ಅಮ್ಮ ನನಗೆ ಬಂದೂಕು ಕೊಡಿಸು ನಾನು ಸೈನಿಕನಾಗುವೆ ದೇಶ ಸೇವೆ ಮಾಡುವೆ ವೀರನಾಗಿ ಹೋರಾಡುವೆ ಶತೃಗಳನು ಸದೆ ಬಡಿಯುವೆ ತಾಯಿ ಭಾರತಿಯ ಉಳಿಸುವೆ *****...

ಈ ಬೀದಿಯಲಿ ಎಷ್ಟೊಂದು ಗೂಡಂಗಡಿಗಳು ಹೊಟ್ಟೆ ಉಬ್ಬಿದ ಬಸುರಿಯಂತೆ ತುಂಬ ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ. ಜನರ ಪಾದದ ಗುರುತುಗಳು ಒಂದರ ಮೇಲೊಂದು ಹೊಂದಿಕೊಂಡಿವೆ ಗೆರೆಯಂತೆ ಕಾಣುವ ರಸ್ತೆಯಲಿ ಮಕ್ಕಳ ಕೈ ...

ಕಣ್ಣೀರಿನ ಕಡಲಿನ ಮೇಲೆ ಮಿಂಚಿದೆ ನನ್ನೀ ಬಾಳಿನ ಒಲವಿನಲೆ! ದೂರ ತೋರಿದಾ ನೀಲ ಬೆಟ್ಟಗಳ ನೀಲ ಮುಗಿಲಿನಲ್ಲಿ ಮುಳುಗು ಸೂರ್ಯನಾ ಕೆಂಪು ಕಾಡಿಗೆಯ ಬಣ್ಣ ಮಡಿಲಿನಲ್ಲಿ ತಾರೆ ಓರೆಯಲಿ ನಿಂತು ನೋಡುತಿರೆ, ಅಲೆಯು ಮೇಲೆ ಹೊಮ್ಮಿ ಚಿಣ್ಣ ಚಿಣ್ಣನೇ ದುಗುಡ ಹ...

ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ ಕೂದಲನ್ನು ಕೊಡವುತ್ತಲೇ ಅಮ್ಮೀ…… ಅಮ್ಮೀ ಎಂದು ಕಿರುಚಿದಳು, ಒಣ ಬ...

ನವಿಲಿನ ಕಣ್ಣಿನ ಬಣ್ಣವ ಹಿಡಿದು ಮುಳುಗುವ ಸೂರ್ಯನ ಕಿರಣವ ತಡೆದು ಮಾರ್ಗದ ಮಧ್ಯೆ ನಿಲ್ಲಿಸುವವರು ಪೋಸ್ಟರ್ ಬರೆಯುವ ಅನಾಮಿಕರು ರೆಡ್ಡಿಯಂಗಡಿ ಅಟ್ಟದ ಮೇಲೆ ಬಣ್ಣ ಬಣ್ಣಗಳ ಸರಮಾಲೆ ಸಕ್ಕರೆ ಕಾರ್ಖಾನೆಯಲಿ ನಾಳೆಯಿಂದ ಸಂಪು ಅದಕೆಂದೇ ಇಲ್ಲಿ ಇಷ್ಟೊಂದ...

ಬೀಜ ಬೇರೂರಿ ಕುಡಿ ಇಡುತ್ತಿರುವಾಗಲೇ ಹತ್ತಿಕೊಂಡಿತ್ತು ಗೆದ್ದಲು ಬಿಡಿಸಿಕೊಳ್ಳಲು ಹರಸಾಹಸಗೈದರೂ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಗೆದ್ದಲು ಹಿಡಿದ ಬೀಜ ಸಾಯುವುದೇ ದಿಟ ಎಂದುಕೊಂಡರೂ ಹಾಗಾಗಲಿಲ್ಲ ಉಳಿವಿಗಾಗಿ ಹೋರಾಟ ತುಸು ಉಸಿರುವವರೆಗೂ ಚಿಗುರಿಕೊಂ...

ಮುಂಜಾವದ ತಂಪೊತ್ತಿನಲ್ಲಿ ಕೆಂಪು ಹೃದಯದ ಹುಡುಗಿ ರಸ್ತೆಯಂಚಿನಲ್ಲಿ ನಿಂತಿದ್ದಾಳೆ. ಯಾಕೆ? ಎಂದು ಕೇಳಬೇಕು, ಹೇಗೆ ಕೇಳುವುದು? ನೆಲವನ್ನು ಜಗ್ಗಿ ಹಿಡಿದಿರುವ ಕಾಲು. ಸೋತು ತೂಗುತ್ತಿರುವ ಕೈಗಳು. ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು ಇವಳ...

ಸಿಕ್ಕಿದ್ದನ್ನೆಲ್ಲಾ ದೋಚಿ ದುಡ್ಡು ಮಾಡುತಿದ್ದ ನಮ್ಮೂರ ಕಂತ್ರಿ ಇದ್ದಕ್ಕಿದ್ದಂತೆ ಲಾಟರಿ ಎದ್ದು ಆಗೇಬಿಟ್ಟ ನೋಡಿ ಶಾಸಕ + ಮಂತ್ರಿ ಯಾವುದೋ ತೆರೆದ ವಿಶ್ವವಿದ್ಯಾಲಯ ಗುಟ್ಟಾಗಿ ಕೊಟ್ಟಿತು ಅವನಿಗೊಂದು ಬಿ.ಎ. ಮನೆಗೆಲಸಕ್ಕೆ ಬರುತ್ತಿದ್ದ ಸಾವಂತ್ರ...

[ಶಿಶುಗೀತೆ] ಡ್ಯಾಡಿ ನೀನೆ ಮಾಮಿ ನೀನೆ ಮಮ್ಮು ನೀಡುವ ದೇವನೆ ಚಿಗರಿ ನಾವು ಬಗರಿ ನಾವು ಚಿಮ್ಮಿ ಆಡಿಸು ತಂದೆಯೆ ಹಾಡು ನಮ್ಮದು ಹೆಜ್ಜೆ ನಮ್ಮದು ಹಣ್ಣು ಹೂವು ನಮ್ಮವು. ಮಳೆಯು ನಮ್ಮದು ಇಳೆಯು ನಮ್ಮದು ಪಕ್ಕ ಬೀಸಿ ಪುಟಿವೆವು ಮುಗಿಲು ನಮ್ಮದು ಗಗನ ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....