ನಮ್ಮೂರ ಗಣಪ
ಜೋಯಿಸರಿಗೆ ಉಪ-
ವಾಸವು ಶನಿವಾರ
ಉಪವಾಸದ ದಿನ
ಬರಿ ಹಾಲೂ ಗೆಣ-
ಸಿನದೇ ಅವರಿಗೆ ಫಲಹಾರ
ಆ ಪುಣ್ಯದ ಫಲ-
ದಿಂದೇ ಈ ನೆಲ-
ದಲಿ ಸಾಗಿದೆ ಆ ಸಂಸಾರ
ಮೊನ್ನಿನ ಆ ದಿನ
ಒಂದೆರಡೇ ಮಣ
ಗೆಣಸನು ತೇಗಿ
ಹೊಟ್ಟೆಯು ಬೀಗಿ
ಹರಿದೇ ಹೋಯಿತು ಉಡಿದಾರ
ಅಲ್ಲ
ಜನಿವಾರ!
*****
ಕನ್ನಡ ನಲ್ಬರಹ ತಾಣ
ನಮ್ಮೂರ ಗಣಪ
ಜೋಯಿಸರಿಗೆ ಉಪ-
ವಾಸವು ಶನಿವಾರ
ಉಪವಾಸದ ದಿನ
ಬರಿ ಹಾಲೂ ಗೆಣ-
ಸಿನದೇ ಅವರಿಗೆ ಫಲಹಾರ
ಆ ಪುಣ್ಯದ ಫಲ-
ದಿಂದೇ ಈ ನೆಲ-
ದಲಿ ಸಾಗಿದೆ ಆ ಸಂಸಾರ
ಮೊನ್ನಿನ ಆ ದಿನ
ಒಂದೆರಡೇ ಮಣ
ಗೆಣಸನು ತೇಗಿ
ಹೊಟ್ಟೆಯು ಬೀಗಿ
ಹರಿದೇ ಹೋಯಿತು ಉಡಿದಾರ
ಅಲ್ಲ
ಜನಿವಾರ!
*****
ಕೀಲಿಕರಣ: ಎಂ ಎನ್ ಎಸ್ ರಾವ್