Kannada Short Stories

#ಸಣ್ಣ ಕಥೆ

ಆಹುತಿ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಹೆಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯೂ ನಿಶ್ಚಯವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ಇದ್ದರು. ಆದರೆ ಅವರು ಬಹಳ ಬಡವರಂತೆ, ನನಗೇನೋ ಐಶ್ವರ್ಯವಂತರ ಅಳಿಯನಾಗಬೇಕೆಂದು ಬಹಳ ಆಸೆಯಿತ್ತು. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರನಾಗಬೇಕೆಂದು ಬಲವಾದ […]

ಸಣ್ಣ ಕತೆ
#ಸಣ್ಣ ಕಥೆ

ಜೀತ

0
ಇವರ ಪ್ರಕಟಿತ ಕೃತಿಗಳು
ಕವನ: ಕಾವ್ಯಸಾಗರ, ಆಂತರ್‍ಯ, ಸಿಂಗಾರ, ಕೂರಂಬು
ಕಥಾ ಸಂಕಲನ: ಸುರಗಿ
ಮಕ್ಕಳ ಕಥಾ ಸಂಕಲನ: ಬೆಳ್ಳಿ ಬೆಳಕು, ಬೆಳ್ಳಿ ಚುಕಕ್ಕಿ, ಬೆಳ್ಳಕ್ಕಿ ಗೂಡು, ದುರ್‍ಯೋಧನನಿಗೆ ಗೊತ್ತೇ ಆಗಲಿಲ್ಲ
ಇತರೆ: ಮಹಾಬಲೇಶ್ವರ ಭಟ್ಟರು (ವ್ಯಕ್ತಿ ವಿಶೇಷ), ಮಹಾಬಲ (ಟಿ. ಮಹಾಬಲೇಶ್ವರ ಬಟ್ಟರ ಅಭಿನಂದನಾ ಗ್ರಂಥ), ಆಧುನಿಕ ವಚನಗಳು ಭಾಗ - ೧
Latest posts by ಪ್ರಕಾಶ್ ಆರ್‍ ಕಮ್ಮಾರ್‍ (see all)

ಭೀಮನಾಯಕನ ಮನೆಯಲ್ಲಿ ಗದ್ದಲವೋ ಗದ್ದಲ. ಹೆಣ್ಣುಮಕ್ಕಳ ಕೂಗಾಟ, ಅಳುವುದು, ಮಕ್ಕಳ ಚೀರಾಟದಿಂದ ಮನೆಯು ತುಂಬಿತ್ತು. ಅತ್ತು ಅತ್ತು ಎಲ್ಲರ ಮುಖವೂ ಊದಿ ಹೋಗಿತ್ತು. ಊರಿನ ದೊಡ್ಡ ಸಾಹುಕಾರನ ಕಾಲು ಹಿಡಿದುಕೊಂಡು “ನಮ್ಮಪ್ಪನ ಹೆಣ ಬಿಟ್ಟುಬಿಡ್ರಪ್ಪೋ, ಹೆಣಾನ ಸುಡುಗಾಡಿಗೆ ಒಯ್ಯಲು ಬಿಡ್ರಪ್ಪೋ” ಎಂದು ಹೊಯ್ಕೊಳ್ಳುತ್ತಿದ್ದರು; ಭೀಮನಾಯಕನ ಮಕ್ಕಳು. ಭೀಮನಾಯ್ಕನು ಸಾಹುಕಾರ ನಾಗಪ್ಪನ ಹತ್ತಿರ ಐವತ್ತು ವರ್ಷಗಳಿಂದ ಜೀತದಾಳಾಗಿದ್ದ. […]

#ಸಣ್ಣ ಕಥೆ

ಹೋಗಿಯೇ ಬಿಟ್ಟಿದ್ದ!

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು. ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ ‘ಸತ್ಯವು […]

#ಸಣ್ಣ ಕಥೆ

ಕೆಂಪು ಲುಂಗಿ

0
ಬಾನು ಮುಷ್ತಾಕ್
Latest posts by ಬಾನು ಮುಷ್ತಾಕ್ (see all)

ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ… ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ…. ಯಾರಾದರೂ ಬಿದ್ದರೆ, ಕೈಕಾಲು ಮುರಿದುಕೊಂಡರ? ಅಷ್ಟೇ ಅಲ್ಲ ಅವರದೇ ಲೋಕದಲ್ಲಿ ಅವರದೇ ನ್ಯಾಯ ದಂಡದ ಆಧಾರದ ಮೇಲೆ ಅಳು, ನಗು ಶಿಕ್ಷೆ… ಇವೆಲ್ಲಾ ಇದ್ದದ್ದೇ. ಹೀಗಾಗಿ ಬೇಸಿಗೆ ರಜಾ ಬಂದದ್ದರಿಂದ […]

#ಸಣ್ಣ ಕಥೆ

ದೊಡ್ಡ ಬೋರೇಗೌಡರು

0

ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ – ಅದರಲ್ಲಿಯೂ ಮುಖ್ಯವಾಗಿ ಇಂಗ್ಲಿಷು ಜನರಿಗೆ – ಇದೊಂದು ಮಾದರಿ ಸಂಸ್ಥಾನ ಎಂಬ ಅಭಿಪ್ರಾಯ ಹುಟ್ಟುವ ರೀತಿಯಲ್ಲಿ ಅಭಿವೃದ್ಧಿ ಪ್ರಕಾಶನ ಮಾಡುವುದರಲ್ಲಿಯೂ ಕೇವಲ ಸಂಖ್ಯಾಬಾಹುಳ್ಯದಿಂದ ವಿದ್ಯಾ ಪ್ರಚಾರವನ್ನು ಅಳೆಯುವುದರಲ್ಲಿಯೂ ನಿರತರಾಗಿರುವರೆಂದು […]

#ಸಣ್ಣ ಕಥೆ

ಸಾವು

0
ಬಾನು ಮುಷ್ತಾಕ್
Latest posts by ಬಾನು ಮುಷ್ತಾಕ್ (see all)

ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್ನೆದೆಯ ಭಯಾನಕತೆಯೇ, ಇಲ್ಲ…. ನಿಸರ್ಗದ ನಿಜವಾದ ಮುಖವೋ…? ನನ್ನ ಅಸ್ತಿತ್ವವೇನೋ ಕ್ಷುಲ್ಲಕವಾದುದು. ಇಡೀ ಕಾನನವೇ ಅದುರುವಂತಹ ಈ ಗರ್ಜನೆ ಸಿಂಹದ್ದು ಮಾತ್ರವಾಗಿರಲು ಸಾಧ್ಯ ಅಥವ […]

#ಸಣ್ಣ ಕಥೆ

ಬೋರ್ಡು ಒರಸುವ ಬಟ್ಟೆ

0

ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಉಪಾಧ್ಯಾಯರ ತಿಳಿವಳಿಕೆ ಬಗ್ಗೆ ಸರ್ಕ್ಯುಲರುಗಳನ್ನು ರಂಗಣ್ಣ ಕಳುಹಿಸಿದನು. ಉಪಾಧ್ಯಾಯರೊಡನೆ ಏಗುವುದರಲ್ಲಿ, ಅವರಿಗೆ ತಿಳಿವಳಿಕೆ ಕೊಡುವುದು ದೊಡ್ಡ ತೊಂದರೆಯಾಗಿರಲಿಲ್ಲ. ಕೊಟ್ಟ ತಿಳಿವಳಿಕೆಯನ್ನು ಆಚರಣೆಗೆ ತರುವಂತೆ ಮಾಡುವುದೇ […]

#ಸಣ್ಣ ಕಥೆ

ಹುಟ್ಟು

1
ಬಾನು ಮುಷ್ತಾಕ್
Latest posts by ಬಾನು ಮುಷ್ತಾಕ್ (see all)

ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ಹೂವಿನ ಲಡಿಗಳಿಂದ ಆವೃತವಾದ ‘ಸೆಹರ’ ವನ್ನು ಹಾಕದೆ, ಸಾಧಾರಣವಾಗಿ ಗುಲಾಬಿ ಹಾರವನ್ನು ಹಾಕಿ ಸಲ್ವಾರ್, ಅಚ್ಕನ್, ಟೋಪಿಯಲ್ಲಿ ಚಂದವಾಗಿ ಕಾಣುತ್ತಿದ್ದ. […]

#ಸಣ್ಣ ಕಥೆ

ಮೇಷ್ಟ್ರು ರಂಗಪ್ಪ

0

ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠಶಾಲೆಗಳಿಗೆ ಕಟ್ಟಡಗಳಿಲ್ಲ. ಮಾರಿಗುಡಿ, ಆಂಜನೇಯನ ದೇವಸ್ಥಾನ, ಚಾವಡಿ, ಹಳೆಯ ಮರುಕಲು ಮನೆ- ಇವುಗಳಲ್ಲೇ ಬಹುಮಟ್ಟಿಗೆ ಪಾಠಶಾಲೆಗಳು ನಡೆಯುತ್ತಿದ್ದುವು. ಸರ್ಕಾರದ ಕಟ್ಟಡಗಳು ಕೆಲವು […]

#ಸಣ್ಣ ಕಥೆ

ದೇವರು ಮತ್ತು ಅಪಘಾತ

0
ಬಾನು ಮುಷ್ತಾಕ್
Latest posts by ಬಾನು ಮುಷ್ತಾಕ್ (see all)

ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದುರು ಸೋತು ಸುಮ್ಮನಾಗಿದ್ದರು. ಅವಳೇ ನಿಂತು ಮಣ್ಣಿನ ಗೋಡೆಗಳನ್ನು ಸಿದ್ಧಪಡಿಸಿ ಸೂರನ್ನು ಹೊದಿಸಿದ್ದಳು. ಹೀಗಾಗಿ ಅವಳ ಉಳಿತಾಯವೆಲ್ಲಾ ಗುಡಿಸಲ ರೂಪವನ್ನು ಪಡೆದಿತ್ತು. ಕೆರೆಯಲ್ಲಿ ನೀರು ಏರಿದರೆ ಅವಳ […]