ಯಾರೋ ಹಚ್ಚಲಿ ಎಂದು
ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು
ಇನ್ನು ಕಾಯುವುದಕ್ಕೆಲ್ಲಿದೆ ಸಮಯ
ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ
ಪಡುವಣಕ್ಕಿಳಿದ ಪಾಪ
ನೀನೇ ಹಚ್ಚಿಬಿಡು ಬತ್ತಿ
ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ
*****
* ಅಜ್ಜಿ ಕಾಲಿಗೆ ದೀಪ: ಗುಲಗುಂಜಿ ಆಟದಲ್ಲಿ ಸೋಲೊಪ್ಪಿಕೊಳ್ಳುವುದು
ಯಾರೋ ಹಚ್ಚಲಿ ಎಂದು
ಬತ್ತಿ ಹೊಸೆದು ಬುತ್ತಿ ಕಟ್ಟಿದ್ದು ಸಾಕು
ಇನ್ನು ಕಾಯುವುದಕ್ಕೆಲ್ಲಿದೆ ಸಮಯ
ನೆತ್ತಿ ಮೇಲಿದ್ದ ಸೂರ್ಯ ಸುಸ್ತಾಗಿ
ಪಡುವಣಕ್ಕಿಳಿದ ಪಾಪ
ನೀನೇ ಹಚ್ಚಿಬಿಡು ಬತ್ತಿ
ಇಟ್ಟುಬಿಡು ಅಜ್ಜಿ ಕಾಲಿಗೆ ದೀಪ
*****
* ಅಜ್ಜಿ ಕಾಲಿಗೆ ದೀಪ: ಗುಲಗುಂಜಿ ಆಟದಲ್ಲಿ ಸೋಲೊಪ್ಪಿಕೊಳ್ಳುವುದು