ನಾವು ಎತ್ತರ ಏಕೆ ಬೆಳಯುವುದಿಲ್ಲ?

ನಾವು ಎತ್ತರ ಏಕೆ ಬೆಳಯುವುದಿಲ್ಲ?

ಭೌತಿಕವಾಗಿ ವಯಸ್ಸಾದಂತೆ ಬೆಳೆಯುತ್ತಲೇ ಹೋಗಿದ್ದರೆ ಈಗಿನ ಮನೆಗಳ ಬಾಗಿಲುಗಳು ೬೦-೭೦ ಅಡಿ ಎತ್ತರವಾಗಿರಬೇಗಿತ್ತು. ನಿಸರ್ಗದ-ದತ್ತವಾಗಿ ಮಾನವನ ಶರೀರದ ಬೆಳವಣಿಗೆಯ ನಿಯಂತ್ರಣವು ನಿಗದಿತ ವಯಸ್ಸಿಗೆ ನಿಂತು ಹೋಗುತ್ತದೆ. ಅತಿ ಕುಳ್ಳರಾಗಿ ಬೆಳೆದಿರುವ ಉದಾಹರಣೆಗಳು ಇವೆ.

ಆಗ ತಾನೆ ಜನಿಸಿದ ಶಿಶುಗಳು ಸಾಮಾನ್ಯವಾಗಿ ೫೦ ಸೆಂ.ಮೀ. ಉದ್ದವಿದ್ದರೆ ಮುಂದೆ ೨೦ ವರ್ಷಗಳಲ್ಲಿ ೧.೭ ಮೀಟರ್ ಬೆಳೆಯುತ್ತದೆ. ನಾವೇಕೆ ನಮ್ಮ ವಯಸ್ಸಿನ ಪರ್‍ಯಂತರ ಬೆಳಯುವುದಿಲ್ಲ? ಎಂಬ ಪ್ರಶ್ನೆ ಏಳದಿರದು. ಈ ಪ್ರಶ್ನೆಗೆ ಶರೀರ ವಿಜ್ಞಾನಿಗಳು ನಮ್ಮ ಶರೀರದಲ್ಲಿ ಬೆಳವಣಿಗೆಯನ್ನು ನಿಯಂತ್ರಿಸುವ “ಎಂಡೋಕೈನ್” ಗ್ರಂಥಗಳಿದ್ದು ಕುತ್ತಿಗೆಯಲ್ಲಿನ ಥೈರಾಯ್ಡ್‌ ಮಿದುಳಿಗೆ ಹೊಂದಿಕೊಂಡಿರುವ ಪಿಟ್ಯುಟರಿ, ಎದೆಯಲ್ಲಿ ಥೈಮಸ್ ಹಾಗೂ ಲೈಂಗಿಕ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳು ಮೂಳೆಯಲ್ಲಿನ ಗ್ರಂಥಿಗಳ ಬೆಳವಣಿಗೆ ಹತೋಟಿಯಲ್ಲಿಡುತ್ತವೆ. ಇವುಗಳ ಪ್ರಭಾವ ಹದ್ದು ಮೀರಿದರೆ ನಮ್ಮ ಕೈ ಕಾಲು ಭುಜ ಮುಂತಾದ ಅಂಗಗಳು ರಾಕ್ಷಸೋಪಾದಿಯಲ್ಲಿ ಬೆಳದು ಬಿಡುತ್ತವೆ. ಮತ್ತು ಇವು ಅಗತ್ಯಾನುಸಾರ ವರ್ತಿಸಿದ್ದರೂ ಮನುಷ್ಯ ಕುಳ್ಳಗಾಗುತ್ತಾನೆಂದು ವಿವರಣೆಗೊಡುತ್ತಾರೆ.

ಎಳೆಯತನದಲ್ಲಿ ಥೈಮಸ್ ಗ್ರಂಥಿಗಳ ಚಟುವಟಿಗೆ ತೀವ್ರವಾಗಿ ಸಾಗಿ ೧೩-೧೪ ರ ವಯಸ್ಸಿನಲ್ಲಿ ಕ್ಷೀಣಿಸುತ್ತವೆ. ನಂತರ ಲೈಂಗಿಕ ಗ್ರಂಥಿಗಳು ಕ್ರಿಯಾಶೀಲಗೊಳ್ಳುತ್ತವೆ. ಇದರ ಪರಿಣಾಮವಾಗಿ ವ್ಯಕ್ತಿಯ ಎತ್ತರ ೨೨ನೇ ವಯಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಒಂದು ವೇಳೆ ಲೈಂಗಿಕ ಗ್ರಂಥಿಗಳ ಉತ್ಪತ್ತಿ ಮೊದಲೇ ಆದರೆ ಎತ್ತರ ಬೆಳೆಯುವಲ್ಲಿ ಆಗುವುದಿಲ್ಲ. ಒಂದು ವೇಳೆ ಈ ಲೈಂಗಿಕ ಗ್ರಂಥಿಗಳು ಬಹಳ ತಡವಾಗಿ ಸೃಜಿಸಲಾರಂಭಿಸಿದರೆ ವ್ಯಕ್ತಿಗಳು ಬೃಹದಾಕಾರವಾದ ಎತ್ತರಕ್ಕೆ ಬೆಳೆಯುತ್ತಾರೆ. (ಥೈಮಸ್‌ನಿಂದಾಗಿ) ಒಂದು ಸಮೀಕ್ಷೆಯಂತೆ ೨೫ ನೇ ವಯಸ್ಸಿನ ನಂತರವೂ ವ್ಯಕ್ತಿಗಳು ಎತ್ತರ ಅತ್ಯಲ್ಪ ಪ್ರಮಾಣದಲ್ಲಿ ಏರುಮುಖವನ್ನೇ ಕಾಣುತ್ತದೆ. ಗರಿಷ್ಠ ಎತ್ತರವನ್ನು ನಾವು ತಲುಪುವುದು ೩೫-೪೦ ರ ಪ್ರಾಯದಲ್ಲಿ ವೈಶಿಷ್ಯವೆಂದರೆ ೪೦ ವರ್ಷ ವಯಸ್ಸಿನ ನಂತರ ನಾವು ಹತ್ತು ವರ್ಷಗಳಿಗೆ ೧೨ ಮಿಲಿ ಮೀಟರ್‌ನಂತೆ ಕುಳ್ಳರಾಗುತ್ತೇವೆ. ಕೀಲುಗಳಲ್ಲಿರುವ ‘ಕಾರ್ಟರೇಜ್’ ಎಂಬ ವಸ್ತು ಕುಗ್ಗುವುದೇ ಈ ನ್ಯೂನ್ಯತೆಗೆ ಕಾರಣವಾಗಿದೆ ಎಂದು ಶರೀರ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ನೇಹಿತರು
Next post ಗಾಳಿಪಟ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…