ಕಲಾವಿದರ ಹಾಡು

ರಂಗವಲ್ಲಿ… ರಂಗವಲ್ಲಿ ಈ ರಂಗದಲ್ಲಿ
ಬರೆದೇವು ನಾವು ಬಾಳಿ ಬದುಕಿದ ರಂಗವಲ್ಲಿ
ಪ್ರೀತಿ ಚೆಲ್ಲಿ ಸ್ನೇಹ ಚೆಲ್ಲಿ ಬಂದೆವಿಲ್ಲಿ
ಬಾಳಿಗೊಂದು ಬಣ್ಣವಾದೆವೀ ರಂಗದಲ್ಲಿ ||

ನರನಾಡಿಯಲ್ಲಿ ನೂರೆಂಟು ಕಣ್ಣು
ಅಭಿನಯವೆ ನಮ್ಮ ಬದುಕು
ಕಲೆಯನ್ನು ನಂಬಿ ಹೊರಟಿರುವ ನಮಗೆ
ಅಭಿಮಾನವೊಂದೆ ಬೆಳಕು ||

ಸಿಡಿಲನ್ನು ಸೀಳಿ ಮಳೆರೂಪ ತಾಳಿ
ಭೂತಾಯಿ ಬೆಳೆದ ಮಂದಿ
ಹಸಿರಾಗಿ ಬಾಳಿ ಹಸನಾಗಲೆಂದು
ಅಭಿನಯದ ಹಾಡು ನಾಂದಿ ||

ಬಣ್ಣ ಬಣ್ಣಗಳು ಅರಳಿ ನಿಂತಂಥ
ಕಲೆಯ ಬಳಗ ನಾವು
ಕಣ್ಣು ಕಣ್ಣುಗಳ ಕರುಳು ಬೆಳೆದಂಥ
ಹೊಸ ಬಾಳ ಕನಸು ನಾವು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಹರನ ರಗಳೆಗಳು : ಸಾಂಸ್ಕೃತಿಕ ಮುಖಾಮುಖಿ
Next post ನಾವೂ ಸಾಯಬೇಕೆ?

ಸಣ್ಣ ಕತೆ

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಜಂಬದ ಕೋಳಿ

  ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…