ರಾತ್ರಿ ಎಲ್ಲರೂ ಮಲಗಿದ ಮೇಲೆ
ಗುಟ್ಟಾಗಿ ನನ್ನ ಹಾಸಿಗೆಗೆ ಬಂದು ಸುಖಿಸಿ
ಬೆಳಗಾಗುವಷ್ಟರಲ್ಲಿ ಮಂಗಮಾಯವಾಗುವುದರಲ್ಲೇನಿದೆ ಮಹಾ ಪೌರುಷ
ಸವಿಗನಸೇ ನೀನೊಬ್ಬ ವಿಟ ಪುರುಷ.
*****