ಏಕೆ? ಕಣ್ಣಂಚಲಿ

ಏಕೆ? ಕಣ್ಣಂಚಲಿ
ಕಂಬನಿ ಹೊರಸೂಸಿ
ಕಣ್ಣಬಟ್ಟಲುಗಳು
ತುಂಬಿ ಬಂದಿಹವು|
ಯಾವುದೋ ಎದೆಯಾಳದ
ನೋವ ಹೊರಹಾಕಲು
ಹೃದಯ ತಳಮಳಿಸುತಿಹುದು||

ಹಳೆಯ ಪ್ರೇಮದನುಭವದ
ಸಿಹಿಕಹಿನೆನಪು, ನನ್ನ
ನೆನಪಿಸಿಯೊಮ್ಮೊಮ್ಮೆ
ದುಃಖವನು ತಂದಿಡುವುದು||

ಅಂದು ನಿನ್ನಂತರಂಗವ
ಅರಿತು ನಿನ್ನ ಪ್ರೀತಿಯ
ಸ್ವಾಗತಿಸಿ
ಆಸ್ವಾದಿಸಿದಿದ್ದರೆ
ಅದೆಷ್ಟು ಚೆನ್ನವೆಂದೆನಿಸಿ
ದುಃಖ ಉಲ್ಬಣಗೊಳ್ಳುತಿದೆ||

ಅಂದು ನೀನಾಗಿ ಬಂದು
ನಿನ್ನಾಭಿಲಾಷೆಯನು
ಮುಚ್ಚುಮರೆ ಇಲ್ಲದೆ
ತೆರೆದಿಟ್ಟಾಗ, ನಾನು
ನಾಟಕೀಯ ಉತ್ತರ ನೀಡಿ
ಏನನೋ ಸಾಧಿಸಿದೆನೆಂದು ಬೀಗಿ,
ನಿನ್ನ ಬೇಸರಗೊಳಿಸಿದ ನೆನೆದು
ದುಃಖ ಉಮ್ಮಳಿಸುತಿಹುದು|

ಇಂದು ನನ್ನಿಂದ ನನ್ನ ಜೀವನ
ಹೀಗೆ ಬರಡಾಗಿರುವುದ ಕಂಡು|
ನಿನ್ನ ನಿಷ್ಕಲ್ಮಷ ಪ್ರೀತ್ಯಾದರ
ಆಹ್ವಾನ ನಿರ್ಲಕ್ಷಿಸಿದುದಕೆ ಇಂದು
ದುಃಖ ಉದ್ಭವಿಸುತಿಹುದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೂ ಸಾಯಬೇಕೆ?
Next post ದೀಪ ಬೆಳಗಿಸು

ಸಣ್ಣ ಕತೆ

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…