ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ? ಎಂದು ಇವರ ಮಿದುಳಿನ ಅಧ್ಯಯನವನ್ನು ಸಾಂಡ್ರಾ ಬಿ ಟೆಲ್ಸನ್ ಅವರು ನಡೆಯಿಸಿ ಅವರು ಹಲವು ಅಭಿಪ್ರಾಯಗಳನ್ನು ದೃಢಪಡಿಸಿದ್ದಾರೆ ಮತ್ತು ‘ಲಾನ್ಸೆಟ್’ ಪತ್ರಿಕೆಯಲ್ಲಿ ಐನ್‌ಸ್ಪನ್ ಬುದ್ಧಿಶಕ್ತಿಗೆ ಇವರ ಮಿದುಳೇ ಕಾರಣವೆಂದು ಹೇಳಿದ್ದಾರೆ.

೧೯೫೫ ರಲ್ಲಿ ತಮ್ಮ ೭೬ ನೇ ವಯಸ್ಸಿನಲ್ಲಿ ಮಿದುಳಿನ ರಕ್ತಸ್ರಾವದಿಂದ ಪ್ರಾಣಬಿಟ್ಟಿದ್ದರು. ಇವರ ಶವ, ಪರೀಕ್ಷೆ ಮಾಡಿದ ವೈದ್ಯ ಥಾಮಸ್ ಹಾರ್ವೇಗೆ ತನ್ನ ಮರಣಾಂತರ ತನ್ನ ಮಿದುಳಿನ ಪರೀಕ್ಷೆ ಮಾಡಬಹುದೆಂದು ಐನ್‌ಸ್ಟನ್ ಹೇಳಿದ್ದರ ಮೇರೆಗೆ ಅವರ ಮಿದುಳನ್ನು ಹೊರತೆಗೆದು ಅದನ್ನು ೮-೧೦ ಹೋಳುಗಳನ್ನಾಗಿ ಮಾಡಿ ಕೆಡದಂತೆ ಪಾರ್ಮಾಲ್ಡಿ ಹೈಡ್ ದ್ರವದಲ್ಲಿ ಅದ್ದಿ
ಉಪ್ಪಿನಕಾಯಿಯ ರೀತಿ ಒಂಡು ಬಾಟಲಿಯಲ್ಲಿ ರಕ್ಷಿಸಿದ್ದರು.

ಆಂಟಾರಿಯೋದ ಹ್ಯಾಮಿಲ್ಟನ್‌ನ ಮ್ಯಾಕ್ ಮಾಸ್ಪರ್ ವಿಶ್ವವಿದ್ಯಾಲಯದ ತಮ್ಮ ಸಹೋದ್ಯೋಗಿಗಳ ಜತೆಗೂಡಿ ಐನ್‌ಸ್ಟನ್ ಅವರ ಮೆದುಳಿನ ಅಧ್ಯಯನ ನಡೆಯಿಸಿದ ಸಾಂಡ್ರಾ ಅವರು ಸಾಮಾನ್ಯ ಬುದ್ಧಿಮತ್ತೆಯನ್ನು ಹೊಂದಿದ ೩೫-ಪುರುಷರು, ೫೬-ಮಹಿಳೆಯರ ಮಿದುಳಿನ ಜತೆಗೆ ಐನ್‌ಸ್ಟನ್ ಅವರ ಮೆದುಳನ್ನು ಹೋಲಿಸಿ ಅಧ್ಯಯನ ನಡೆಯಿಸಿದರು. ಐನ್‌ಸ್ಟನ್ ಅವರ ಮೆದುಳು ಸಾಮಾನ್ಯರ ಮೆದುಳಂತೆ ಇದೆಯಾದರೂ ಸಾಮಾನ್ಯ ಜನರಲ್ಲಿರುವಂತೆ ಪೆರಿಟರ್ ಅಸರ್‌ಕ್ಯೂಲಮ್ ಇಲ್ಲದಿರುವುದು ಮೆದುಳಿನ ಎರಡು ಕಡೆಗಿರುವ ಇನ್‌ಪೆರಿಯರ್ ಪೆರಿಟರ್ ಭಾಗ ವಿಜ್ಞಾನಿಯ ಮೆದುಳಲ್ಲಿ ವಿಸ್ತಾರವಾಗಿ ಬೆಳೆದಿದ್ದು ಇದು ಮಿದುಳಿನ ಎರಡು ದಿಕ್ಕಿಗೆ ಶೇ.೧೫ ರಷ್ಟು ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ್ದರಿಂದ ಐನ್‍ಸ್ಟನ್ ಅವರ ಅಪಾರ ಬುದ್ಧಿಮತ್ತೆಗೆ ಕಾರಣವಾಗಿರಬಹುದೆಂದು ಸಂಶೋಧಕರು ವಾದಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮೆದುಳಲ್ಲೂ ಮಧ್ಯದಲ್ಲೊಂದು ಗೀರು ಇರುತ್ತದೆ. ಇದ್ಗು ನೆತ್ತಿಯ ಮೂಲಕ ಮೆದುಳಿನ ಹಿಂಭಾಗಕ್ಕೆ ಕತ್ತಿನವರೆಗೂ ಇರುತ್ತದೆ. ಆದರೆ ಇವರ ಮಿದುಳಿನಲ್ಲಿ ಆಗೀರು ಹಿಂಭಾಗಕ್ಕೆ ಬಂದಿರುವುದಿಲ್ಲ. ಬೇರೆಯಾವ ಮಿದುಳಿನಲ್ಲಿಯೂ ಕಾಣದ ಅಪರೂಪದ ಲಕ್ಷಣ ಇದಾಗಿದೆ. ಇಲ್ಲಿ ನರತಂತುಗಳು ಪರಸ್ಪರ ಬೆಸುಗೆಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನರಸಂದೇಶಗಳ ವಿನಿಮಯ ಚುರುಕಾಗಿರುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳುತ್ತ ಈ ಕಾರಣವಾಗಿ ಇವರ ಬುದ್ಧಿಶಕ್ತಿಗೆ ಇದೇ ಕಾರಣವೆಂದು ವಾದಿಸುತ್ತಾರೆ.
*

Previous post ಸ್ವಾಗತ ಸಂಕ್ರಾಂತಿಯೇ!
Next post ಬಡ್ಜಟ್

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys