
ಅನ್ಯಾಯ ಖಂಡಿಸಲು ಒಬ್ಬರಿಗೂ ಇಲ್ಲ ಎದೆಗಾರಿಕೆ ನೋಡಾ ಖಂಡಿಸಲು ಹೋದವರು ಮಾಯವಾದರಲ್ಲ ಅದೇ ಪವಾಡ *****...
ಬಿಳಿಯ ಗೋಡೆಯಲಿ ಬರೆದ ಅಕ್ಷರಗಳು ಮಾಯುವುದಿಲ್ಲ ಬೇಗನೆ ದಾರಿಯಲಿ ನಡೆವವರನ್ನು ನೋಡುತ್ತ ಕುಳಿತುಕೊಳ್ಳುತ್ತವೆ ಸುಮ್ಮನೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗುತ್ತ ಹೊಗುತ್ತವೆ ಅರ್ಥವಾಗದಿದ್ದಾಗ ಪ್ರಶ್ನೆಗಳ ರೂಪದಲಿ ಬಹುಕಾಲ ಕಾಡುತ್ತವೆ ಕಾಲ ...
ಮನೆಯ ದೀಪ ಹೆಣ್ಣು ಸಂಸಾರಕ್ಕೆ ಅವಳೇ ಕಣ್ಣು ಕೊಳೆ ಜಾಡಿಸಿ ಮನೆಯ ತಮ ಓಡಿಸಿ ಮನದ ಹಂಡೆ ಒಲೆಗೆ ಉರಿಹಚ್ಚಿ ನೀರ ಹೊಯ್ದು ಮನೆ ಮಂದಿಗೆಲ್ಲಾ ಎಣ್ಣೆ ಮಜ್ಜನ ಗೈದು ಹಿಂಡಲಿ ಕಾಯಿ ಮೆಟ್ಟಿ ಬಲಿಯ ಪಾತಾಳ ಕಟ್ಟಿ ಬರುವಾಗ ಪತಿರಾಯಗೆ ಆರತಿಯ ಎತ್ತಿ ಸಿಹಿ ಊ...
೧ ಸರಿರಾತ್ರಿಯಲ್ಲಿ ಹುಡುಗಿ ಕನಸು ಕಾಣುತ್ತಿದ್ದಾಳೆ. ಅವಳ ಕನಸು ಹೀಗಿದೆ: ಪೇಪರಿನವನ ಚರಪರ ಚಪ್ಪಲಿ ಸದ್ದಿನಲ್ಲಿ ಹಾಲಿನವನ ಅವಸರದ ಗುದ್ದಿನಲ್ಲಿ ಇಬ್ಬನಿಯಲ್ಲಿ ತೊಯ್ದ ಹೂವಿನೊಡತಿಯ ದನಿಯಲ್ಲಿ ಬೆಳಗಾಗಿದೆ ಮುಲ್ಲ ಅಲ್ಲಾನಿಗಾಗಿ ತುಟಿ ಬಿಚ್ಚಿದ್ದ...
ಈಗ ಯಾರು ಸಿಗುವುದಿಲ್ಲ ಲಂಚ್(ಅ) ತಿನ್ನುವ ಸಮಯ ಎಲ್ಲರೂ ಅವರವರ ಪಾಲಿನ ಲಂಚ್(ಅ) ತಿನ್ನುತ್ತಿರುತ್ತಾರೆ ಕಾರಖೂನರು ಬಹಿರಂಗದಲ್ಲಿ ಅಧಿಕಾರಿಗಳು ಆಂಟಿ(ಯ) ರೂಂನಲ್ಲಿ. *****...
ಮೂಲವತನದ ಮೌನ ಲೋಲನೆ ನಿನಗೆ ನಾ ಪಂಚಾಮೃತಂ ಮುಕ್ತಿಧಾಮದ ಮುಗ್ಧಲೀಲನೆ ಕೊಳ್ಳುಕೋ ದಿವ್ಯಾಮೃತಂ ಬಾಯಿ ಗಿಂಡಿಯು ದೇಹ ಹಂಡೆಯು ಆತ್ಮ ಕೆಂಡವ ಹಾಕಿದೆ ಮಾಯ ಕುಳ್ಳಿಗೆ ಮೋಹ ಕಳ್ಳಿಗೆ ಯೋಗ ಕೊಳ್ಳಿಯ ಹಚ್ಚಿದೆ ಕಣ್ಣ ಸುಟ್ಟು ಕೈಯ ಸುಟ್ಟು ನನ್ನ ಸುಟ್ಟು ...
ಎಲ್ಲ ಮನೆಗಳ ಬೇಡದ ವಸ್ತುಗಳೂ ಬಂದು ಬೀಳುತ್ತವೆ ಕಸದ ತೊಟ್ಟಿಗೆ; ಬಾಳಲು ಒಟ್ಟಿಗೆ! *****...
ಭಯೋತ್ಪಾದಕರ, ಕಳ್ಳಕಾಕರ ಭಯದಿಂದಾಗಿ ಮನೆಗಳನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಒಂದೊಂದು ಸಲ ಮೋಸವಾಗಿ ಬಿಡುತ್ತದೆ. ಎಂತಹ ಭದ್ರತೆ ಇದ್ದರೂ ಕಳ್ಳತನ ಅಥವಾ ಕೊಲೆ ಜರುಗೇ ಇರುತ್ತದೆ. ಇಂಥದ್ದನ್ನೆಲ್ಲ ಹೋಗಲಾಡಿಸಿ ಭದ್ರತೆಯ ಭವನಗಳನ್ನು ಕಟ್ಟಬೇಕೆಂಬ ...
ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ತುಳಿದು ಆಳಲಾಗದಂಥ ಬಾಳಿಗೆ ಹೊನ್ನಿನ ತೋರಣವ ಬಿಗಿದ ನಾಳೆಗೆ ಹೊಂಬಿಸಿಲಿನ ಹಾದಿಗೆ ಕೇದಗೆ ಹೂ ಬೀದಿಗೆ ಮಾತೆಲ್ಲವು ಕೃತಿಯಾಗುವ ಜಾಡಿಗೆ ...
ಹಸಿಹಿಟ್ಟು ತಟ್ಟಿತಟ್ಟಿ ಒಂದೇ ಪದರದ ರೊಟ್ಟಿ ಹಾಳೆ. ಕಾವಲಿಯ ಮೇಲೆ ಬೇಯಲಿಕ್ಕಿದ್ದೇ ಉಬ್ಬಿದೆರಡು ಪದರ. ರೊಟ್ಟಿ ಒಂದೇ ಪದರವೆರಡು. ಆಂತರ್ಯ ನಿರ್ವಾತ ಬಹಿರ್ಮುಖ ಸಾಂಗತ್ಯ ಹಸಿವೆಗೆ ಅನೂಹ್ಯ....
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...














