ನಿನಗೆ ನಾ ಪಂಚಾಮೃತಂ

ಮೂಲವತನದ ಮೌನ ಲೋಲನೆ
ನಿನಗೆ ನಾ ಪಂಚಾಮೃತಂ
ಮುಕ್ತಿಧಾಮದ ಮುಗ್ಧಲೀಲನೆ
ಕೊಳ್ಳುಕೋ ದಿವ್ಯಾಮೃತಂ

ಬಾಯಿ ಗಿಂಡಿಯು ದೇಹ ಹಂಡೆಯು
ಆತ್ಮ ಕೆಂಡವ ಹಾಕಿದೆ
ಮಾಯ ಕುಳ್ಳಿಗೆ ಮೋಹ ಕಳ್ಳಿಗೆ
ಯೋಗ ಕೊಳ್ಳಿಯ ಹಚ್ಚಿದೆ

ಕಣ್ಣ ಸುಟ್ಟು ಕೈಯ ಸುಟ್ಟು
ನನ್ನ ಸುಟ್ಟು ಬೇಸಿದೆ
ಹಮ್ಮು ಬಿಮ್ಮು ಸೊಮ್ಮು ಸುಟ್ಟು
ನಿನಗೆ ಪಾಯಸ ಮಾಡಿದೆ

ಕೊಳ್ಳು ಕೋಕೋ ರಸದ ತುತ್ತನು
ಆತ್ಮರಸವೇ ಶಿವರಸಂ
ತುತ್ತು ತುತ್ತಿಗು ಶಿವನ ತೂಗಿಸು
ಯೋಗ ರಸವೆ ಸಮರಸಂ


Previous post ಕಸ
Next post ಲಂಚ ತಿನ್ನುವ ಸಮಯ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…