
ಹಿಂದಿರಲಿಲ್ಲ ಸಾವಯವವೆಂಬೊಂದು ಪಂಥ ಅಂದೆಲ್ಲವುಂ ಸ್ವಂತ ದುಡಿಮೆಯ ಹಂತ ಎಂತಕೀ ಕಠಿಣ ಬದುಕೆನುತಿಂದು ಪ್ರಗತಿ ಪಥ ಸಂಭ್ರಾಂತ ವೇಗದೊಳೆಲ್ಲ ಮರೆಯಾದೊಡಂ ಕಂಡೆನೆನುವರಲಾ ಕೊಂಡಕೂಳನೆ ಸಾವಯವವೆಂದೆನುತ – ವಿಜ್ಞಾನೇಶ್ವರಾ *****...
ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ ಮಂತ್ರಿ ಪದ ಬರಲಿಲ್ಲ ಜನಮತಗಳಿಸಿ ನಿನ್ನ ಮರ್ಯಾದೆ ಉಳಿಸಿದರೂ ಪದ ಪಡೆಯುವ ಆಸೆ ಭರವಸೆ ಇದ್ದರೂ ಮೇಲಿನವರು ಕಡೆಗಣಿಸಿದರು. ಇದು ನಿನಗೆ ಸಂದ ಎಣಿಸದೆಯೆ ಬಂದ ಬಹುಮಾನ! ಅಹವಾಲು ತಲುಪಲಿಲ್ಲ ಒಲೈಕೆ- ಫಲಿಸ...
ಓಂ ಬ್ರಹ್ಮಾನಂದಂ ನಾದ ರೂಪಂ ಆನಂದಂ ಸತ್ಯ ನಿತ್ಯ ಸ್ವರೂಪಂ ನಮೋ ನಮೋ ಭುವನ ಮನೋಹರೀ ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ ಜೀವದುಸಿರ ನರನಾಡಿಗಳಲಿ ನಿನ್ನ ಆವಾಹನೆ ||ತಾಯಿ|| ನೀ ಬಾ ಎನ್ನ ಹೃದಯದಾಲಯಕೆ ನೆಲೆಸು ಬಾ ಹರಸು ಬಾ ||ತಾಯಿ|| ಬಾ ತಾಯೆ ಮಂ...
ಪಕ್ಕದ ಬೀದಿ ಪುರಾಣಿಕರು ಜೋತಿಷ್ಯ ಶಾಸ್ತ್ರದಲ್ಲಿ ಭಾರಿ ಪ್ರವೀಣರು. ಯಜ್ಞ ಯಾಗಾದಿಗಳು, ಹೋಮ, ವ್ರತಾಚರಣೆ ಯಾವುದೇ ಇರಲಿ-ಯಾರ ಮನೆಯಲ್ಲೇ ಆಗಲಿ ಪುರಾಣಿಕರು ಅಲ್ಲಿ ಹಾಜರು. ಸುತ್ತಮುತ್ತಲ ಊರಿನವರೆಲ್ಲಾ ಪುರೋಹಿತ ಕಾರ್‍ಯಕ್ಕೆ ಪುರಾಣಿಕರನ್ನೇ ಅವಲ...
ಹರಿ ನೀನು ನನ್ನ ಅಮರತ್ವದ ಸಿರಿ ನಿನ್ನೊಂದಿಗೆ ಜನ್ಮ ಜನ್ಮ ಬಂಧ ನಿನ್ನ ತೊರೆದು ಇನ್ನೊಂದು ಬಯಸಿದರೆ ಅದೆಲ್ಲವೂ ಎನ್ನ ಭವದ ಬಂಧ ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು ಅದುವೆ ಎನಗಿರಲಿ ದಿನರೋಜು ಸತ್ಯದತ್ತ ವಾಲಿ ಅಂತರಂಗಕ್ಕೆ ಜಾರಿ ನಾ ಮರೆ...
ಕಟ್ಟುವೆವು ನಾವು ಕನ್ನಡ ನಾಡೊಂದನು ಶಾಂತಿಯ ಬೀಡೊಂದನು|| ಉಳಿಸಿ ಬೆಳೆಸುವೆವು ನಾವು ಕನ್ನಡ ಸುಸಂಸ್ಕೃತಿಯ ಕನ್ನಡ ನಾಡೊಂದನು|| ಏನೇ ಬರಲಿ ಎಂತೇ ಇರಲಿ ಕನ್ನಡ ನಮ್ಮಯ ಉಸಿರಾಗಲಿ| ಕನ್ನಡಕಾದರೆ ಏನೇ ತೊಂದರೆ ಒಗ್ಗಟ್ಟಲಿ ಮೊಳಗಲಿ ಕನ್ನಡಕಹಳೆ| ಕನ್ನ...
ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ...
೧ ಭಾರಿ ಭಾರಿ ಬದುಕಬೇಕೆಂದು ಬಾವಿ ತೆಗೆಯಲು ಹೋದೆ ಗುದ್ದಲಿ ಹಿಡಿದು ಜಜ್ಜುಗಲ್ಲೆಲ್ಲ ತೆಗೆದೆ ಅಗೆಯುತ್ತ ಅಗೆಯುತ್ತ ಹೋದೆ; ತಡೆಯೊಡ್ಡುವ ಬಂಡೆಗಳಿಗೆ ಡೈನಮೆಂಟಾದೆ ಇಳಿಯುತ್ತ ಇಳಿಯುತ್ತ ಇಳಿದೆ. ೨ ನಿಯತ್ತಿನ ನೇಗಿಲ ಯೋಗಿ ಯಾಗಿ ಬೀಜ ಬಿತ್ತಿ ನೀರ...
ಒಬ್ಬ ಹುಡುಗಿ ಒಂದು ತಾಂಬೂಲ ಕರಂಡಕದಲ್ಲಿ ಕೆಲವು ವೀಳ್ಯಗಳನ್ನಿಟ್ಟು ಕೊಂಡು ಶಿವದಾಸ-ಗುಲಾಮ ಆಲಿಯವರು ಕುಳಿತಲ್ಲಿಗೆ ಬಂದಳು. ಆ ಬಾಲಿಕೆ ಹನ್ನೊಂದು- ಹನ್ನೆರಡು ವರ್ಷದವಳಾಗಬಹುದು. ಅಪ್ಸರ ಕನ್ಯೆಯಂತೆ ಅವಳು ಅನುಪಮೇಯ ಸುಂದರಿಯಾಗಿದ್ದಳು. ಆ ಹುಡುಗ...
ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ || ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ || ಗರ್ಭದಿಂದ ಹೊರಬಂದು ಕೂಸು ತ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















