
* ಒಡಲಾಳದ ಚಿತ್ರ ಹೆಳವನಕಟ್ಟೆ ಗಿರಿಯಮ್ಮನ ‘ಚಂದ್ರಹಾಸ ಕಥೆ’, ‘ಸೀತಾ ಕಲ್ಯಾಣ’, ‘ಉದ್ಧಾಲಕನ ಕತೆ’ ಮುಂತಾದ ಕತನಕಾವ್ಯಗಳಲ್ಲೇ ಕಥನ ಪರಂಪರೆಯ ಕುರುಹುಗಳಿವೆ. ಇಂತಹ ಪರಂಪರೆಯನ್ನು ಪೋಷಿಸಿಕೊಂಡು ಬಂದ ದಾವಣಗೆರೆ ಜಿಲ್ಲೆಯಲ್ಲಿ ಶಕ್ತವಾಗಿ ಕಥೆ ಹೇಳಬ...
ನಿಮ್ಮ ನಾಡಾವುದು ? ಮೈಸೂರು. ನಿಮ್ಮೂರದಾವುದು ? ಮೈಸೂರು. ಕನ್ನಡದ ಕಣ್ಣದು, ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹದುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ ; ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ...
ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...
ಪ್ರೀತಿಯಾ ಗೆಳೆಯಾ, ಈ ದಿನ ಶಿಕ್ಷಕರ ದಿನಾಚರಣೆ. ಎಷ್ಟೊಂದು ಮೃದು ಹಸ್ತಗಳು ತಬ್ಬಿದವು. ಚಾಕಲೇಟು ಹೂವು ಪೆನ್ನುಗಳು. ಕೆಂಪಗೆ ಬೆಳ್ಳಗೆ ಅಂಗೈ ಪದಕು, ಕೆಂಪು ಬಳೆಗಳು ನೀಲಿ ರಿಬ್ಬನ್‌ಗಳು. ಮತ್ತೊಂದು ಹಸ್ತದಲಿ ಜಿಬ್ಬಾದ ಚಾಕಲೇಟು. ಒಂದರ ಎಳೆಗಂಪಿ...
ಕಲ್ಲ ಕಡೆದು ಕೂರಿಸಿ ಹಾಲು ಮೊಸರು ತುಪ್ಪ ಸುರಿದು ಅಭಿಷೇಕ ಮಾಡಿದರೆ ಕಳೆದು ಹೋಗಬಲ್ಲುದೆ ಕಲ್ಲಿನೊಳಗಿನ ಕಿಚ್ಚು ಮೈಗೆ ತೊಡಿಸಿದರೆ ವಜ್ರ ವೈಡೂರ್‍ಯ ಮಣ ಆಭರಣ ಬದಲಾಗಬಲ್ಲುದೆ ಒಡಲೊಳಗೆ ಹುಟ್ಟಿ ಬಂದಂಥ ಕೆಚ್ಚು *****...
ಕರುಣೆಯಿಡಿ ನಿಮ್ಮ ಈ ಕರುಳ ಕುಡಿಯ ಕರುಳು ಹರಿಯ ಬೇಡಿ. ಹೆಣ್ಣೆಂದಾಕ್ಷಣಕ್ಕೆ ನಾನು ಕಸವಲ್ಲ ಜೀವಿ ಎಸೆದು ಕೈ ತೊಳೆದು ಕೊಳ್ಳಲು. ಹಸೆಗೆ ಏರಿಸುವ ಮೊದಲು ಪರಾಮರ್ಶಿಸಿ,- ಮನೆ, ಮನಸುಗಳ ಸೋಸಿ. ಅಸಂಗತ ತೀರ್ಮಾನ ಮಾಡಿ ಸಂಬಂಧದ ಅರ್ಥ ಕೆಡಿಸಬೇಡಿ. ಸಂ...
ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ – ತಾಳಿಯ ನೊಗದ ಭಾರದಲ್ಲಿ ಮು...
“ಹಾಗಿದ್ದರೆ, ಪಾಪವೆಂದರೇನು ಗುರುಗಳೇ?” ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!...
ಎಂಥ ಚೆಲುವ ನನ್ನ ಹುಡುಗ ಹೇಗೆ ಅದನು ಹೇಳಲಿ ಹೇಳಲಾರೆ ನಾನು ಹಾಗೆ ಅದೂ ಸುಮ್ಮ ಸುಮ್ಮನೆ ಅವನು ಕೊಟ್ಟುದೇನು ಮೈಯೆ ಮನವೆ ಒಲವೆ ಚೆಲುವೆ ಅಲ್ಲ ಅಲ್ಲ ಹೃದಯ ಹಿಗ್ಗಿ ಹರಿಯುವಂಥ ಬಲವೆ ಅದು ದೊರೆತೇ ನಾನು ಈಗ ಜಗವನ್ನೇ ಗೆಲ್ಲುವೆ. ಮಂಕು ಬಡಿದ ಮಸಿ ಹಿ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...
















