ಮಾನವನ ನಾಗರೀಕತೆಯ ಪ್ರಾರಂಭದಿಂದಲೇ ಸಮಯವನ್ನು ಅಳೆಯುವ ಗಡಿಯಾರಗಳ ಉಪಯೋಗವಾಗುತ್ತಲಿವೆ. ಪುರಾತನ ಅಳತೆಯ ವಿಧಾನಗಳು ಅಷ್ಟೇನೂ
ಕರಾರುವಾಕ್ಕಾಗಿರಲಿಲ್ಲ. ಇದೀಗ ಸಮಯವನ್ನು ಕರಾರುವಾಕ್ಕಾಗಿ ತೋರಿಸುವ ಅತ್ಯಂತ ಸುಧಾರಿತ ಗಡಿಯಾರಗಳು ರಚನೆಯಾಗುತ್ತಲಿವೆ. ಕರಾರುವಾಕ್ಕಾಗಿ ಸಮಯ ತೋರಿಸುವ ಅದ್ಭುತ ಗಡಿಯಾರವೆಂದರೆ ಅಣುಶಕ್ತಿ ಗಡಿಯಾರಗಳು. ಕ್ರಿ.ಶ. ೧೯೪೬ರಲ್ಲಿ ಡಾ|| ವಿಲ್ಲರ್ಟ್ ಫ್ರಾಂಕ್ ಎಂಬ ಒಬ್ಬ ಅಮೇರಿಕದ ಭೌತವಿಜ್ಞಾನಿಯು ಈ ಗಡಿಯಾರವನ್ನು ಸಂಶೋಧಿಸಿದ ವಾಷಿಂಗ್‌ಟನ್ ಡಿ.ಸಿಯ ನ್ಯಾಶನಲ್ ಬ್ಯೂರೋ ಆಫ್ ಸ್ಟ್ಯಾಂಡರ್ಡ್‌ನಲ್ಲಿ ಇಂತಹ ಮೊದಲ ಗಡಿಯಾರವನ್ನು ತಯಾರಿಸಿ ಇಡಲಾಯಿತು.

೧೭,೦೦,೦೦೦ ವರ್ಷಗಳ ಆವಧಿಯವರೆಗೆ ಒಂದು ಸೆಕೆಂಡಿನಷ್ಟು ಕರಾರುವಾಕ್ಕಾಗಿ ಈ ಗಡಿಯಾರ ಇರುತ್ತದೆ. ಸಮಯದ ಅಳತೆಯ ಕ್ಷೇತ್ರದಲ್ಲಿ ಇದು ಈಗಾಗಲೇ ಕ್ರಾಂತಿಯನ್ನುಂಟು ಮಾಡಿದೆ. ಪರಮಾಣುಗಳ ಕೆಲವು ಆಣುಗಳು ಉತ್ಪಾದಿಸುವ ಕಂಪನಗಳನ್ನು ಈ ಅಣುಶಕ್ತಿ ಗಡಿಯಾರವು ಅಳೆಯುತ್ತದೆ. ತೂಗಾಡುವಿಕೆಗಳ ಸಂಖ್ಯೆಯನ್ನು ಲೆಕ್ಕಮಾಡುವುದರಿಂದ ಸಮಯವನ್ನು ಅಳೆಯಲಾಗುತ್ತದೆ. ಹೆಚ್ಚಿನ ಅಣುಶಕ್ತಿಗಡಿಯಾರಗಳು ೧,೪೦೦ ರಿಂದ ೪೦,೦೦೦MHzವರೆಗೆ ಸೂಕ್ಷ್ಮ ಅಲೆಗಳ ಪ್ರದೇಶದಲ್ಲಿ ಆಗುವ ತೂಗಾಡುವಿಕೆಗಳ ಸಂಖ್ಯೆಯನ್ನು ಅಳತೆಮಾಡಿ ಕಾಲವನ್ನು ಕಂಡು ಹಿಡಿಯಲಾಗುತ್ತದೆ.

ಈ ರೀತಿಯ ಅಣುಶಕ್ತಿ ಗಡಿಯಾರಗಳ ಅಭಿವೃದ್ದಿಯಿಂದಾಗಿ ಪ್ರಪಂಚವು ೧೯೭೨ರ ಪ್ರಾರಂಭದಿಂದಲೂ ಅಣುಶಕ್ತಿ ಸಮಯಕ್ಕೆ ಬದಲಾಯಿಸಿಕೊಂಡಿತು. ಈಗ ಅಂತರಾಷ್ಟ್ರೀಯ ಒಪ್ಪಿಗೆಯಾಗಿರುವ ಅತಿ ಚಿಕ್ಕ ಸಮಯ ಘಟಕವು ಅಣುಶಕ್ತಿಸೆಕೆಂಡ್ ಆಗಿದೆ.

ಈ ಗಡಿಯಾರಗಳ ಅನುಕೂಲ ಮತ್ತು ಉಪಯೋಗ: ವಾತಾವರಣದ ಚಂಚಲತೆಯಿಂದಾಗಲಿ ಅಥವಾ ಭೂಮಿಯ ಸುತ್ತುವಿಕೆಯ ವ್ಯತ್ಯಾಸಗಳಿಂದಾಗಲಿ ಇದರ ಮೇಲೆ ಯಾವುದೇ ಪರಿಣಾಮ ಬೀರಲಾರದು ಏಕೆಂದರೆ ಭೂಮಿಯು ಪ್ರತಿವರ್ಷವೂ ಒಂದು ಸೆಕೆಂಡಿನಷ್ಟು ತನ್ನ ಸುತ್ತುವಿಕೆಯಲ್ಲಿನಿಧಾನವಾಗುತ್ತಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು