
ನನ್ನ ಜೀವದ ಹಾವಭಾವಗಳು ಬಡಿತ ಬಿರುಕಿನಲಿ ಹೋಳು ಹೋಳಾಗುವುದು ನನ್ನದೊಂದು ಗಾಜಿನ ಹೃದಯ *****...
ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ ನವಜೀವ ನಗುತ ಪ್ರೇಮದೌತಣ ಉಂಡು ಘನವ...
ಬಿಸಿಲ್ಗುದುರೆಯನೇರಿದಾಗ ಒಂದೇ ನೆಗೆತಕ್ಕೆ ಸೂರ್ಯದೇವನ ರಥದ ಗಾಲಿಗೆ ಸಿಲುಕಿ ಒದ್ದಾಡಿ ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು ಹುಚ್ಚನಂತಾಗಿ ಹೊರಳಾಡಿದರೂ ಅದರ ಮತ್ತೊಂದು ರೂಪ ಜೋರಾಗಿ ನಕ್ಕು ಆಹ್ವಾನಿಸುತಿದೆ. *****...
ಸುಂದರ ಹುಡುಗಿಯರು ಬಂದವರಿಗೆ ಬಟ್ಟೆ ತೊಡಿಸುವುದಕ್ಕೆ ಸಿದ್ಧರಾಗಿ ನಿಂತಿದ್ದರು. ಆಧುನಿಕ ಶೈಲಿಯ ಬ್ಯಾಗಿ ಪ್ಯಾಂಟ್ಸ್, ಸ್ಟ್ರೈಪ್ಡ್ ಶರ್ಟು ಕೊಂಡು ಕೊಂಡು ಸಾಯಂಕಾಲ ಮನೆಗೆ ಮರಳಿದ. ರೇಶ್ಮಳಿಗೆ ಏನಾದರೂ ಕೊಳ್ಳಬಹುದಿತ್ತು. ಅದಕ್ಕೆ ಸಮಯ ಈಗ ಅಲ್ಲ....
ನನ್ನ ಭಾವನೆಗಳಿಗೆ ಬೆಲೆ ಕೊಡೆಂದು ಕೇಳುವುದಿಲ್ಲ ಇನಿಯಾ ನನಗೂ ಭಾವನೆಗಳು ಇವೆಯೆಂದು ಅರ್ಥಮಾಡಿಕೊಂಡರೆ ಸಾಕು, ಬದುಕು ಸಹನೀಯ *****...
ಋಷಿಗಳಿದ್ದರು ಹೃಷೀಕೇಶದಲಿ ವಿವಿಧ ವೇಷದಲಿ ಗಡ್ಡಕೂದಲ ಬಿಟ್ಟವರು ಕಾಷಾಯ ತೊಟ್ಟವರು ಕೆಲರು ತಲೆ ಮರೆಸಿ ಯಾರು ಯಾರನೊ ಅರಸಿ (ಪ್ರತಿಯೊಂದು ತಲೆ ಹುಡುಕದೇ ತನ್ನ ನೆಲೆ?) ತಮಾಲವೃಕ್ಷಚ್ಛಾಯೆ ಆಹ ತಣ್ಣನೆ ಹಾಯೆ ಇದು ಧ್ಯಾನಾಸಕ್ತಿಯೊ ಕೇವಲ ಧೂಮಪಾನಾಸಕ...
ಅವರು ಬಿಳಿ ಬಣ್ಣದ ಮಾಯಾ ಮಂದರಿ ಹೊದ್ದು ಬಂದಿದ್ದರು ತೆವಳುತ್ತ, ಸರ್ಪಸಂತತಿ ಅನ್ನವಿಕ್ಕಿದ್ದಲ್ಲೇ ಕನ್ನವಿಕ್ಕುವುದು. ಕಸಿದುಕೊಂಡರು-ಹಕ್ಕು, ಸ್ವಾತಂತ್ರ್ಯ ದತ್ತು ಮಕ್ಕಳಿಗೆ ಹಕ್ಕಿಲ್ಲ, ಕರಾಕರಣೆ, ಒಡೆದು ಆಳುವ ತಂತ್ರ ಕುತಂತ್ರ ಶ್ರೇಷ್ಠ ನಾಗರ...
ಪ್ರತಿದಿನ, ಪ್ರತಿಕ್ಷಣ ಅದೇ ಕೆಲಸ; ಹುಟ್ಟಿನ ಮನೆಗೆ ಭೇಟಿ ಕೊಡುವುದು, ಸಂಭ್ರಮದ ತುಣುಕನ್ನು ಮೆದ್ದು, ತನ್ನದೊಂದು ಬೀಜ ನೆಟ್ಟು, ಗುಟ್ಟಾಗಿ ಓಡಿಬರುವುದು. ಮತ್ತೆ ಅದೇ ಕೆಲಸ ಕಾಯುವುದು ನೆಟ್ಟ ಬೀಜ ಫಲಕೊಟ್ಟು ಹಣ್ಣಾಗಿ ಕಳಚಿಕೊಳ್ಳುವುದನ್ನೇ ಕಣ್...
ಯಾರೋ ಹಚ್ಚಲಿ ಎಂದು ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು ಇನ್ನು ಕಾಯುವುದಕ್ಕೆಲ್ಲಿದೆ ಸಮಯ ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ ಪಡುವಣಕ್ಕಿಳಿದ ಪಾಪ ನೀನೇ ಹಚ್ಚಿಬಿಡು ಬತ್ತಿ ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ ***** * ಅಜ್ಜಿ ಕಾಲಿಗೆ ದೀಪ:...
ಸಾಕು ಕೇಕೇ ನೂಕು ಗೇಗೇ ಬೇಕು ಜೈ ಜೈ ಗೀತಿಕೆ! ಸಾಕು ಕಲ್ಲು ಸಾಕು ಮುಳ್ಳು ಕಲ್ಲು ಮುಳ್ಳಿನ ಗೆಳೆತನ ಪಕ್ಷಿಯಾಗೈ ವೃಕ್ಷ ಏರೈ ಮಾಡು ಹೂವಿನ ಒಗೆತನ ದಲದ ಗಲ್ಲದ ಗಂಧ ಗುಡಿಯಲಿ ಕಾಣು ಆತ್ಮದ ಚುಂಬನ ಎಲ್ಲಿ ಕೋಮಲ ಎಲ್ಲಿ ಪರಿಮಳ ಅಲ್ಲಿ ಅರುಹಿನ ಔತಣ ಮ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...














