೫೦ ವರ್ಷ ಬಳೆಸಬಹುದಾದ ಬ್ಯಾಟರಿ

೫೦ ವರ್ಷ ಬಳೆಸಬಹುದಾದ ಬ್ಯಾಟರಿ

ನಾವು ಬ್ಯಾಟರಿಗಳನ್ನು ಕೆಲವೇ ಕಾಲದವರೆಗೆ ಬಳಸಿ ಎಸೆದು ಬಿತುತ್ತೇವೆ. ಆದರೆ ೫೦ ವರ್ಷಗಳ ವರೆಗೆ ಬಾಳಿಕೆ ಬರಬಲ್ಲ ಬ್ಯಾಟರಿಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ. ಈ ವಿದ್ಯುತ್‌ಕೋಶ (cell) ಗಳನ್ನು ಬಳೆಸುವಲ್ಲಿ ಸಂಶೋಧನೆಯ ವಿವರ ಈ ರೀತಿ ಇದೆ. ರೇಡಿಯೋ ಆಕ್ಟಿವ್ (ವಿಕಿರಣ ಶೀಲ) ವಸ್ತುಗಳನ್ನು ಬಳಸಿ ತಯಾರಿಸಲಾಗುವ ಇಂತಹ ಬ್ಯಾಟರಿಯ ಬಳಕೆಯಿಂದ ದೀರ್ಘ ಅವಧಿಯವರೆಗೆ ಕಡಿಮೆ ಶಕ್ತಿಯನ್ನು ಬಳೆಸುವ ಗಡಿಯಾರದಂತಹ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶಕ್ತಿಯನ್ನು ಪೂರೈಸಬಹುದೆಂದು ಹೇಳಲಾಗಿದೆ. ಅತ್ಯಂತ ಕಡಿಮೆ ಮಟ್ಟದ ವಿಕಿರಣವನ್ನು ಹೊರ ಸೂಸುವ ನಿಕೆಲ್-63 (Nickel-93) ರಂತಹ ಐಸೋಟೋಪ್ (ಐಸೋಟೋಪ್ ಪರಮಾಣು ತೂಕಬೇರೆಯಾಗಿರುವ ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಒಂದೇ ಧಾತುವಿನ ಎರಡು ಅಥವಾ ಹೆಚ್ಚು ರೂಪಗಳು) ಬಳಸುವುದರಿಂದ ವಿಕಿರಣ ಶೀಲತೆ ದುಷ್ಟರಿಣಾಮಗಳನ್ನು ತಡೆಯಬಹುದೆಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ತಾಮ್ರದ ಹಾಗೂ ನಿಕೆಲ್‍ನ ಪದರವೊಂದನ್ನು ಹೊಂದಿರುವ ಈ ಬ್ಯಾಟರಿಗಳಲ್ಲಿ ನಿಕಲ್ ಐಸೋಟೋಪ್ ಹೊರಸೂಸುವ ವಿಕಿರಣದಿಂದ ಶಕ್ತಿಯ ಉತ್ಪಾದನೆಯಾಗುತ್ತದೆ. ಅತ್ಯಂತ ಚಿಕ್ಕಗಾತ್ರದಲ್ಲಿಯೂ ಕೂಡ ನಿರ್ಮಿತವಾಗಬಲ್ಲ ಇಂತಹ ಬ್ಯಾಟರಿಗಳು ನಿಕೆಲ್ ಐಸೋಟೋಪದ ಅರ್ಧಾಯುಷ್ಯ ಅವಧಿಯಾದ ನೂರು ವರ್ಷಗಳವರೆಗೂ ಕಾರ್ಯನಿರ್ವಹಿಸಬಲ್ಲವು. ಅದರ ನಿಗದಿತ ಪ್ರಮಾಣಶಕ್ತಿ ಕನಿಷ್ಟವೆಂದರೂ ಐವತ್ತು ವರ್ಷಗಳವರೆಗೂ ಯಾವ ತೊಂದರೆಯೂ ಇಲ್ಲದಂತೆ ಕಾರ್ಯನಿರ್ವಹಿಸುತ್ತದೆ.

ಆದರೆ ಇಂತಹ ಟ್ಯಾಟರಿಯು ಹೊರಸೂಸುವ ವಿಕಿರಣ ಮಾನವನ ಮೇಲೆ ಉಂಟು ಮಾಡಬಲ್ಲ ದುಷ್ಪರಿಣಾಮ ಎಷ್ಟರಮಟ್ಟದ್ದು ಎಂಬ ಬಗೆಗೆ ಇನ್ನು ಚರ್ಚೆ ನಡೆಯುತ್ತವೆ. ಇವು ಹೊರಸೂಸುವ ಅತ್ಯಲ್ಪ ಮಟ್ಟದ ವಿಕಿರಣದಿಂದ ಕೆಟ್ಟ ಪರಿಣಾಮವೇನು ಉಂಟಾಗಲಾರದೆಂದು ಈ ಬ್ಯಾಟರಿಯನ್ನು ಕಂಡು ಹಿಡಿದ ವಿಜ್ಞಾನಿಗಳು ಹೇಳಿದರೆ ಇನ್ನು ಕೆಲ ವಿಜ್ಞಾನಿಗಳು ವಿಕಿರಣ ಎಷ್ಟೇ ಕಡಿಮೆಯಾದರೂ ಅದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಖಂಡಿತವಾಗಿಯೂ ಉಂಟಾಗಲಿದೆ ಎನ್ನುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನಿ
Next post ಖೂನಿ

ಸಣ್ಣ ಕತೆ

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…