ಎಂತು ಬಿದ್ದೇಳುತಿಹುದು ನೋಡು ಬಿತ್ತರದ ವಾರಿಧಿಯು! ಎಲ್ಲಿಹರೀ ಮಂಥನವ ಗೆಯ್ವ ದೇವತೆಗಳು? ಬರಿಗಣ್ಣಿಗೆ ಕಾಣದೆ ಲಯವಾದರು ಬಯಲಿನಲ್ಲಿ: ಕಾಣುವದು ಮಂಥನವೊಂದು; ಅಲ್ಲುದಿಸಿದ ಚಂದ್ರಮನೊಂದು,- ಕಡಲಾಳವನುಗಿದು ಒಂದ ತುಂಬುವೆರೆ ತಾನು! ಮುಗಿಲು ಕದ್ದ ರತ್ನೇ೦ದುವ ಕಂಡು ಮತ್ತಂತರಾಳದಿ ಬಚ್ಚಿಡುವ ಹುಮ್ಮಸದಿ ಬಿಮ್ಮನ...

ಗುಂಡನಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಮೂರು ಮಕ್ಕಳು ತೆಳ್ಳಗೆ ಬೆಳ್ಳಗ್ಗಿದ್ದರೆ ನಾಲ್ಕನೇ ಮಗ ಕುಳ್ಳಗೆ ಕಪ್ಪಗಿತ್ತು. ಗುಂಡ ಕೇಳಿದ – “ನಿಜ ಹೇಳೆ, ನಾಲ್ಕನೇ ಮಗ ನಿಜವಾಗ್ಲೂ ನನ್ನವನೆ? ಹೆಂಡ್ತಿ ಹೇಳಿದ್ಲು –...

ಜೀವನದಲ್ಲಿ ಕೇವಲ ಹಸಿವು, ನೋವುಂಡು ಬೆಳೆದವಳು ಆಶಾಬೀ. ಹಸಿವಿನ ಕ್ರೂರ ಕೂಗನ್ನು ಕೇಳಲಾರದೇ ಒಂದು ದಿನ ತನ್ನೆರಡು ಹಸಳೆಗಳೊಡನೆ ನೀರಿನ ಪಾಲಾದಳು. ಆದರೆ, ಸಾವು ವಿಚಿತ್ರ. ಅಲ್ಲಿಯೂ ಅವಳಿಗೆ ಸಹಕರಿಸಲಿಲ್ಲ. ತನ್ನ ಕರುಳ ಕುಡಿಗಳ ಕತ್ತನ್ನು ಹಿಸುಕಿ...

ಬೇಕಿಲ್ಲವೆಂದು ಹಸುರೆಲ್ಲ ಕೀಳುವುದು ಕಳೆಯೆಂದು ಹಾಕುವುದೇನೆಲ್ಲ ಗೊಬ್ಬರ ಬೆಳೆಯಿಳುವರಿ ಸಾಲದೆಂದು ರೊಕ್ಕ ಸೇದಲು ಬಾವಿ ನೀರಿಗೆ ಬೋರು ಕೊರೆವುದೊಂದಾದ ಮೇಲೊಂದು ಪ್ರಕೃತಿಯೊಳೇನಿಹುದು? ಎಲ್ಲವನ್ನು ನಾವೆ ಮಾಡಿದೆವೆಂದು ಬಾಯ್ ಕೆರೆದರದುವೆ ಭಾರಿ ಕ...

(‘ದಿ. ಜಾನ್ ಕೆನಡಿ’ಯ ಕೊಲೆಯನ್ನು ನೆನೆದು) ಅಯ್ಯೋ! ಹತನಾದ ವಿಶ್ವ ಪ್ರೇಮಿ!! ಕಗ್ಗೂಲೆಯ ಕಾಳ ರಾತ್ರಿಯಲಿ ಜಗ ಬೆರೆಯಿತು…. ವಿಶ್ವ ಪ್ರಾಣದ ರಕ್ತ – ಕೋಡಿ ಹರಿಯಿತು ಶೋಕಾಂಬುಧಿಯ ತೆರೆ ಎದ್ದು ಮೊರೆಯಿತು! ಜವರಾಯ ನೀ ನನ್ನಿಕಾರನೆಂದ...

ಛಲೋ ಅಂದರ ನಡೀಬೇಕ ಸಿದ್ಧರಾಮನ ಪೂಜೆಯಾಗ ನಾನು ಕೂಡ ಹೋಗಬೇಕ || ನಾನು ಅಂದರೆ ನಾನೇ ಅಲ್ಲ ನೀನು ಅಂದರೆ ನೀನೇ ಎಲ್ಲಾ ಜೀವನ ಉಂಟು ಬೇವು ಬೆಲ್ಲ ತಮ್ಮಾಽಽಽ !! ಬೆಳಕಾಗೊವರೆಗೂ ಕುಣಿಬೇಕ ಸಂತೆಯೊಳ ಗೊಂದು ಮಾಳಿಗೆ ತರತರದ ಗೊಂಬಿ| ದೊಂಬಿಯಾಗ ಮಾರಾಟಮಾ...

ಪ್ರಥಮ ಪ್ರಣಯದ ಸುಖಾಗಮನದಿಂದ ಆನಂದಪರವಶವಾಗುವಂತೆ, ನಮ್ಮೂರಿಗೆ ವಿದ್ಯುದ್ದೀಪಗಳು ಬರುವುವೆಂಬುದನ್ನು ಕೇಳಿದ ಕೂಡಲೇ ಊರಿಗೆ ಊರೇ ಒಂದು ವಿಧದ ಸಂತೋಷಾತಿರೇಕದಿಂಷ ಕುಣಿದಾಡಿತು, ಆ ಉನ್ಮಾದದ ಕುಣಿದಾಟದಲ್ಲಿ ಎಲ್ಲೆಲ್ಲಿ ಏನೇನು ಜಾರಿಹೋಗಿ ಯಾರಿಗೆ ಎ...

ಈ ಬದುಕಿಗೆ ನೀನೆಷ್ಟು ಪ್ರೀತಿಸುವಿಯಲ್ಲ ಆದರೆ ಮರುಳೆ ಬದುಕು ಇದು ನಿನ್ನದಲ್ಲ ಆತ್ಮ ಸಾಕ್ಷಾತ್ಕಾರಕ್ಕೆ ಇದೊಂದು ಸದಾವಕಾಶ ಇದು ವ್ಯರ್ಥ ಮಾಡಿದರೆ ಏನೂ ಅರ್ಥವಿಲ್ಲ ತುತ್ತು ಅನ್ನಕ್ಕೆ ನಿತ್ಯ ಕಾದಾಡುವೆ ನಿನ್ನ ನಿಜ ರೂಪ ನೀನು ಮರೆತೆ ಬಿದ್ದು ಹೋಗ...

ಮನುಜ ಮಾನವ ಜನ್ಮ ದುರ್ಲಭ ಎಂದು ಕೇಳಿರುವೆ ನಾನು| ಈ ಮಾನವ ಜನ್ಮದಲಿ ಹುಟ್ಟಿರುವುದೇ ಪುಣ್ಯವೆಂದು ತಿಳಿದವನೊಬ್ಬನಲಿ ನಾನು|| ಮುನಿಜನೋತ್ತಮರು ಹೇಳಿರುವುದನೇ ಪಾಲಿಸುವೆನು ನಾನು| ಏನೇ ಬಂದರೂ ಹರಿಯಚರಣವ ನಂಬಿ ಬದುಕ ಸಾಗಿಸುವೆ ನಾನು|| ಸಕಲ ಪ್ರಾಣ...

ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ “ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?” ಎಂದ. “ಹುಂ, ಸುಲಭವಾಗಿರುತ್ತೆ” ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ “ನಿನಗೆ ಗಡ್ಡ ಮೀಸೆ ಹೆರದುಕೊಳ...

ಅಮಟೆ ಅಮಟೆ ಎಂದು ಕುಂಟೆಬಿಲ್ಲೆ ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ ಕಿಸಕ್ಕೆಂದು ಹನಿಯುತ್ತಾಳೆ. ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ ಕೂರಿಗೆ ಹೂಡಿ ಕಾಡುತ್ತಾಳೆ. ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ ಬೆವರಿಸುತ್ತಾಳೆ. ವಾಸ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...