ಪಾಠಕವರ್ಗ! ಇದು ‘ರಾಜಾಸ್ಥಾನದ ಇತಿಹಾಸ ಮಂಜರಿ’ ಯಲ್ಲಿನ ಒಂದು ಸಣ್ಣ ಕಥೆಯ ಅವಲಂಬನವಾಗಿರುವುದು. ಗ್ರಂಥವು ಚಿಕ್ಕುದಾದರೂ ಹಲವು ನೀತಿಗಳು ಅಡಕವಾಗಿರುವುವು. || ಶ್ರೀ || ಅಂಬಾಲಿಕೆ ಒಂದನೆಯ ಅಧ್ಯಾಯ. ಒಂದು ದಿವಸ ದುರ್ಗದ ರಾಜೋದ್ಯಾ...