ಮರುಭೂಮಿ

ಆಕಾಶ ಸಾಕ್ಷಿಯಾಗಿ
ಸೂರ್ಯನೊಂದಿಗೆ ಕೂಡಿದ
ಹೊಟ್ಟೆ ಉಬ್ಬುಬ್ಬಿನ ಮರುಭೂಮಿಯ
ಬಸಿರು, ಸುಖವಾಗಿ ಪ್ರಸವಿಸಲೇ ಇಲ್ಲ
ಬಯಕೆಯಲಿ ಬೆಂದು
ಓಯಸಿಸ್ ನೀರು ಕುಡಿದು
ತನ್ನ ಸಿಟ್ಟಿಗೆ ತಾನೇ ಕ್ಯಾಕ್ಟಸ್ ಗಂಟಿಯಾಗಿ
ಮೈ ಪರಿಚಿಕೊಂಡು, ದಳ್ಳುರಿಗೆ
ಸಿಡಿದೆದ್ದ ಬಸುರಿನ ತುಣುಕುಗಳು
ಇಡಿಯಾಗಿ ಸುರಿಯುವ
ಮರಳ ದಿಬ್ಬಗಳು
ಜಾದೂಗಾರನ ಕಣ್ಕಟ್ಟಿನಂತೆ
ಬಿಸಿಲಿಗೆ ಬೆತ್ತಲೆಯಾಗಿ
ಬಿದ್ದ ಮರುಭೂಮಿ
ಸಾವಿರಾರು ವರ್ಷಗಳಿಂದ
ಹಾತೊರೆಯುತ್ತಿದೆ ಮೋಕ್ಷಕ್ಕೆ
ವಿದೇಶಿಗರ ಶಸ್ತ್ರಗಳ ಛೇದನದೊಳಗೆ
ಬಸಿರಿನಿಂದ ಪುಟಿದೆದ್ದ ಕೂಸು ಈ ‘ಪೆಟ್ರೋಲ್’
ಮರುಭೂಮಿಯ ಹಡಗು ‘ಒಂಟೆಗೆ’
ಈಗ ಮಾಲಿಕನ ಪ್ರೀತಿ ಇಲ್ಲ
ಅವನ ಕಾರುಗಳಡಿ ಸಿಕ್ಕು ಒದ್ದಾಡುತ್ತಿದೆ
‘ಓಯೊಸಿಸ್’ ಸುತ್ತಲಿನ ಪ್ರೇಮಿಗಳು
ಮನೆಗೆ ಮರಳು ಬೀಳಲು ಬಿಟ್ಟು
ದಿನ್ನೆಯ ಮೇಲಿಂದ ಹಾರುತ್ತಿದ್ದರೆ
ವಿದೇಶಿಗರು ಜಾರು ಬಂಡೆಯಾಡುತ್ತಿದ್ದಾರೆ.
*****

ಪುಸ್ತಕ: ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಣುಶಕ್ತಿಗಡಿಯಾರ
Next post ನಾನು ಎಲ್ಲಿ ಕರೆದೆ ನಿನ್ನ?

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…