ಚಂದ್ರಿ, ನನಗ ಗೊತ್ತಿಲೇನು
ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ
ದಾಳಿಂಬ ಹಲ್ಲು, ಸಂಪಿಗೆ ಮೂಗು
ಮೀನಿನ ಕಣ್ಣು, ಬಿಲ್ಲು ಹುಬ್ಬ
ಹಾವಿನ ಹೆಡೆ, ಸೂಚಿಪರ್ಣಿ ಎದೆ,
ಇನ್ನೂ ಏನೇನೋ ಏನೇನೋ….
ಅದರ ಖರೇನ –
ದಾಳಿಂಬ, ಸಂಪಿಗೆ, ಮೀನು
ಬಿಲ್ಲು, ಹಾವು ಸೂಚಿಪರ್ಣಿ ಕೂಡಿಸಿದಾಗ
ಹೆಂಗ ಕಾಣಸ್ತಿ ಗೊತ್ತೇನಽ
ನಮ್ಮೂರಿನ ಹೊಲದಾಗ
ಬೆದರ ನಿಂದಿರಿಸಿರ್‍ತಾರಲ್ಲ ಹಾಂಗಽ.
*****