ದಲಿತರೊದ್ದಾರಕ್ಕೆ ಟೊಂಕ ಕಟ್ಟಿದ
ಬಡವರ ದಾತಾರ ನೀನು
ಇಹಪರಗಳಲ್ಲೂ ಮೆರೆವ ದೊರೆ
ಬುವಿಯ ಅವತಾರ ನೀನು
ಆತ್ಮ ಆತ್ಮಗಳ ನಡುವೆ ಭೇದ
ಸೃಷ್ಟಿಸಿ ಬಾಳುವ ಜನ ಮಧ್ಯ
ಸಮತೆಯ ದೀಪ ಬೆಳಗಿದವ ನೀನು
ಎಲ್ಲರೂ ಒಂದೇ ಎಂದೇ ಬುವಿ ಮಧ್ಯ
ಬುದ್ಧ ಗುರುವಿನ ಅನುಯಾಯಿ ನೀನು
ನೀನು ಮಾನವನಲ್ಲಿ ಅಮರತ್ವ ಕಂಡೆ
ಸುಖ ದುಃಖಗಳಿಗೆ ಕಾರಣ ಹುಡುಕುತ್ತ
ಬಡವರಿಗೆ ನಿತ್ಯ ನೀನಾದೆ ತಂದೆ
ಸಂವಿಧಾನಗಳು ತಿದ್ದುವ ಮೂಲ ಪುರುಷ
ಗಗನದೆತ್ತರಕ್ಕೂ ಏಕಾಂಗಿಯಾಗಿ ಬೆಳೆದೆ
ನಾಡಿನ ಮೂಲೆ ಮೂಲೆಗೂ ಬೆಳಗಿ
ನಿನ್ನದೆ ವಿಶೇಷ ವ್ಯಕ್ತಿತ್ವ ತಳೆದೆ
ವರುಷವರುಷಕ್ಕೂ ನಿನ್ನ ಜನ್ಮ ಪರ್ವ
ತಾರಲಿ ಹೃದಯಗಳಲಿ ನವಚೇತನ
ಗೌತಮನ ತತ್ವಗಳು ಹರಡಲಿ ವಿಶ್ವರಲಿ
ಮಾಣಿಕ್ಯ ವಿಠಲನಂತೆ ವಿಶ್ವಚೇತನ
*****














