ಮಾನವ ನಿನ್ನೆದೆಯ ಗುಡಿಸು
ಅದರಲಿ ದೀಪವ ಬೆಳಗಿಸು
ಜ್ಯೋತಿವಿದ್ದರೆ ತಮಸ್ಸು ಇಲ್ಲ
ಮತ್ತೆ ನಿನಗೆ ಭಯವೂ ಇಲ್ಲ
ಅಂಧಕಾರದ ಮಾಯಾ ಮೋಹ
ನಿತ್ಯವು ನಿನ್ನ ಸುತ್ತವರಿದಿದೆ
ಮೋಸ ವಂಚನೆ ಪವು
ನಿ ಮೇಲೆಳದಂತೆ ಬೇಲಿ ಬಿಗಿದಿದೆ
ಮಲಗಿರುವ ಒಡೆಯನಿಗೆ ಎಚ್ಚರುಸು
ಬಾಗಿಲಲ್ಲಿ ಸಜ್ಜಾಗಿ ನೀ ನಿಲ್ಲು
ಅರ್ಭಟದಿ ಎತ್ತೆತ್ತ ಮೆರೆದರೆ
ನಿಲ್ಲಿಸು ಆ ಹೊಯ್ದಾಟದ ಗುಲ್ಲು
ಹರಿಯೊಂದಿಗೆ ನಿ ಇರಲು ಚಿಂತೆಯೇ
ನಿನ್ನದೆಲ್ಲವೂ ಅವನಲ್ಲಿ ಬಿತ್ತರಿಸು
ಕೇಳಿ ನಿನ್ನನ್ನು ತಾನೆ ಕಾಪಾಡುವವನು
ಮಾಣಿಕ್ಯ ವಿಠಲನಲಿ ನಂಬುಗೆ ಇರಿಸು
*****
















