಳ್ಳದ (ಲಕ್ಷ್ಮಣನ ಮಡದಿ) ಊರ್ಮಿಳೆಗೂ ಹೇಗೋ ಮಾತಿಗೆ ಮಾತು ಹತ್ತಿತು. ಗಂಡಸರೆಲ್ಲ ಬೇಟೆಗೆ ಹೋದ ಸಮಯವಾಗಿತ್ತು.

“ಹದಿನಾಲ್ಕು ವರ್ಷ ನಿಮ್ಮ ಸೇವೆಗೆಂದು ನಿಮ್ಮ ಜತೆಗೆ ಅಡವಿಗೆ ಕಳುಹಿಸಿದ ನನ್ನ ಪತಿಯಿಂದ ಅಗಲಿ ನವೆದದ್ದು ಇಷ್ಟೆಲ್ಲ ಅನ್ನಿಸಿಕೊಳ್ಳಲಿಕ್ಕಾಯಿತೇ ಅಕ್ಕಾ?”

“ನಮ್ಮ ಸೇವೆಗಾಗಿ ನಿನ್ನ ಪತಿಯನ್ನು ಕಳುಹಿಸಿದೆಯಾ? ವ್ಹ! ನನ್ನ ಹಾಗೇ ಹಟ ಹಿಡಿದಿದ್ದರೆ ನೀನೂ ಗಂಡನ ಜತೆಗೆ ಬರುತ್ತಿದ್ದಿಯಲ್ಲ. ನಾವೇ ನಿಮ್ಮ ಸೇವೆ ಮಾಡುತ್ತಿದ್ದೆವು.

“ಪತಿಯು ಬೇಡವೆಂದರೂ ಕೇಳದೆ ಅವನ ಬೆನ್ನು ಹತ್ತುವ ಹಟಗಾರ್ತಿ ನಾನಲ್ಲ ಅಕ್ಕಾ.”

“ನಾನು ಹಟಗಾರ್ತಿಯೆಂದು ನಿನ್ನ ಅಭಿಪ್ರಾಯವೋ?! ಒಂದಲ್ಲ ಎರಡಲ್ಲ, ಹದಿನಾಲ್ಕು ವರ್ಷ ನಮ್ಮಿಂದ ದೂರ ಉಳಿಯುವ ಸಂದರ್ಭದಲ್ಲಿ ಗಂಡಸರು ಏನೆಲ್ಲ ಕಾರಭಾರ ಮಾಡಿಯಾರೆಂಬ ಕಲ್ಪನೆ ನಿನಗಿದ್ದರೆ ನೀನೂ ಹಟಮಾರಿಯಾಗುತ್ತಿದ್ದಿ! ಪಾಪ, ಎಲ್ಲ ಹಲ್ಲೂ ಇನ್ನೂ ಸರಿಯಾಗಿ ಮೊಳೆತಿರದ ನಿನಗೆ ಇದೆಲ್ಲ ಹೇಗೆ ತಿಳಿಯಬೇಕು? ಶೂರ್ಪನಖಿಯ ಬದಲು ಇನ್ನಾವ ಕಾನ್ ಚೆಲುವೆಯಾದರೂ ನಿನ್ನ ಪತಿಗೆ ಗಂಟು ಬಿದ್ದಿದ್ದರೆ ನಿನ್ನ ಫಜೀತಿಯಾಗುತ್ತಿತ್ತು”

“ನನ್ನ ಪತಿಯಲ್ಲಿ ನನಗೆ ಪೂರ್ಣ ವಿಶ್ವಾಸವಿದೆ”

“ಎಲ್ಲರಿಗೂ ಹಾಗೇ. ಆದರೆ ಗಂಡಸಿನ ಒಲವು ಸ್ವಾಭಾವಿಕವಾಗಿ ಬಹುಪತ್ನಿತ್ವದ ಕಡೆಗೆ ಎಂಬುದು ನಿನಗೆಲ್ಲಿ ತಿಳಿಯಬೇಕು? ನಿಜವಾದ ಪತಿವ್ರತೆಯು ಇಂಥ ಸೂಕ್ಷ್ಮಗಳನ್ನೆಲ್ಲ ತಿಳಕೊಂಡು ವರ್ತಿಸಬೇಕು. ಸುಮ್ಮನೆ ಬೆಪ್ಪತಕಡಿಯಂತೆ ಕುಳಿತು ಗಂಡ ಅಂದುದಕ್ಕೆಲ್ಲ ಹುಂಗುಟ್ಟಿದರಾಗಲಿಲ್ಲ. ದಾಂಪತ್ಯಕ್ಕೆ ಎಳ್ಳಷ್ಟು ಅಡೆ-ತಡೆ ಬರುತ್ತದೆಂದು ಕಂಡುಬಂದರೆ ಪತಿಯ ಮನಸ್ಸಿನ ವಿರುದ್ಧ ನಡೆದಾದರೂ ಇಬ್ಬರ ಒಳಿತನ್ನು ಸಾಧಿಸಬೇಕು. ತನ್ನ ಪತಿಯು ಜಗದ್ವಂದ್ಯನೇ ಇದ್ದರೂ ಇಂಥ ಸಂದರ್ಭದಲ್ಲಿ ಪತಿವ್ರತಾ ಶಿರೋಮಣಿಯಾದವಳು ಹಿಂಜರಿಯಬೇಕಾಗಿಲ್ಲ. ಗಂಡಸಿನ ಬುದ್ಧಿಗೆ ನಿಲುಕದ ಎಷ್ಟೋ ವಿಷಯಗಳು ಹೆಂಗಸಿನ ಹೃದಯಕ್ಕೆ ಗೋಚರವಾಗುವದುಂಟು….”

ಅಕ್ಕನ ಅನುಭವಾಮೃತದಿಂದ ಪುನೀತಳಾದ ಊರ್ಮಿಳೆಯು ‘ನಾನು ಅಂದುದಕ್ಕೆ ಕ್ಷಮಿಸವ್ವಾ’ ಎಂದು ಸಾಷ್ಟಾಂಗ ಪ್ರಣಾಮಗೈದಳು.

“ಶ್ರೀರಾಮ ಪತ್ನಿಯ ನುಡಿಯಲ್ಲಿ ಕುಂದಿಲ್ಲವೆಂಬುದನ್ನು ನಂಬಿರು” ಅ೦ದಳು ಸೀತಾದೇವಿ.
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...