ತಂತ್ರಜ್ಞಾನದ ಭದ್ರತೆಯ ಭವನಗಳು

ತಂತ್ರಜ್ಞಾನದ ಭದ್ರತೆಯ ಭವನಗಳು

ಭಯೋತ್ಪಾದಕರ, ಕಳ್ಳಕಾಕರ ಭಯದಿಂದಾಗಿ ಮನೆಗಳನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಒಂದೊಂದು ಸಲ ಮೋಸವಾಗಿ ಬಿಡುತ್ತದೆ. ಎಂತಹ ಭದ್ರತೆ ಇದ್ದರೂ ಕಳ್ಳತನ ಅಥವಾ ಕೊಲೆ ಜರುಗೇ ಇರುತ್ತದೆ. ಇಂಥದ್ದನ್ನೆಲ್ಲ ಹೋಗಲಾಡಿಸಿ ಭದ್ರತೆಯ ಭವನಗಳನ್ನು ಕಟ್ಟಬೇಕೆಂಬ ಆಲೋಚನೆಯಿಂದ ವಿಜ್ಞಾನಿಗಳು ಸಹಾಸಪಟ್ಟರು ಇವರ ಸಾಹಸದ ಪ್ರತಿಫಲವಾಗಿ ಅತ್ಯಾಧುನಿಕ ತಂತ್ರಜ್ಞಾನದ ಭದ್ರತೆಯ ಭವನಗಳು ಸಾಕಾರಗೊಂಡಿವೆ. ಕೊರಿಯಾದ `POSCO’ ಕಟ್ಟಡಗಳು, ಬಾಂಬೆಯಲ್ಲಿರುವ C.M.C. ಕಟ್ಟಡ, ಪೂನಾದ ಟಾಟಾ ಸಂಶೋಧನಾ ಕಟ್ಟಡಗಳು, ಕಲ್ಕತ್ತಾದ ೨೨ ಅಂತಸ್ತುಗಳ ಭದ್ರತೆಯ ಕಟ್ಟಡಗಳು ವಿನೂತನ ತಂತ್ರಜ್ಞಾನದಿಂದ ಸದ್ಯಕ್ಕೆ ಭಯಮುಕ್ತವೆನಿಸಿವೆ.

ಇಂತಹ ಕಟ್ಟಡಗಳ ಕೊಠಡಿಯೊಳಗೆ ಯಾರು ಇರದಿದ್ದಲ್ಲಿ ಸ್ವಯಂಚಾಲಿತವಾಗಿ ದೀಪಗಳು, ಫ್ಯಾನುಗಳು, ವಾತಾನುಕೂಲ ಯಂತ್ರಗಳು ನಿಂತುಹೋಗುತ್ತವೆ. ಕೊಠಡಿಯೊಳಗಿನ ಬೆಳಕು ಇಂತಿಷ್ಟೇ ಇರಬೇಕೆಂದರೆ ಕಿಟಕಿಯ ಕರ್ಟನ್‌ಗಳು ತಾನೇ ತಾನೇ ಮುಚ್ಚಿಕೊಳ್ಳುತ್ತವೆ. ಸೂರ್ಯಪ್ರಕಾಶ ಕಡಿಮೆಯಾಗಿ (ಮೋಡಗಳಾದಾಗ, ಅಥವಾ ಕತ್ತಲಾದಾಗ ದೀಪಗಳು ತಾನೇ ತಾನೆ ಆನ್ ಆಗುತ್ತವೆ. ಈ ಎಲ್ಲ ಕೆಲಸಗಳನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಕಿಟಕಿಯ ಪರದೆಗಳ ಚಲನೆಗೆ ಮೋಟಾರುಗಳನ್ನು ಜೋಡಿಸಿ ಕಂಪ್ಯೂಟರ್ಗಳಿಗೆ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಕೊಠಡಿಯೊಳಗಿನ ಉಷ್ಣ, ಶೀತ, ಸಮಶೀತೋಷ್ಣ ಹವೆಯ ಅಗತ್ಯವನ್ನರಿತು ವಾತಾನುಯಂತ್ರವು ಸಮದೂಗಿಸುತ್ತದೆ. ನಿಮ್ಮ ಸ್ನೇಹಿತರು ಕಟ್ಟಡದ ಯಾವುದೇ ಮೂಲೆಯಲ್ಲಿದ್ದರೂ ಅದರೊಂದಿಗೆ (ಟರ್ಮಿನಸ್‌ನ ಬಳಿ ಇರುವ ಇರುವಿಕೆಯನ್ನು ಪತ್ತೆ ಹಚ್ಚಿ) ಅವರೊಂದಿಗೆ ವಿಡಿಯೋ ಫೋನ್ ಮೂಲಕ ಮಾತನಾಡಬಹುದು. ಹತ್ತಿರದ ಊರುಗಳಲ್ಲಿಯ ಪ್ರಮುಖರೊಂದಿಗೆ ವಿಡಿಯೋ ಮೀಟಿಂಗ್ ಮಾಡಬಹುದು. ವ್ಯಕ್ತಿಗಳ ಚಿತ್ರಗಳು ಪರಸ್ಪರ ಕಾಣುತ್ತಿರುತ್ತವೆ. (ಟಿ.ವಿ.ಯಲ್ಲಿಕಾಣುತ್ತವೆ) ಈ ಕಾರ್ಯಾಲಯದಲ್ಲಿ ಕೆಲಸ ಮಾಡುವಾಗ ಪ್ರತಿಯೊಬ್ಬ ಉದ್ಯೋಗಿಯ ಬಳಿಯೂ ಒಂದು ಐಡೆಂಟಿಟಿ ಕಾರ್ಡು ಇರಬೇಕಿರುವುದು ಅನಿವಾರ್ಯ. ಕಟ್ಟಡದ ಯಾವುದೇ ಒಂದು ಕೋಣೆಗೆ ಪ್ರವೇಶ ಪಡೆಯಲು ಈ ಕಾರ್ಡನ್ನು ಅದಕ್ಕೆಂದೇ ನಿರ್ಮಿಸಿರುವ ಕಾರ್ಡ್‌ರೀಡರ್ಗಳಲ್ಲಿ ತೂರಿಸಬೇಕು. ಈ ಕಾರ್ಡಿನಲ್ಲಿರುವ ಕೋಡನ್ನು ಓದುವ ರೀಡರ್‌ಗಳು ಅವರಿಗೆ ಪ್ರವೇಶಾನುಮತಿ ಇದ್ದರೆ ಬಾಗಿಲು ತೆಗೆಯುತ್ತವೆ.

ಇಂತಹ ಕಟ್ಟಡಗಳ ನಿರ್ಮಾಣ ಅಧಿಕ ವೆಚ್ಚದಿಂದ ಕೂಡಿವೆ. ಇಲ್ಲಿಯ ವಿಶೇಷತೆಗಳಿಂದಾಗಿ ಜಗತ್ತಿನ ಎಲ್ಲರ ಗಮನ ಸೆಳೆಯುತ್ತವೆ. ಎಂಬ ರೋಬೋ ವರ್ಜಿನಿಯಾದ ಸೈಬರ್ ಮೋಶನ್ ಸಂಸ್ಥೆ ತಯಾರಿಸುವ ಈ ರೋಬೋ ೭೬ ಅಂಗುಲ ಎತ್ತರ ೩೪ ಅಂಗುಲ ಅಗಲವಾಗಿದೆ. ನಿರಂತರವಾಗಿ ೧೫ ಗಂಟೆಗಳ ಕಾಲ ಕೆಲಸ ಮಾಡುವ ಇದು ಕೆಲಸ ಸ್ಥಬ್ದಗೊಳಿಸಿದರೆ (ಬ್ಯಾಟ್ರಿ ಮುಗಿದು) ನಂತರ ಇದಕ್ಕೆ ಪುನಹ ಚಾರ್ಜ್ ಮಾಡಬಹುದು. ಕಟ್ಟಡದ ೧೦೦ ಅಡಿ ವ್ಯಾಪ್ತಿಯೊಳಗೆ ತಿರುಗಾಡುವ ಈ ರೊಬೋ ತನ್ನ ಕಾರ್ಯದ ವರದಿಯನ್ನು ಕಂಟ್ರೋಲ್ ಸೆಂಟರ್‌ನಲ್ಲಿರುವ ಮುಖ್ಯ ನಿಯಂತ್ರಕನಿಗೆ ತಲುಪಿಸಲಾಗುತ್ತದೆ. ಈ SRZಚಕ್ರಗಳ ಮೇಲೆ ಚಲಿಸುತ್ತಿದ್ದು ೧೦೦ ಅಡಿಯೊಳಗಿನ ಯಾವುದೇ ಚಲನೆಯನ್ನು ಪತ್ತೆಹಚ್ಚಿ ವರದಿಮಾಡುತ್ತದೆ. ೦.೨೩ ಅಶ್ವಶಕ್ತಿಯ ಮೋಟಾರು ಹೊಂದಿರುವ ಇದು ಸೆಕೆಂಡಿಗೆ ೨ ೧/೨ ಅಡಿ ವೇಗದಲ್ಲಿ ಚಲಿಸುತ್ತದೆ. ಇದು ಕಟ್ಟಡದ ಒಳಗಿನ ಕಾವಲುಗಾರನಾದರೆ ಕಟ್ಟಡದ ಹೊರಗೆ ‘ಗೀಕೋ’ ಎನ್ನುವ ರೋಬಟ್ ಕಾರ್ಯನಿರ್ವಹಿಸುತ್ತದೆ. ಸೈಜುಗಳೆರಡರಲ್ಲಿಯೂ ಕಾರ್ಯನಿರ್ವಹಿಸುವ ಇದನ್ನು ರೇಡಿಯೋ ತರಂಗಗಳ ಮೂಲಕ ನಿಯಂತ್ರಿಸಲಾಗುತ್ತದೆ. ೨೦ ಅಶ್ವಶಕ್ತಿ ಇದ್ದು ೮ ಚಕ್ರಗಳ ಮೇಲೆ ಚಲಿಸುತ್ತದೆ. ಇದರಿಂದ ಭೂಮಿಯ ಸ್ಥಿತಿಗತಿಗಳನ್ನು ಅರಿಯಲೂ ಬಳೆಸಿಕೊಳ್ಳುತ್ತಾರೆ. ಈ ರೀತಿಯ ಯಂತ್ರಗಳು ಕಟ್ಟಡ ಒಳಹೊರಗೆ ಓಡಾಡುವ ವ್ಯಕ್ತಿಗಳು ಬಚ್ಚಿಟ್ಟುಕೊಂಡ ಆಯುಧಗಳ ಪತ್ತೆಯನ್ನು ಹೊಸ ತಂತ್ರದಿಂದ ಮಾಡುತ್ತದೆ. ಕಡಿಮೆ ತರಂಗದ ವಿದ್ಯುತ್ ಕಾಂತಿಯ ಅಲೆಗಳ ಮೇಲೆ ಅಭಿವೃದ್ಧಿ ಮಾಡಲಾಗಿರುವ ಈ ನವೀನ ತಂತ್ರಜ್ಞಾನದಲ್ಲಿ ಎಕ್ಸ್‌ರೇ, ಆಗಲಿ ವ್ಯಕ್ತಿಯನ್ನು ಮುಟ್ಟಿನೋಡುವುದಾಗಲಿ ಮಾಡದೇ ಕಡಿಮೆ ಶಕ್ತಿಯ ಕಡಿಮೆ ತರಂಗಾಂತರದ ವಿದ್ಯುತ್ ಕಾಂತಿಯ ಅಲೆಗಳನ್ನು ಪರಿಶೀಲಿಸಬೇಕಾದ ವ್ಯಕ್ತಿಯೆಡೆಗೆ ರವಾನಿಸುತ್ತದೆ. ನಂತರ ಪ್ರತಿಫಲಿತ ಅಲೆಗಳ ಶಕ್ತಿ ಮತ್ತು ಸಮಯದ ಏರಿಳಿತವನ್ನು ನೋಡಿಕೊಂಡು ವ್ಯಕ್ತಿಯಲ್ಲಿರುವ ವಸ್ತುವಿನ ಗುಣಧರ್ಮದ ಬಗೆಗೆ ತಿಳಿದುಕೊಳ್ಳಬಹುದು.

ಈ ರೀತಿಯ ತರಂಗಗಳಿಗೆ ತುತ್ತಾದ ದೇಹ ಮತ್ತು ಆಯುಧಗಳ ಚಿತ್ರ ಸ್ಪಷ್ಟವಾಗಿದ್ದು ಆಯುಧಗಳ ಪತ್ತೆಯಾಗುತ್ತದೆ. ಈ ಯಂತ್ರವು ಪ್ಲಾಸ್ಟಿಕ್ ಸ್ಟೋಗಳನ್ನು ಸಹ ಪತ್ತೆಹಚ್ಚುತ್ತದೆ.
*****

Previous post ಹೊಸ ಬಗೆಯಲಿ ಬರಲಿ
Next post ಕಸ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…