ಸಾಕು ಕೇಕೇ ನೂಕು ಗೇಗೇ
ಬೇಕು ಜೈ ಜೈ ಗೀತಿಕೆ!

ಸಾಕು ಕಲ್ಲು ಸಾಕು ಮುಳ್ಳು
ಕಲ್ಲು ಮುಳ್ಳಿನ ಗೆಳೆತನ
ಪಕ್ಷಿಯಾಗೈ ವೃಕ್ಷ ಏರೈ
ಮಾಡು ಹೂವಿನ ಒಗೆತನ

ದಲದ ಗಲ್ಲದ ಗಂಧ ಗುಡಿಯಲಿ
ಕಾಣು ಆತ್ಮದ ಚುಂಬನ
ಎಲ್ಲಿ ಕೋಮಲ ಎಲ್ಲಿ ಪರಿಮಳ
ಅಲ್ಲಿ ಅರುಹಿನ ಔತಣ

ಮನುಜ ಮನುಜರ ಮಧ್ಯೆ ದನುಜರ
ರಕ್ತ ರಣಹುಡಿ ಏತಕೆ
ದೇವ ಮಕ್ಕಳು ಮಧುರ ಮಕ್ಕಳು
ದೈತ್ಯರಾಗುವುದೇತಕೆ
*****