ಶೀನಣ್ಣ: “ಶಾಮಣ್ಣಾ, ನನಗೊಂದು ಅನುಮಾನ ಬಂದಿದೆ. ನೋಡೋಣ, ನೀವು ಹೇಗೆ ಬಗೆಹರಿಸುತ್ತೀರಿ.”
ಶಾಮಣ್ಣ: “ಏನದು ನಿಮ್ಮ ಅನುಮಾನ?”
ಶೀನಣ್ಣ: “ಮಠದ ಬಾಗಿಲಲ್ಲಿ ಒಂದು ಕಡೆಗೆ ಗರುಡ, ಮತ್ತೊಂದು ಕಡೆಗೆ ಆಂಜನೇಯ ಸ್ಥಾಪಿಸಿದ್ದಾರೆ. ಅದು ಏಕೆ ಎಂದು ಕೇಳಬಹುದೆ?”
ಶಾಮಣ್ಣ: “ಅದು ಇಷ್ಟೆ ಶೀನಣ್ಣಾ. ಮಠದ ವ್ಯವಹಾರದಲ್ಲಿ ಮೂಗು ತೂರಿಸಬಾರದು (ಗರುಡ) ಮತ್ತು ಬಾಲ ಅಲ್ಲಾಡಿಸಬಾರದು! (ಆಂಜನೇಯ)”
***