ಆಗು ಯೋಗಿ ಸಹಜ ಯೋಗಿ
ಕರ್ಮ ನಿರ್ಮಲ ರಸ‌ಋಷಿ||

ಆಗು ಅಚಲಾ ವಿಚಲದಾಚೆಗೆ
ಚಿತೆಯ ಚಂಚಲ ಚಲ್ಲು ನೀ
ಮನವೆ ರೋಗಾ ಮನವೆ ರಾಗಾ
ಸಗ್ಗ ನರಕದ ಸರಿಗಮಾ

ಮದ್ಯಪಾನಾ ವಧ್ಯ ಗಮನಾ
ಧಮ್ರ ಧೂಮದ ದರ್ಪಣಾ
ಹಾಲುಜೇನಿನ ಹೊಟ್ಟೆ ಕೊಳಗಕೆ
ಕೊಳೆತ ವಿಷಗಳ ತರ್ಪಣಾ

ನನಗೆ ನಾನೇ ಭೂತ ಬೆಂತರ
ನನಗೆ ನಾನೇ ಅಂತರ
ನನಗೆ ನಾನೇ ಗಲ್ಲು ಶೂಲಾ
ನನಗೆ ನಾನೇ ಉತ್ತರ
*****