ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್‌ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇರೆ ಮರಗಿಡಗಳು “ಅಯ್ಯೋ! ಈ ಸುದ್ದಿಗಳಿಗಾಗಿ ನಮ್ಮ ಒಡನಾಡಿ ಗಿಡ ಮರಗಳು ಸತ್ತವು. ಇನ್ನು ನಾವು ಒಂದು ದಿನ ಸಾಯಬೇಕೆ?” ಎಂದು ಮಮ್ಮಲ ಮರುಗುತ್ತಿದ್ದವು.
*****