ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದ...

ಮರವನೇರಿ ತುದಿಯಲ್ಲಿ ಕುಳಿತಿದೆ ಹೂವು ಪುಟ್ಟ ಹುಡುಗಿಯರೆ… ಕಣ್ಣರಳಿಸಿ ನೋಡಿ ಹೂವಾಡಗಿತ್ತಿಯರೆ… ಹೂವಿನಂದವ ನೋಡಿ ಹಿಗ್ಗಿ ಹಾಡಿ ಏ… ಹೂವೆ ಹೇಗೆ ಕಾಣುವುದೊ ಅಲ್ಲಿಂದ ಈ ಜಗತ್ತು? ನೆಲದಲ್ಲಿರುವೆ ನಾನು ನನಗೆ ಗೊತ್ತಾಗದು ಹಾಂ...

ಅಧಾಯ ೧೩ ಈರಜ್ಜನ ಪುರಾಣ ಬೆಳಗ್ಗೆ ಬೇಗನೇ ಬಂದಿದ್ದ ರಿತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈರಜ್ಜನನ್ನು ಕಂಡು, “ಏನು ಈರಪ್ಪ, ಊರಿಗೆ ಹೋಗಬೇಕು, ಎಂಟು ದಿನ ರಜೆ ಕೊಡಿ ಅಂತ ಜಗಳ ಮಾಡಿ ಹೋಗಿದ್ದೆ. ಅದೇನು ಎರಡೇ ದಿನಕ್ಕೆ ಬಂದುಬಿಟ್ಟಿದ್ದೀಯಾ...

ಮಾತ್ರಿಯೋಷ್ಕಿ ಮಾಸ್ಕೋದ ಬೀದಿ ಬೀದಿಯ ಗೊಂಬೆ ಗೊಂಬೆಯೊಳಗೊಂದು ಗೊಂಬೆ ಒಂದರೊಳಗೊಂದು ಆದಷ್ಟು ಕುಬ್ಜ ಆದರೂ ಕುಲುಕಾಟ ಒಳಗೊಳಗೆ ಗೊರ್ಬಚೇವ್ನ ಗೊಂಬೆ ಅದರೊಳಗೆ ಬ್ರೇಜ್ನೇವನ ಗೊಂಬೆ ಒಳಗೆ ಕ್ರುಶ್ಚೇವನ ಗೊಂಬೆ ಮತ್ತೂ ಒಳಗೆ ಸ್ಟಾಲಿನನ ಗೊಂಬೆ ತೊಗಲುಗ...

ಕೊನೆಗೂ ಕಪಿಲ್‌ದೇವ್ ನಿವೃತ್ತಿ ಘೋಷಿಸಬೇಕಾಯಿತು. ಈ ನಿವೃತ್ತಿ ಘೋಷಣೆ ಹೊರಟ ಸನ್ನಿವೇಶವನ್ನು ಅವಲೋಕಿಸಿದರೆ ನಮ್ಮ ದೇಶದ ಮಹಾನ್ ಆಟಗಾರನೊಬ್ಬನನ್ನು ಕ್ರಿಕೆಟ್ ಕ್ರೀಡಾಂಗಣದಿಂದ ಗೌರವಯುತವಾಗಿ ಬೀಳ್ಕೊಡಲಿಲ್ಲ ಎಂಬ ಸಂಕಟವುಂಟಾಗುತ್ತದೆ. ಕಪಿಲ್ ಇಂ...

ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ. ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ, ನನಗೋ ಅವು ಬಹು ದೂರದ ಸತ್ಯಗಳು. ಹೊಸ ಜಗತ್ತು ನನಗೆ ಕಾಣುತ್ತಿದೆ, ಬಹುಶಃ ಚಂದ್...

ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ ನೀನು ||ಪ್ರೀ|| ಬರಿದಾಗುವುದ...

ನಟ್ಟಿರುಳು ಚಳಿ ಮೌನ, ಸಣ್ಣಗೆ ಅಳುವ ದೀಪ ಕೋಣೆ ಮೂಲೆಯ ಕಡ್ಡಿಚಾಪೆ ಮೇಲೆ ನಿದ್ದೆಯಿಲ್ಲದೆ ಹಸಿದ ಹೊಟ್ಟೆಯಲ್ಲಿ ಹೊರಳುವ ತಾಯಿ ಕಪ್ಪಿಟ್ಟ ಮುಖ, ಸುಕ್ಕುಕೆನ್ನೆ, ನಿಟ್ಟುಸಿರು ಚಿಂತೆ ಮಡುನಿಂತಂತೆ ಕಣ್ಣು ಯೋಚಿಸುತ್ತಾಳೆ ತಾಯಿ ಯುದ್ಧಕ್ಕೆ ನಡೆದ ಮ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...