[ಶಿಶುಗೀತೆ]

ಡ್ಯಾಡಿ ನೀನೆ ಮಾಮಿ ನೀನೆ
ಮಮ್ಮು ನೀಡುವ ದೇವನೆ
ಚಿಗರಿ ನಾವು ಬಗರಿ ನಾವು
ಚಿಮ್ಮಿ ಆಡಿಸು ತಂದೆಯೆ

ಹಾಡು ನಮ್ಮದು ಹೆಜ್ಜೆ ನಮ್ಮದು
ಹಣ್ಣು ಹೂವು ನಮ್ಮವು.
ಮಳೆಯು ನಮ್ಮದು ಇಳೆಯು ನಮ್ಮದು
ಪಕ್ಕ ಬೀಸಿ ಪುಟಿವೆವು

ಮುಗಿಲು ನಮ್ಮದು ಗಗನ ನಮ್ಮದು
ನಾವು ಲೀಲಾ ಮಕ್ಕಳು
ಪಕ್ಕ ಬಿಚ್ಚಿ ಪುಚ್ಚ ಬಿಚ್ಚಿ
ದೂರ ಹಾರುವ ಗಿಣಿಗಳು

ನೂರು ಸಾಸಿರ ದೇವರಿಲ್ಲಾ
ಜಗದ ತಂದಿ ಒಬ್ಬನೆ
ಕೋಟಿ ಜಾತಿ ಪಾತಿ ಇಲ್ಲಾ
ಯುಗದ ತಂದಿ ಒಬ್ಬನೆ