ಮೊಳಕೆ ಬಂದ ಬೀಜವೊಂದು ಹುಳುವು ಹತ್ತಿ ಬೆಳೆಯದಾತು ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು. ಮಳೆಯು ಭರನೆ ಬಂದಿತೊಮ್ಮೆ ಹುಳುವು ಅದುರಿ ಬಿದ್ದು ಹೋತು ; ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು. ಬೆಳೆಯುತಿದ್ದ ಬೀಜ ಕಂಡು ಹುಳುವು ಹೆದರಿ ಗದರಿಕೊಂಡು ಗಳನೆ ನುಂಗಲೆಂದು ತನ್ನ ಕೈಯ ಚಾಚಿತು. ಬೆಳೆವ ಭರದಲಿದ್ದ...

ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ ...

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿಜಯನಗರ ಸಾಮ್ರಾಜ್ಯ ಆರಂಭದಲ್ಲೇ ಉತ್ತರ ಭಾರತದ ಕಳಿಂಗ ದೇಶದವರೆಗೂ ಸಿದ್ಧಿ ಪ್ರಸಿದ್ಧಿ ಹೊಂದಿತ್ತು! ವಿಜಯನಗರ ಸಾಮ್ರಾಜ್ಯವನ್ನು ತೌಳವ ನರಸನಾಯಕ ಅಳುತ್ತಿದ್ದ. “ಅಧಾರ್ಮಿಕರಾದ ಮಹಾರಾಜರು ಎಂದೂ ಶ...

ಹಾಲಿನ ರುಚಿಯಿಲ್ಲ ಮೊಸರಿಗೆ ಮೊಸರಿನ ರುಚಿಯಿಲ್ಲ ಮಜ್ಜಿಗೆಗೆ ಮಜ್ಜಿಗೆಯ ರುಚಿಯಿಲ್ಲ ಬೆಣ್ಣೆಗೆ ಬೆಣ್ಣೆಯ ರುಚಿಯಿಲ್ಲ ತುಪ್ಪಕ್ಕೆ ದಿನ ಒಂದರಲ್ಲಿ ರುಚಿಗಳ ಹಲವು ಬಗೆ ಪ್ರತಿ ಹೆಜ್ಜೆಯಲ್ಲು ಕಾಲದ ಕುಹಕ ನಗೆ *****...

ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ ಹುಳ ಹಿಡಿಯುವುದಿಲ್ಲ ಟಿಪ್ಪಣಿ, ಚರ್ಚಿಸಿಗಳಲಿ ಕಡತ ಬೆಳೆವುದಲ್ಲ ಕಡೆಗೂ ಹತ್ತನೆ ತಿಂಗಳ...

ನಮ್ಮೂರ ಜೋಕುಮಾರ, ‘ಮೊಂಡಣ್ಣ’ ನೆಂಬ ಹೆಸರಿನ ಹನುಮಂತ ಒಳ್ಳೆ, ತೇಗ, ತೇಗದ ಹಲಗೆಯಾಗಿದ್ದ. ಎಲ್ಲರದೂ ಒಂದು ತಿಟ್ಟೆವಾದರೆ ಅವನದೇ ಒಂದು ತಿಟ್ಟವಾಗಿತ್ತು. ಒಂದೇ ಊರಿನವರಾದ ನಾವು ಕಳೆ, ಮಳೆ, ಸೌದೆ, ಸೊಪ್ಪು, ನೀರು, ನಿಡಿಗೆಂದು ಅಡ್ಡಾಡುವಾಗ ದಿನದ...

ನನಗೆ ಇಬ್ಬರು ಮಕ್ಕಳು ಒಬ್ಬ ಈಶ್ವರ ಒಬ್ಬ ಅಲ್ಲಾ ಎಲ್ಲಿರುವೆಯೋ ಕಂದಾ? ಇಲ್ಲಮ್ಮಾ ಕಾಬಾದಲ್ಲಿ ಕಲ್ಲಾಗಿ…. ಕಲ್ಲಾಗಿ ?! ಕಲ್ಲಾಗಿಯೇ ಇರದಿರು ಕಂದಾ ಸದಾ ಓಗೊಡು ಕರುಳ ಕರೆಗೆ; ಕರಗು ಅಷ್ಟಿಷ್ಟು ಕಂಗೆಟ್ಟವರ ಕಣ್ಣೀರೊರೆಸು ದರವೇಶಿಗಳಿಗೆ ದಿ...

ಹೂವಿನ ಹಾರಗಳ ಗಮಗಮ ಊದುಕಡ್ಡಿಯ ಘಾಟು ಬೆಂಕಿಯಲ್ಲಿ ಉರಿದ ಕಟ್ಟಿಗೆಗಳ ಕಮರು ವಾಸನೆ ಸುಟ್ಟ ಹೆಣಗಳ ಕಮಟು ವಾಸನೆ ಬೂದಿಯ ಹಸಿಬಿಸಿ ವಾಸನೆ ಚೆಲ್ಲಾಡಿದ ತೆಂಗಿನಕಾಯಿ ನೀರಿನ ಮುಗ್ಗಲು ವಾಸನೆ ಸುಂಯ್ಯನೆ ಬೀಸುವ ಗಾಳಿ ಹೊತ್ತು ತರುವ ಗಂಜಲು ವಾಸನೆ ಎಲ್...

ನಮ್ಮ ಊರಿನ ಅಕ್ಕರೆಯ ಸಕ್ಕರೆ ಗೊಂಬೆ ಕಾಂಕ್ರೀಟ್ ಕಾಡು ಬೆಂಗಳೂರು ಸೇರುತಿಹಳು ಮಲೆನಾಡು ಮೈಸಿರಿ ಉದ್ಯಮಿಯೊಬ್ಬನ ಕೈಹಿಡಿಯುತಿಹಳು ಇಲ್ಲಿನ ನಯ ವಿನಯಗಳ ಬಿತ್ತಲಲ್ಲಿಗೆ ನಡೆಯುತಿಹಳು ಪ್ರೀತಿಯ ಸಿಂಚನ ನೀಡುವಳು ಅಲ್ಲಿನ ಮರ ಗಿಡ ಬಳ್ಳಿಗಳಿಗೆ ನಮ್ಮೂ...

ಸದಾ ಉತ್ಸವ ಜಗದೊಳಗೆ- ಉಳುವ, ಬಿತ್ತುವ, ಟಿಸಿಲೊಡೆಯುವ ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ! ಹಸಿರು ತೋರಣ, ಋತುಗಳ ಮೆರವಣಿಗೆ, ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ, ಸೂರ್‍ಯನ ಬಿಸಿ, ಚಂದಿರನ ತಂಪು ಹೇಗೆ ಸೃಷ್ಟಿಸಿದೆ ಇದನ್ನೆ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...