ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು
ಸಾಹಸವನೊಂದ ಕೈಕೊಂಡು ನಡೆದೆ:
ಕೊನೆಗಾಣಿಸುವ ಶಕ್ತಿಯ ಕೊಡು,-
ಸಮುದ್ರನಾಥ!
ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು:
ಇಂದಿನ ನನ್ನ ಏಕಾಂತವಾಸವನು
ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆಯ ಕೊಡು,
ಸಮುದ್ರನಾಥ!
ನನ್ನೀ ಒಬ್ಬೊಂಟಿಗತನವನು
ಎ೦ಟೆದೆಯ ಬಂಟನಂತೆ ಹೊರುವಾಳ್ತನವ ಕೊಡು!
ನಿನ್ನೇಕಾಂತದಲ್ಲಿ ಮೊಳಗುವದನಂತದ ಗುಟ್ಟು:
ನಿನ್ನ ಕರುಣೆಯಿರಲು,-ಒಂಟಿಗನೆ ನಾನು
ಸಮುದ್ರನಾಥ!
*****

















