ಮನುಜ ಮಾನವ ಜನ್ಮ ದುರ್ಲಭ

ಮನುಜ ಮಾನವ ಜನ್ಮ ದುರ್ಲಭ
ಎಂದು ಕೇಳಿರುವೆ ನಾನು|
ಈ ಮಾನವ ಜನ್ಮದಲಿ ಹುಟ್ಟಿರುವುದೇ
ಪುಣ್ಯವೆಂದು ತಿಳಿದವನೊಬ್ಬನಲಿ ನಾನು||

ಮುನಿಜನೋತ್ತಮರು ಹೇಳಿರುವುದನೇ
ಪಾಲಿಸುವೆನು ನಾನು|
ಏನೇ ಬಂದರೂ ಹರಿಯಚರಣವ
ನಂಬಿ ಬದುಕ ಸಾಗಿಸುವೆ ನಾನು||

ಸಕಲ ಪ್ರಾಣಿಗಳಿಗೆ ಲೇಸ ಬಯಸುವುದೇ
ಮನುಜ ಧರ್ಮದ ಮೂಲವು|
ಸತ್ಯ ಧರ್ಮದಿ ನಿತ್ಯ ನಿಯಮದಿ
ಕಾಯಕವ ಮಾಡುವುದೇ ಸಂಸ್ಕಾರವು||

ಕಾಲಹರಣವ ಮಾಡದೆಲೆ
ಸಮಯನಿಷ್ಟೆಯಲಿರುವುದೇ ಸತ್ಕಾರ್ಯವು|
ಉತ್ತಮೋತ್ತಮರ ಸಂಗವ ಮಾಡುತ
ದೈವಾನ್ವೇಷಣೆಯೇ ಪರಮ ಪುಣ್ಯ ಜೀವನವು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಗೆಹರಿಯದ ಪ್ರಶ್ನೆ
Next post ಬದುಕು ಇದು ನಿನ್ನದಲ್ಲ

ಸಣ್ಣ ಕತೆ

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಮರೀಚಿಕೆ

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

 • ಯಾರು ಹೊಣೆ?

  "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…