ನಮ್ಮಯ್ಯಾ ನಿಮಗೆ ಆಗದಾಗದೋ ಗಾಂಜೀ ||ಪ||

ಆಗದಾಗದು ಗಾಂಜಿ
ಹೋಗಿ ಬಹು ಸುಖವು
ಯೋಗಿ ಜನರು ಕಂಡು
ಮೂಗು ಮುಚ್ಚಿಕೊಳ್ಳುವ ||೧||

ಹರಿಗೆ ಸಕ್ಕರಿಯಾಯ್ತು ಸಾಕ್ಷಾತ್
ಹರಿಗೆ ಪ್ರತಿಯಾದುದೆ ಗೊತ್ತು ಈ ಮಾತು
ಅರಿಯದ ನರಗುರಿಗಳದು ಕೇಳದೆ
ಬರಿದೆ ವಿಚಾರಿಸದೆ ಹೋಯ್ತು ನಮ್ಮಯ್ಯಾ ||೨||

ಸಿದ್ಧ ಜ್ಞಾನದ ಮುನಿಯು ಸಂಗೀತಸ್ವರ
ತಿದ್ದುವ ಮೃದು ಮಧುರ ಗೊನಿಯು
ಸಧ್ಯಕ್ಕೆ ಶಿಶುನಾಳದೀಶನೊಳು
ಬದ್ಧಿಗೇಡಿತನ ಸಲ್ಲದು ನಮ್ಮಯ್ಯಾ ||೩||

****