ವಾಡಪ್ಪಿ ಬಿ ಆರ್‍

#ಸಣ್ಣ ಕಥೆ

ಯಾರು ಹೊಣೆ?

0

“ಧಡ್……. ಧಡಲ್…….. ಧಡಕ್” ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ “ಸಿಳ್” ಎಂದು ಬೀಸುತ್ತಿತ್ತು. ನಾನು ಇಳಿಯಬೇಕಾದ ನಿಲ್ದಾಣವದು. ಹಳ್ಳಿಯ ಹೊಲದ ಕೆಲಸಕ್ಕಾಗಿ ಹೋಗ ಬೇಕಾದ ನಾನು ಕಚೇರಿಯ ಕೆಲಸ ತೀರಿಸಿಕೊಂಡು ರಾತ್ರಿಯ ಗಾಡಿಯನ್ನು ಹಿಡಿಯಬೇಕಾಗಿದ್ದಿತು. ಕೆಳಗಿಳಿದು ಸುತ್ತಲೂ ನೋಡಿದೆ ದೂರದಲ್ಲಿ ನಿಲ್ದಾಣದ ದೀಪ […]

#ಸಣ್ಣ ಕಥೆ

ಮೋಟರ ಮಹಮ್ಮದ

0

ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ ವರುಷಗಳಾದವು. ಹಳ್ಳಿಯ ಜೀವನ ನಮಗೆ ಈಗ ಒಗ್ಗ ಬೇಕಾದರೂ ಹೇಗೆ? ಶಹರದ ಬೆಡಗಿನ ಜೀವನದ ಮುಂದೆ ಹಳ್ಳಿಯ ಸರಳ ಜೀವನ ಸೊಗಸೆನಿಸುವದಾದರೂ ಸಾಧ್ಯವಿದೆಯೆ? ಈ ಸಿನೆಮಾ ಮಂದಿರಗಳು, […]

#ಸಣ್ಣ ಕಥೆ

ಗಂಗೆ ಅಳೆದ ಗಂಗಮ್ಮ

0

ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ ಪ್ರತೀಕಗಳೇ ಎಂದು ಬೇರೆ ಹೇಳಬೇಕಾಗಿಲ್ಲ. ಹಳ್ಳಿ ಹಳ್ಳಿಗಳಲ್ಲಿ ದಂತ ಕಥೆಗಳಂತೂ ಹಿಂದಿನ ಜನರ ತ್ಯಾಗ, ಶೌರ್ಯ ಗಳನ್ನು ಇಂದಿಗೂ ಹೊಗಳುತ್ತಿವೆ. ಇಂತಹ ಒಂದು ದಂತ ಕಥೆಯನ್ನು ನಾನು […]

#ಸಣ್ಣ ಕಥೆ

ಎರಡು…. ದೃಷ್ಟಿ!

ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ ಕಮರು, ಇನ್ನೂ ಒಂದು; ದೀಪಾವಳಿ ಯಲ್ಲಿ ಕೋಲಾಟವಾಡ ಹೋಗುವ ನನ್ನ ತಂಗಿಯು ಹಾಡು ಗಟ್ಟಿ ಮಾಡುವದು. ನನಗೆ ದೀಪಾವಳಿಯ ವಿಷಯಕ್ಕೆ ಲಕ್ಷ್ಯವಿರದಿದ್ದರೂ…. ಹುಡುಗರಿಗೆ….ದೀಪಾವಳಿ ಬರುವುದು ಹುರುಪಲ್ಲವೇ ? […]

#ಸಣ್ಣ ಕಥೆ

ನಿಂಗನ ನಂಬಿಗೆ

0

ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ – ತಾನು ಮಲೆನಾಡ ಮಗಳೆಂದು ! ಊರ ಸುತ್ತಲೂ ಎಲೆ ತೋಟಗಳು, ತೋಟಗಳಲ್ಲಿ ಯಾವಾಗಲೂ ಕಿರಚುವ ಯಾತದ ಬಾವಿಗಳು, ಗಿಡಗಳಲ್ಲಿ ಸುಳಿದು ಮೈಗೆ ತಂಪನ್ನುಂಟು ಮಾಡುವ ಗಾಳಿ – ಹೊಸೂರಿಗೆ ಒಂದು ಬಗೆಯ ಕಳೆ ತಂದು […]

#ಸಣ್ಣ ಕಥೆ

ಮೌನವು ಮುದ್ದಿಗಾಗಿ!

0

ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ ವಾಗಿ ನಿದ್ರೆ ಗೈದಿದ್ದರು. ಬದಿಯಲ್ಲಿಯೇ Bed Lamp ತನ್ನ ಕರ್ತವ್ಯವನ್ನು ಇನ್ನೂ ಮಾಡುತ್ತಿರುವೆನೆಂದು ಶಾಂತವಾಗಿ ಉರಿಯುತ್ತಲಿತ್ತು. ಕಾಲವು ಮಳೆಗಾಲವಾದ್ದರಿಂದ, ತಂಪು ತಗಲಬಾರದೆಂದು ಕಿಟಕಿಗಳೆಲ್ಲವನ್ನೂ ಇಕ್ಕಿದ್ದರು. ಹಂಚಿನ ಮೇಲೆ […]

#ಸಣ್ಣ ಕಥೆ

ಬೂಬೂನ ಬಾಳು

0

ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು, ಅವುಗಳ ಎಡ ಬಲಕ್ಕೆ ನೀಳವಾಗಿ ನಿಂತುಕೊಂಡ ಹುಣಿಸೆ -ಬೇವಿನ ಮರಗಳು, ಇವೆಲ್ಲ ದೂರದಿಂದ ಬರುವವರಿಗೆ ರಮ್ಯವಾಗಿ ಕಾಣುವುವು. ಊರ ಹತ್ತಿರವೇ ಹಾಲು ತುಂಬಿಟ್ಟಂತೆ ಒಪ್ಪುವ ಪುಟ್ಟ ಕೆರೆ; […]