“ಚೆಲುವನಾರಾಯಣಾ ಎಂಬುಲಿವು ಕಿವಿಸೋಕೆ ಮಳಮಳನೆ ಕಣ್ಣ ಹನಿಯುದುರುವುದು” ಎಂದ ಸತ್ಯಲೋಕನಿವಾಸಿ ರಸಕಾತರಂ ಮೌನಿ ನನ್ನನುತ್ತರಿಸಲೀ ಭಾವಗಳ ತಂದ. ‘ಹರಿ’ ಎನ್ನೆ ಗರಿಕೆದರಿ ರೆಕ್ಕೆ ಹರಡುವ ಸಂತ- ಚಿತ್ತದನುಕರಣೆಯೊಳು ಹಂಸಗತಿಗೆರೆದು ದುರ್ಬಲಸ್ವಾಂತವಿದು ದೇವಕುಲನೀಡದೊಳು ಚಡಪಡಿಸುತಿದೆ ತನ್ನ...

ಆಗು ಯೋಗಿ ಸಹಜ ಯೋಗಿ ಕರ್ಮ ನಿರ್ಮಲ ರಸ‌ಋಷಿ|| ಆಗು ಅಚಲಾ ವಿಚಲದಾಚೆಗೆ ಚಿತೆಯ ಚಂಚಲ ಚಲ್ಲು ನೀ ಮನವೆ ರೋಗಾ ಮನವೆ ರಾಗಾ ಸಗ್ಗ ನರಕದ ಸರಿಗಮಾ ಮದ್ಯಪಾನಾ ವಧ್ಯ ಗಮನಾ ಧಮ್ರ ಧೂಮದ ದರ್ಪಣಾ ಹಾಲುಜೇನಿನ ಹೊಟ್ಟೆ ಕೊಳಗಕೆ ಕೊಳೆತ ವಿಷಗಳ ತರ್ಪಣಾ ನನಗೆ ...

ಹಣ ಇಲ್ಲದಿದ್ದರೆ ಇಂದು ಯಾವುದೇ ವ್ಯವಹಾರ ನಡೆಯಲಾರದು. ಸರ್ವೇಗುಣಾಃ ಕಾಂಚನಮಾಶ್ರಯಂತಿ ಎಂಬ ಹೇಳಿಕೆ ಹಣಕ್ಕೆ ಆಧುನಿಕ ಪ್ರಪಂಚದಲ್ಲಿ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ನಾವೆಲ್ಲರೂ ಹಣವನ್ನು ಬಳಸುತ್ತೇವೆ. ಹಣ ಮನುಷ್ಯನ ಮೂಲಭೂತ ಸ...

ಉರಿಬಿಸಿಲಲ್ಲಿ ಗಾಣದ ಸುತ್ತ ಜೀಕುತ್ತಿದೆ ಮುದಿ ಎತ್ತು; ಬತ್ತಿದ ಕಣ್ಣು ಕತ್ತಿನ ಹುಣ್ಣು ನೊಣ ಮುಸುರುತ್ತಿವೆ ಸುತ್ತೂ: ಬಳಲಿದೆ ಕಾಲು ಎಳೆದಿವೆ ಭಾರ ಬೆನ್ನಿಗೆ ಬೆತ್ತದ ಪಾಠ, ಎದುರಿಗೆ ಮಠದಲಿ ಬಸವ ರಥೋತ್ಸವ ಸಿಹಿಸಿಹಿ ಭಕ್ಷ್ಯದ ಊಟ! * * * ಬಸ್...

ಹಸಿವಿನೆದುರು ದಂಗೆಯೇಳುತ್ತಲೇ ಇರುತ್ತದೆ ರೊಟ್ಟಿ. ಅದಕ್ಕೆ ಸುಮಧುರ ಹಾಡು ಕಲಿಸಲಾಗದೇ ಪ್ರತಿಸಲ ಸೋಲುತ್ತದೆ. ಶಾರೀರವಿರದ ಅಶರೀರ ಹಸಿವನ್ನು ಸುಮ್ಮನೆ ಕ್ಷಮಿಸುತ್ತದೆ. *****...

ಅವಳು ಯೌವ್ವನದಲ್ಲಿ ವಿಧವೆಯಾದವಳು. ನೃತ್ಯ ಅವಳ ವೃತ್ತಿಯಾಗಿತ್ತು. ಅವಳು ವೇದಿಕೆಯಲ್ಲಿ ರಾಧೆಯಾಗಿ, ಕೃಷ್ಣನೊಡನೆ ಶೃಂಗಾರ ರಸದಲ್ಲಿ ಲೀನವಾಗುತಿದ್ದಳು. ಶಕುಂತಲೆಯಾಗಿ ಪ್ರೇಮ ಪಾಶದಲ್ಲಿ ಸಿಲುಕುತ್ತಿದ್ದಳು. ರಾಮಾಯಣದಲ್ಲಿ, ಸೀತೆಯಾಗಿ ರಾಮಪಟ್ಟಾಭ...

ಬಣ್ಣಬಣ್ಣ ಮುಗಿಲ ಮೈತುಂಬ ಹೂವರಳಿದ ಸಿರಿಸಂಜೆ ಮೋಡದಂಚಿಗೆ ಜರಿಯ ಅಂಚು ಮೆದು ಮಲ್ಲಿಗೆ ಅಂಗಳದ ಮೂಲೆಯಲಿ ಸೂಸಿದ ಕಂಪು ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ. ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ ಮನಸ್ಸಿಗೆ ತೇ...

ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ ಏನೇನೋ ಏನೇನೋ…. ಅದರ ಖರೇನ – ದಾಳಿಂಬ, ಸಂಪಿಗೆ, ಮೀನು ಬಿಲ್...

ದೀಕ್ಷಿತ ಏನೋ ಗಾಢವಾಗಿ ಬರೆಯೋದರಲ್ಲಿ ತಲ್ಲೀನನಾಗಿದ್ದಾನೆ. ಆತ ಎಂದೂ ತನ್ನ ಅಭ್ಯಾಸದಲ್ಲಿ ಇಷ್ಟು ಆಸಕ್ತಿ ತೋರಿಸಿದ್ದಿಲ್ಲ. ಎಂದರೆ ಇನ್ನೇನು ಬರೀತಿದ್ದಾನೆ? ದ್ವಿತೀಯ ಕಮ್ಯೂನಿಸ್ಟ್ ಮ್ಯಾನಿಫ಼ೆಸ್ಟೋ? ಎಲ್ಲಾ ಬಿಟ್ಟು ಇಂಥ ಬೋರ್ ನ್ ಕೈಲಿ ಸಿಗಹಾ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...