ಕಲಾಕಾರರಿಗೆ, ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಬರಹಗಾರರಿಗೆ, ಚಲನಚಿತ್ರ ನಿರ್ಮಾಪಕರಿಗೆ ಈ ಕ್ಯಾಮರಾವು ಒಂದು ದೊಡ್ಡವರವಾಗಿದೆ. ಕ್ರಿ.ಶ. ೧೮೩೯ರಲ್ಲಿ ಮೊಟ್ಟಮೊದಲ ಬಾರಿ ಕ್ಯಾಮರವನ್ನು ಕಂಡುಹಿಡಿಯಲಾಯಿತಾದರೂ ಇದರಲ್ಲಿ ಅನೇಕ ಆವಿಷ್ಕಾರಗಳಾಗಿ ರೂಪಾಂತರಗಳಾಗಿ, ತಂತ್ರಗಳಾಗಿ ಹೊರಹೊಮ್ಮಿವೆ. ಅದರಲ್ಲೂ ೧೯೪೮ರಲ್ಲಿ “ಪೊಲರೈಯ್ಡ್ ಕ್ಯಾಮರಾ” ಎಂದು ಕರೆಯಲಾಗುವ ತಕ್ಷಣ ಚಿತ್ರ ಬಿಂಬವನ್ನು ತಯಾರಿಸಿಕೊಡುವ ಅದ್ಭುತ ಕ್ಯಾಮರ ಇದಾಗಿದೆ. ಇದು ವಿಜ್ಞಾನ ಜಗತ್ತಿಗೆ ನೂತನ ಕೊಡುಗೆಯಾಗಿದೆ. ಇದನ್ನು ಸಂಯುಕ್ತಸಂಸ್ಥಾನದ ‘ಎಡ್ವಿನ್ ಹರ್ಬರ್ಟ್’ ಎಂಬ ವಿಜ್ಞಾನಿ
ಕಂಡುಹಿಡಿದ. ಅಲ್ಲಿಯವರೆಗೆ “ಕಪ್ಪು-ಬಿಳುಪು ಕ್ಯಾಮರಾಗಳು ಸಾಕಷ್ಟು ಸಮಯದ ನಂತರ ಫಲಿತಾಂಶ ನೀಡುತ್ತಿದ್ದವು. ಆದರೆ ತತ್‌ಕ್ಷಣದಲ್ಲಿ ಅದು ಬಣ್ಣದಲ್ಲಿ ಫೋಟೋಗಳನ್ನು ನೀಡಬಲ್ಲ ಈ ಕ್ಯಾಮರಾ ದುಬಾರಿಯಾಗಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿದೆ.

ಮುಂದುವರೆದಂತೆ ೧೯೭೨ರಲ್ಲಿ ಎಡ್ವಿನ್. ಹೆಚ್. ಲ್ಯಾಂಡ್ ಎಸ್.ಎಕ್ಷ್-೭೦ ಎಂದು ಕರೆಯಲ್ಪಡುವ ತನ್ನ ಕ್ಯಾಮರದ ಸುಧಾರಿತ ‘ಜೇಬು ಮಾದರಿ’ಯನ್ನು ಸೊಸೈಟಿ ಆಫ್
ಪೋಟೋಗ್ರಾಫಿಕ್ ಸೈಂಟಿಸ್ಟ್ ಅಂಡ್ ಇಂಜಿನಿಯರ್ಸ್‌ಗೆ ಪರಿಚಯಿಸಿದ. ಇದರಲ್ಲಿ ಛಾಯಾ ಚಿತ್ರಣ ಕ್ರಿಯೆಯು ಸೂಕ್ಷ್ಮ ಎಲೆಕ್ಟ್ರಾನಿಕ್ ಪರಿಧಿಗಳಿಂದ ತಮ್ಮಷ್ಟಕ್ಕೆ ತಾವೇ ನಿಯಂತ್ರಿಸಲ್ಪಡುತ್ತವೆ. ೧೯೪೮ರಲ್ಲಿ ಎಡ್ವಿನ್ ಲ್ಯಾಂಡನು “ಪೊಲಾರ್ ವಿಷನ್” ಎಂದು ಕರೆಯಲ್ಪಡುವ ಒಂದು ತಕ್ಷಣ ಗೃಹಚಲನ ಚಿತ್ರ ವ್ಯವಸ್ಥೆಯನ್ನು ಕಂಡುಹಿಡಿದು ಪರಿಚಯಿಸಿದ. ಇಂತಹ ಕ್ಯಾಮರಗಳು ಅದ್ಭುತವಾಗಿದ್ದು ಪ್ರಪಂಚದಾದ್ಯಂತ ಹವ್ಯಾಸಿ ಛಾಯಾ ಚಿತ್ರಗಾರರಿಂದ ಬಳಕೆಯಾಗಲ್ಪಡುತ್ತವೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು