ಗಾಳಿಪಟ

ಮೂಲ ತಿಳಿಯದ ಆಳ ಅರಿಯದ
ಮುಗ್ದ ಮನಸ್ಸುಗಳು ಕಲ್ಪನೆ
ಚಿಟ್ಟೆಗಳರಸಿ ವಿಸ್ಮಯಕೆ ಒಡ್ಡಿ
ಎಲ್ಲಿಂದಲೋ ಬಂದವರು ಒಂದಾದ
ಅಂಗಳ ಓಣಿ, ಶಾಲೆ, ಬಯಲು.

ಜತನದಲಿ ಒಂದಾದ ಗೆಳೆತನ
ಕಾಪಿಟ್ಟ ಭಾವಗಳ ಒಂದೊಂದಾಗಿ
ಅರಸಿ ಆರಿಸಿತಂದ ಕಡ್ಡಿ, ದಾರ ಬಣ್ಣ
ಬಣ್ಣದ ಕಾಗದಗಳು ಗೋಂದು
ಎಳೆಕರಗಳು ಉತ್ಸಾಹದ ಸ್ಪರ್ಶ ಬಯಲು.

ಉದ್ದ ಅಗಲಕೆ ಬಾಗು ಬಿಲ್ಲಿನ ಕಣೋಟ
ಮೂಡಿದವು ಪುಟ್ಟ ಪಾದದ ಗುರುತುಗಳು
ಒಡಲ ಸ್ನೇಹಿ ಹಾಸಿದ ನೀಲಿ ಭಾನು
ಭೂಮಿಯಲಿ ಅರಳಿದ ಅಂತರಂಗ ಸಿಂಚನ
ಮೃದು ಅಂಗೈಗಳು ಮುಖಮಾಡಿದ ಆಕಾಶ.

ಬಯಲು ಕಣಕಣ ಅನುರಣ ಮೃದು
ಗಾಳಿ ಬೀಸಿ ತೇಲಿ ಹಂಸಧ್ವನಿ ಅಚ್ಚರಿ
ಕಣ್ಣ ತುಂಬಿದ ಹಾರಾಟ ಭವ ಅನುಭವ
ಹಾರಿ ಹಾರಿ ಚಿಗುರು ಚಿಮ್ಮುವ
ಮೊಳಕೆ ಸಂಭ್ರಮ ಎದೆ ತಟ್ಟಿದ ಗಾಳಿಪಟ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವು ಎತ್ತರ ಏಕೆ ಬೆಳಯುವುದಿಲ್ಲ?
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೬೫

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys