
ಕಿಬ್ಬನಹಳ್ಳಿ ಕ್ರಾಸು ಅಷ್ಟೇ ಅಂದುಬಿಟ್ಟರದು ಬರಿ ಪ್ರೋಸು ದಾಟುವುದೇ ಬಲು ತ್ರಾಸು ಎಂಬಷ್ಟನ್ನದಕ್ಕೆ ಸೇರಿಸಿದರೆ ಪಯಿಟ್ರಿಯಾಗಿ ಬಿಡುತ್ತದೆ ನೋಡಿ ಸಲೀಸು ಪೊಯಟ್ರಿ ಅಂದ್ರೆ ಅಷ್ಟೇಂತಲ್ಲ ಇದೊಂದು ಸ್ಯಾಂಪಲ್ ಪೀಸು. *****...
ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ ತಿಳಿಯಲಾರೆಯಾ ತಿಂಗಳನ ಬೆಳಕು ? ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ ! ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು! ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ ಆ ಶರಣ ಸಾತ್ವಿಕತೆಯ ಸವಿಯ ಬಾ ಲಾಸ್ಯ ಲಾವಣ್ಯದ ಲೀಲಾ ...
ಓ ಮುಪ್ಪೇ ಈ ಅವಸರ ನಿನಗೆ ಒಪ್ಪೇ? ಯೌವನವೇ ಇರಲೆಂದು ಆಶಿಸಿದ್ದು ತಪ್ಪೇ? *****...
ನೀ ಬೆಳೆಯಬೇಕು ಎತ್ತರ ನಿನ್ನ ಎತ್ತರಕ್ಕಾದರೂ, ಶೂನ್ಯ ದಿಂದಾಚೆಗೆ! ಎತ್ತರಕ್ಕೆ, ಏರಿ, ಸುತ್ತ ನೀ ನೋಡು ಅಷ್ಟಿಷ್ಟು ಹಿತ ನಿನಗೂ, ನನಗೂ, ಅದಕಾಗಿ ಇರಬೇಕು ಅವನಿರುವ ತಾಣ ಏಳೆತ್ತರಗಳ ಮೇಲೆ! ಹತ್ತುವ ಖುಷಿ, ಅದರ ಗಮ್ಮತ್ತು, ಒಂದೊಂದು ಹಂತವೂ, ಆಸ್...
ಚಿವುಟಿದರು ಚಿಗುರಿದರು ನಿನಗೆ ಸಾವು ಹುಟ್ಟುಗಳ ಲೆಕ್ಕವಿಲ್ಲ ಪುನರಪಿ ಜನನಂ ಪುನರಪಿ ಮರಣಂ ಸದಾ ಕರಪಾದೆಶಯನಂ *****...
“ಇವರು ಯಾರು” ಎಂದು ಗಾಂಧಿಯವರ ಕುರಿತು ಬಗೆವರೆ ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ? ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು || ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು ಘೋ...
ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ ಮೂರುನಾಲ್ಕೋ ಚಮಚ ರಕ್ತ, ಮಾಂಸ, ಜೊತೆಗಿರಿಸು ವಾಪವಂ ನೆರೆತೆರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ; ಹುಚ್ಚು- ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ; ಹಾಲುಹಸುಳೆಯ ಮಂದಹಾಸ...
ಕಲ್ಲು ಮುಳ್ಳಿನ ಹಾದಿ ಸವೆದ ಬದುಕು ಅಳೆಯಲಾರದ ಕಾಲ ಇಂದು ನಿನ್ನೆಯ ನೆನಪುಗಳ ಬಂಧಿ ಬಯಕೆಗಳ ನಾಳೆಗಳ ಆಲಂಗಿಸು ಜೀವ ಎಂದೂ ಹಿಮ್ಮುಖವಾಘಿ ಚಲಿಸುವದಿಲ್ಲ. ದುಃಖದ ಸೆರಗಿನಲಿ ಸುಖದ ಮುಖ ತಕ್ಕಡಿ ತೂಗಿದಂತೆ ಸಮ ಸಮ ಆತ್ಮಗಳು ಮುಲುಕಾಡಿ ವಿರಮಿಸುತ್ತವೆ...
ಸುಖದುಃಖಗಳ ನಡುವೆ ಸಿಕ್ಕಿ ಸಂತಾಪದಲಿ ಕಾವಿನಲಿ ಬೇಯುತಿದೆ ನನ್ನ ಬಾಳು; ಇದನೆಲ್ಲ ಮರೆಸುತ್ತ ಒಲವ ಬೆಳಕಿನಲಿನ್ನ ಹೃದಯವನು ಅರಳಿಸುತ ಬೆಳಗು ನನ್ನ ಉಷೆ! ಬಾಳ ಭೀಕರ ಇರುಳ ಕಾತರದಿ ಕೂಗಿದೆನು ಹೃದಯ ಬರಿದಾಗಿಹುದು ಮಂಜು ನಂಜು ಜೀವ ಹಿಂಡುತಲಿಹುವು! ...
ಅಧ್ಯಾಯ ೫ ಕರಿಗೌಡರು ತಮ್ಮ ಈಡಿನ ಜಾಣ್ಮೆ ಬಗ್ಗೆ ಹೇಳಿಕೊಂಡುದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಸಹ್ಯಾದ್ರಿಯ ಈ ಕಡೆ ಅವರಷ್ಟು ಹೆಸರು ಹೊಂದಿದ ಬೇಟೆಗಾರರು ಇನ್ನು ಯಾರೂ ಇರಲಾರರು. ಬೇಟೆ ಅವರಿಗೆ ರಕ್ತಗತವಾಗಿ ಬಂದಂತೆ ಬಂದಿತ್ತು. ಚಿಕ್ಕಂದಿನಲ್...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














