ಬಾನು ಮುಷ್ತಾಕ್

#ಸಣ್ಣ ಕಥೆ

ಕೆಂಪು ಲುಂಗಿ

0

ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ… ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ…. ಯಾರಾದರೂ ಬಿದ್ದರೆ, ಕೈಕಾಲು ಮುರಿದುಕೊಂಡರ? ಅಷ್ಟೇ ಅಲ್ಲ ಅವರದೇ ಲೋಕದಲ್ಲಿ ಅವರದೇ ನ್ಯಾಯ ದಂಡದ ಆಧಾರದ ಮೇಲೆ ಅಳು, ನಗು ಶಿಕ್ಷೆ… ಇವೆಲ್ಲಾ ಇದ್ದದ್ದೇ. ಹೀಗಾಗಿ ಬೇಸಿಗೆ ರಜಾ ಬಂದದ್ದರಿಂದ […]

#ಸಣ್ಣ ಕಥೆ

ಸಾವು

0

ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್ನೆದೆಯ ಭಯಾನಕತೆಯೇ, ಇಲ್ಲ…. ನಿಸರ್ಗದ ನಿಜವಾದ ಮುಖವೋ…? ನನ್ನ ಅಸ್ತಿತ್ವವೇನೋ ಕ್ಷುಲ್ಲಕವಾದುದು. ಇಡೀ ಕಾನನವೇ ಅದುರುವಂತಹ ಈ ಗರ್ಜನೆ ಸಿಂಹದ್ದು ಮಾತ್ರವಾಗಿರಲು ಸಾಧ್ಯ ಅಥವ […]

#ಸಣ್ಣ ಕಥೆ

ಹುಟ್ಟು

1

ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ಹೂವಿನ ಲಡಿಗಳಿಂದ ಆವೃತವಾದ ‘ಸೆಹರ’ ವನ್ನು ಹಾಕದೆ, ಸಾಧಾರಣವಾಗಿ ಗುಲಾಬಿ ಹಾರವನ್ನು ಹಾಕಿ ಸಲ್ವಾರ್, ಅಚ್ಕನ್, ಟೋಪಿಯಲ್ಲಿ ಚಂದವಾಗಿ ಕಾಣುತ್ತಿದ್ದ. […]

#ಸಣ್ಣ ಕಥೆ

ದೇವರು ಮತ್ತು ಅಪಘಾತ

0

ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದುರು ಸೋತು ಸುಮ್ಮನಾಗಿದ್ದರು. ಅವಳೇ ನಿಂತು ಮಣ್ಣಿನ ಗೋಡೆಗಳನ್ನು ಸಿದ್ಧಪಡಿಸಿ ಸೂರನ್ನು ಹೊದಿಸಿದ್ದಳು. ಹೀಗಾಗಿ ಅವಳ ಉಳಿತಾಯವೆಲ್ಲಾ ಗುಡಿಸಲ ರೂಪವನ್ನು ಪಡೆದಿತ್ತು. ಕೆರೆಯಲ್ಲಿ ನೀರು ಏರಿದರೆ ಅವಳ […]

#ಸಣ್ಣ ಕಥೆ

ಹೃದಯದ ತೀರ್ಪು

0

ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ ಮನೆಯೇನೂ ಬಹಳ ದೂರವಿರಲಿಲ್ಲ. ಅವನ ಮನೆಯ ಮುಂಭಾಗದ ವಿಶಾಲವಾಗಿದ್ದ ಕೊಠಡಿಗೆ ಬೀದಿಯ ಕಡೆಯಿಂದ ಬಾಗಿಲನ್ನು ಇಟ್ಟು, ಅದರಲ್ಲಿಯೇ ಒಂದಿಷ್ಟು ಬಚ್ಚಲುಮನೆ, ಅಡಿಗೆಮನೆ ಎಂದು ಕಾಣಿಸಿ ಮನೆಯ ಕಡೆಯಿಂದ […]

#ಸಣ್ಣ ಕಥೆ

ಕರಿ ನಾಗರಗಳು

ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ ಕೂದಲನ್ನು ಕೊಡವುತ್ತಲೇ ಅಮ್ಮೀ…… ಅಮ್ಮೀ ಎಂದು ಕಿರುಚಿದಳು, ಒಣ ಬಂಗಡೆಯನ್ನು ಕೆಂಡದ ಮೇಲಿಟ್ಟು ಹದವಾಗಿ ಸುಡುತ್ತಿದ್ದ ರಫಿಯು ಉತ್ತರಿಸಲಿಲ್ಲ. ತರನ್ನುಮ್ ಓಡುತ್ತಲೇ ಬಂದು “ಅಮ್ಮೀ….. ಹಸೀನ ಮತ್ತೆ ಅವಳ ತಾಯಿ ಮಸೀದೀಲಿ […]

#ಸಣ್ಣ ಕಥೆ

ಬೆಂಕಿ ಮಳೆ

0

ಬೆಳಗಿನ ಅಜಾನ್‌ದ ಕರೆ ಮಸೀದಿಯಿಂದ ಬರುತ್ತಿದ್ದಂತಯೇ ಮುತವಲ್ಲಿ ಉಸ್ಮಾನ್ ಸಾಹೇಬರು ಹಾಸಿಗೆಯಿಂದ ಎದ್ದು ಕುಳಿತರು. ಪಕ್ಕದಲ್ಲಿ ಮಡದಿ ಆರಿಫ ಇಲ್ಲದಿರುವುದನ್ನು ಗಮನಿಸುತ್ತಾ ಹೊರಗಡೆಯ ಹಜಾರಕ್ಕೆ ಕಾಲಿಟ್ಟರು. ಹಜಾರದ ಮ್ಯಾಟ್‌ನ ಮೇಲೆ ಆಕೆಯೂ ಅವರ ಮಗ ಅನ್ಸರ್ ಇಬ್ಬರೂ ಅಸ್ತವ್ಯಸ್ತ ಸ್ಥಿತಿಯಲ್ಲಿ ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಮೂರು ವರ್ಷದ ಪುಟ್ಟ ಅನ್ಸರ್‌ನ ಉಸಿರಾಟದ ಗತಿ ಸರಿ ಇಲ್ಲವೆಂದು […]